Issue 10
http://qsaudi.com/sanmarga.com/ebook/
ಭಯೋತ್ಪಾದಕರ ಬಗ್ಗೆ; ಅವರ ಉಡುಪು, ಅಡಗುತಾಣ, ಸಂಚುಗಳ ಕುರಿತಂತೆ ಖಾಲಿದ್ ಮುಜಾಹಿದ್ ಮತ್ತು ಲಿಯಾಕತ್ ಷಾ ಎಂಬಿಬ್ಬರು ವ್ಯಕ್ತಿಗಳು ಈ ದೇಶದ ಮುಂದೆ ಕೆಲವು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ಪ್ರಯತ್ನದಲ್ಲಿ ಖಾಲಿದ್ ಮೃತಪಟ್ಟು ಷಾ ಸುರಕ್ಷಿತವಾಗಿ ಮನೆ ತಲುಪಿದ್ದಾನೆ. ಪ್ರಕರಣ ಎಷ್ಟು ಗಂಭೀರವಾದುದೆಂದರೆ, ಮೇ 20ರಂದು ದಿ ಹಿಂದೂ ಇವರ ಮೇಲೆ ಸಂಪಾದಕೀಯ ಬರೆದಿದೆ. ಉತ್ತರ ಪ್ರದೇಶ ಸರಕಾರವು ಖಾಲಿದ್ನ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿಕೊಟ್ಟಿದೆ. ಪೆÇಲೀಸರು ಮತ್ತು ಹಿರಿಯ ಅಧಿಕಾರಿಗಳ ಸಹಿತ 42 [...]
ಚಿಯರ್ತ ಗರ್ಲ್ಸ್ ಗ ಳು; ಬೌಂಡರಿ, ಸಿಕ್ಸರ್ಗಳು; ಧೋನಿ, ಕೋಹ್ಲಿಗಳೇ ಸುದ್ದಿ ಮಾಡುತ್ತಿರುವ ಐಪಿಎಲ್ ಕ್ರಿಕೆಟ್ಗೆ ಪರ್ವೇಝ್ ರಸೂಲ್ ಅನ್ನುವ ಅಪರಿಚಿತ ಯುವಕನೊಬ್ಬ ಪುಟ್ಟದೊಂದು ತಿರುವು ಕೊಟ್ಟಿದ್ದಾನೆ. ಸಮಾಜದ ಬಗ್ಗೆ ಕಳಕಳಿಯುಳ್ಳ ಯಾರಿಗೆ ಆಗಲಿ, ಈ ತಿರುವು ಬಹಳ ಮಹತ್ವಪೂರ್ಣವಾದದ್ದು. ಮುಂದಿನ ದಿನಗಳಲ್ಲಿ ಗಂಭೀರ ಚರ್ಚೆಯೊಂದರ ಹುಟ್ಟಿಗೆ ಕಾರಣವಾಗುವಷ್ಟು ಪ್ರಭಾವಶಾಲಿಯಾದದ್ದು. ಇಷ್ಟಕ್ಕೂ; ತೆಂಡುಲ್ಕರ್, ಸೆಹ್ವಾಗ್ರಂತೆ ಈತನೂ ಓರ್ವ ಕ್ರಿಕೆಟಿಗನೇ. ಆದರೆ, ಅವರಂತೆ ಕ್ರಿಕೆಟಿಗಾಗಿ ಮೌಲ್ಯವನ್ನು ಕೈ ಬಿಡಲು ತಾನು ಸಿದ್ಧವಿಲ್ಲ ಎಂದು ಘೋಷಿಸಿದ್ದಾನೆ. ಐಪಿಎಲ್ ಅಂಕಪಟ್ಟಿಯಲ್ಲಿ [...]
ಪ್ರವಾದಿ ಮುಹಮ್ಮದ್ರವರು(ಸ) ದಿಕ್ರ್ ಮಾಡುವಾಗ ಜಪಮಣಿಗಳನ್ನು ಉಪಯೋಗಿಸುತ್ತಿದ್ದರೇ? ಮಾಡಿರದಿದ್ದರೆ ಜಪಮಣಿಗಳನ್ನು ಉಪಯೋಗಿಸಿ ದಿಕ್ರ್ ಮಾಡುವ ಪದ್ಧತಿ ಎಂದಿನಿಂದ ರೂಢಿಗೆ ಬಂದಿದೆ? ತಿಳಿಸಿ. ಪ್ರವಾದಿ(ಸ) ದಿಕ್ರ್ ಮಾಡುವಾಗ ಜಪಮಣಿಗಳನ್ನು ಉಪಯೋಗಿಸುತ್ತಿರ ಲಿಲ್ಲ. ತಸ್ಬೀಹ್ ಅಥವಾ ಜಪಮಾಲೆ ತಿರುಗಿಸುವ ಸಂಪ್ರದಾಯವು ಯಹೂದಿ ಮತ್ತು ಕ್ರೈಸ್ತ ವಿದ್ವಾಂಸರದ್ದಾಗಿದೆ. ಅದುವೇ ಬಳುವಳಿಯಾಗಿ ನಮ್ಮ ಸಮುದಾಯಕ್ಕೆ ನುಸುಳಿಕೊಂಡಿರಬೇಕು. ಈ ಧರ್ಮವನ್ನು ಆರಾಧನೆ, ಜಪ-ತಪ, ದಿಕ್ರ್-ತಸ್ಬೀಹ್ಗಳಿಗೆ ಮಾತ್ರ ಸೀಮಿತವೆಂದು ಭಾವಿಸಿಕೊಂಡಿರುವವರ ಕೈಯಲ್ಲಿ ಇದು ಸಾಮಾನ್ಯವಾಗಿ ಗೋಚರಿಸುತ್ತದೆ. ಆದರೆ ವಾಸ್ತವದಲ್ಲಿ ಪ್ರವಾದಿ(ಸ) ಇಂತಹ ಸಂಪ್ರದಾಯವನ್ನು ಸಮುದಾಯಕ್ಕೆ [...]
ಇತ್ತೀಚಿನ ದಿನಗಳಲ್ಲಿ ನಡೆಸಲಾಗುತ್ತಿರುವ ಕರಾವಳಿ ಉತ್ಸವಗಳಲ್ಲಿ ಭಾರೀ ಜನಸಂದಣಿಯಿರುವಾಗ ಮುಸ್ಲಿಮ್ ಯುವಕ, ಯುವತಿಯರು ಭಾಗವಹಿಸುವುದು ಸರಿಯೆ? ಇಲ್ಲಿ ಸ್ತ್ರೀ-ಪುರುಷರು ಪರಸ್ಪರ ಮೈ ತಾಗಿಸಿಕೊಂಡು ನಡೆಯುವಂತಹ ಅನಿವಾರ್ಯ ಪರಿಸ್ಥಿತಿಯಿರುತ್ತದೆ. ಅದೇ ರೀತಿ ಬೃಹತ್ ವೃತ್ತಾಕಾರದ ಜೋಕಾಲಿಗಳಲ್ಲಿ ಕೂಡಾ ಯುವಕ-ಯುವತಿಯರು ಒಟ್ಟಾಗಿ ಕುಳಿತುಕೊಳ್ಳುತ್ತಾರೆ. ಒಂದು ಹದೀಸ್ನಲ್ಲಿ, ಪೇಟೆಗಳು ಶೈತಾನನ ವಾಸ ಸ್ಥಳಗಳಾಗಿವೆ. ಮಸೀದಿಗಳು ಅಲ್ಲಾಹನ ಇಬಾದತ್ನ ಮನೆಗಳಾಗಿವೆಯೆಂದು ಹೇಳಲಾಗಿದೆ. ಆದ್ದರಿಂದ ಅಂತಹ ಉತ್ಸವಗಳಲ್ಲಿ ಭಾಗವಹಿಸಿದವರು ಅಲ್ಲಾಹನ ಕೋಪಕ್ಕೆ ಬಲಿಯಾಗಲಾರರೇ? ‘ಪೇಟೆಗಳು ಶೈತಾನನ ವಾಸಸ್ಥಳವಾಗಿವೆ’ ಯೆಂದರೆ ಪೇಟೆಗಳಲ್ಲಿ ಮನುಷ್ಯನ [...]
ಪ್ರಸಿದ್ಧ ಚಿಂತಕ ಅರಸ್ತೂ ಹೀಗೆ ಹೇಳಿದ್ದರು, ನನಗೆ ನೂರು ಒಳ್ಳೆಯ ತಾಯಂದಿರನ್ನು ನೀಡಿರಿ. ನಿಮಗೆ ನಾನು ಒಂದು ಉತ್ತಮ ರಾಷ್ಟ್ರವನ್ನು ನೀಡುತ್ತೇನೆ. ತಾಯಿಯ ಕೈಯಲ್ಲಿ ರಾಷ್ಟ್ರ ನಿರ್ಮಾಣದ ಕಡಿವಾಣ ಇರುತ್ತದೆ. ಆದರೆ ಇಂದು ಇಂತಹ ತಾಯಂದಿರ ಮತ್ತು ಚಿಂತನೆಗಳ ಕೊರತೆಯ ಅನುಭವವಾಗುತ್ತಿದೆ. ಜೀವನ ಮಟ್ಟ ಎತ್ತರಕ್ಕೇರಿದಂತೆ ಭೌತಿಕ ಪ್ರತಿ ಸ್ಪರ್ಧೆಗಳು ಕೂಡಾ ತನ್ನ ಚರಮ ಸೀಮೆಯನ್ನು ತಲುಪಿದೆ. ಅದರ ದುಷ್ಪ್ರಭಾವ, ಒತ್ತಡ ಇಂದಿನ ಜೀವನ ಶೈಲಿ, ಆತ್ಮಹತ್ಯೆಯ ಹೆಚ್ಚಳದ ರೂಪದಲ್ಲಿ ನಮ್ಮ ಮುಂದೆ ನಿಂತಿದೆ. ಇಂದಿನ [...]
(ಕಳೆದ ಸಂಚಿಕೆಯಿಂದ) ಬೇರೆ ದೇಶಗಳಿಗೆ ಹೋದಾಗ ನಾನೋರ್ವ ಜಪಾನಿ ಮಹಿಳೆ ಯಾದುದರಿಂದ ನನ್ನನ್ನು ಜನರು ಸಾರ್ವಜನಿಕ ಸ್ಥಳಗಳಲ್ಲಿ ದಿಟ್ಟಿಸಿ ನೋಡುತ್ತಿದ್ದರು. ಇದರಿಂದ ನನಗೆ ಚಡಪಡಿಕೆ ಉಂಟಾಗು ತ್ತಿತ್ತು. ಈಗ ನಾನು ಹಿಜಾಬ್ ಧರಿಸುತ್ತಿರುವುದರಿಂದ ನನಗೇ ಸುರಕ್ಷಿತತೆಯ ಭಾವನೆ ಉಂಟಾಯಿತು. ಬೇರೆಯವರ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಯಿತು. ಇದು ನನ್ನ ಸ್ವಾಭಾವಿಕ ಮತ್ತು ಸ್ವಇಚ್ಛೆಯ ವಸ್ತ್ರಧಾರಣೆಯಾಗಿತ್ತು. ಯಾರೂ ನನ್ನನ್ನು ಈ ಬಗ್ಗೆ ಒತ್ತಾಯಿಸಿರಲಿಲ್ಲ. ಇಸ್ಲಾಮಿಗೆ ಸಂಬಂಧಿಸಿ ನಾನು ಓದಿದ ಪ್ರಥಮ ಪುಸ್ತಕದಲ್ಲಿ ಹಿಜಾಬ್ನ ಕುರಿತು ಬಹಳ ಸರಳವಾಗಿ ವಿವರಿಸಲಾಗಿತ್ತು. [...]
(ಕಳೆದ ಸಂಚಿಕೆಯಿಂದ) ಗಾಝಾ ಮತ್ತು ಈಜಿಪ್ಟ್ನ ಗಡಿಭಾಗದ ರಫಾದಲ್ಲಿ ಭೂಮಿಯನ್ನು ಕೊರೆದು ಮಾಡಿದ ಮಾರ್ಗಗಳು ಸುರಂಗ ಮಾರ್ಗಗಳಾಗಿವೆ. ದಿಗ್ಬಂದ ನದ ಪ್ರಹಾರದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅವರು ಕಂಡು ಕೊಂಡ ಹಾದಿಯದು. ಈ ರಫಾದಲ್ಲಿ 800ರಿಂದ ಸಾವಿರದಷ್ಟು ಸುರಂಗ ಮಾರ್ಗಗಳಿವೆ ಎಂದು ಹೇಳಲಾಗುತ್ತದೆ. ಪಾರಾಸಿಟಮಾಲ್ ಮಾತ್ರೆಯಿಂದ ಹಿಡಿದು ಕಲಾಸ್ನಿಕೋವ್ ಗನ್ನು ಗಳನ್ನು ಈ ಮೂಲಕ ಫೆಲೆಸ್ತೀನಿಯರು ತರಿಸು ತ್ತಿದ್ದಾರೆ. ಆದ್ದರಿಂದ ಈ ಸುರಂಗ ಮಾರ್ಗಗಳನ್ನು ಗಾಝಾ ನಿವಾಸಿಗಳ ‘ಲೈಫ್ಲೈನ್’ ಎಂದೇ ಮಾಧ್ಯಮಗಳು ವಿಶ್ಲೇಷಿಸುತ್ತವೆ. ಇಸ್ರೇಲಿಗಳ ತೀವ್ರ ಆಕ್ರಮಣ ಇರುವಾಗಲೂ [...]
(ಕಳೆದ ಸಂಚಿಕೆಯಿಂದ) ಜಮಾಲ್ ಹಸನ್ ಭಾರೀ ಸಂತೋಷ ಭರಿತ ರಾಗಿದ್ದರು. ಮುಖದಲ್ಲಿ ತುಂಟ ನಗೆ ಲಾಸ್ಯ ವಾಡುತ್ತಿತ್ತು. ಸಿಗರೇಟು ಸೇದುತ್ತಾ ಅತ್ತಿಂದಿತ್ತ ನಡೆಯುತ್ತಿದ್ದರು. ಅವರೋರ್ವ ಛಾಯಾಚಿತ್ರಗಾಹಕ ಮತ್ತು ಚಿತ್ರ ಕಲಾವಿದ. ತನ್ನಲ್ಲಿರುವ ವಿಶೇಷ ಚಿತ್ರಗಳನ್ನು ಸಂಗ್ರಹಿಸಲು ಫ್ರೇಮುಗಳಿಗಾಗಿ ಅವರು ಕೈರೋಗೆ ತೆರಳಿದ್ದರು. 26ರ ಹರೆಯದ ಅವರು ತನ್ನೊಂದಿಗೆ ಪತ್ನಿ ಹಾಗೂ ಪುಟ್ಟ ಮಗುವನ್ನೂ ಕರೆದೊಯ್ದಿದ್ದರು. ರಫಾದ ಸುಡು ಬಿಸಿಲಿನ ತಾಪಕ್ಕೆ ಈಜಿಪ್ಟ್ನ ಸೈನಿಕರು ಕೂಡಾ ಸುಸ್ತಾಗಿದ್ದರೂ ಈ ಯುವಕ ಮಾತ್ರ ಬಿಸಿಲಿನ ತಾಪಕ್ಕೆ ಕುಗ್ಗಿರಲಿಲ್ಲ. [...]
ಈ ಹದೀಸ್ನಲ್ಲಿ ಅಲ್ಲಾಹನ ಗ್ರಂಥವು ಅನು ಮತಿಸದ ಎಂಬ ಅರ್ಥದಲ್ಲಿ `ಮಾ ಲೈಸ ಫೀ ಕಿತಾಬುಲ್ಲಾಹ್’ ಎಂದು ಹೇಳಲಾಗಿದೆ. ‘ಅಲ್ಲಾಹನ ಗ್ರಂಥದಲ್ಲಿ ಇಲ್ಲದ’ ಎಂದು ಅದರ ಸರಳ ಅರ್ಥ. ಈ ಶಬ್ದಾರ್ಥವನ್ನು ಪರಿಗಣಿಸಿದಾಗ ಕುರ್ಆನ್ನಲ್ಲಿ ಇಲ್ಲದ ಒಪ್ಪಂದಗಳು ಮತ್ತು ಶರ್ತಗಳು ಸಿಂಧುವಲ್ಲ ವೆಂದಾಗುತ್ತದೆ. ಕೆಲವು ವಿದ್ವಾಂಸರು, `ಅಲ್ಲಾಹನ ಗ್ರಂಥದಲ್ಲಿ ಇಲ್ಲದ ಶರ್ತಗಳು’ ಎಂಬ ಅರ್ಥವನ್ನು ಪರಿಗಣಿಸಿ ವಿವಾಹ ಒಪ್ಪಂದದಲ್ಲಿ ಶರ್ತಗಳನ್ನು ಇರಿಸುವುದು ಅಸಿಂಧುವೆಂದು ವಾದಿಸಿದ್ದಾರೆ. ವಿವಾಹ ಒಪ್ಪಂದದಲ್ಲಿ ವಿವಾಹದ ಧ್ಯೇಯ ಮತ್ತು ನೀತಿಗೆ [...]
`ವ ಇದ್ ಅಖದ ರಬ್ಬುಕ ಮಿಂಬನೀ ಆದಮ ಮಿನ್ ಝುಹೂರಿಹಿಮ್ ದುರ್ರಿಯತಹುಮ್ ವಅಶ್ಹದಹುಮ್ ಅಲಾ ಅಂಫುಸಿಹಿಮ್ ಅಲಸ್ತು ಬಿರಬ್ಬಿಕುಮ್ ಕಾಲೂ ಬಲಾ ಶಹಿದ್ನಾ ಅನ್ ತಕೂಲೂ ಯೌಮಲ್ ಕಿಯಾಮತಿ ಇನ್ನಾ ಕುನ್ನಾ ಅನ್ ಹಾದಾ ಗಾಫಿಲೀನ್’ (ನಿನ್ನ ಪ್ರಭು, ಆದಮರ ಪೀಳಿಗೆಯಿಂದ ಅವರ ಸಂತತಿಯನ್ನು ಹೊರ ತಂದ ಹಾಗೂ ಅವರನ್ನು ಸ್ವತಃ ಅವರ ಮೇಲೆ ಸಾಕ್ಷ್ಯಗೊಳಿಸಿರು ವುದನ್ನು ಜ್ಞಾಪಿಸಿರಿ. `ನಾನು ನಿಮ್ಮ ಪ್ರಭುವಲ್ಲವೇ’ ಎಂದು ಕೇಳಿದಾಗ ಅವರು ಹೇಳಿದರು: `ಹೌದು, ಖಂಡಿತವಾಗಿಯೂ ನೀನೇ [...]
ಅನ್ ಅಬೀ ಹುರೈರತ ರದಿಯಲ್ಲಾಹು ಅನ್ಹು ಕಾಲ, ಕಾಲ ರಸುಲುಲ್ಲಾಹಿ ಸಲ್ಲಲ್ಲಾಹು ಅಲೈಹಿ ಸಲ್ಲಮ್, ಅಕ್ಮಲುಲ್ ಮುಅïಮಿನೀನ ಈಮಾನನ್ ಅಹ್ಸನುಲ್ ಕುಲ್ಕ, ವಖಿಯಾರುಕುಮ್, ಖಿಯಾರು ಕುಮ್ ಬಿ ನಿಸಾಇಹಿಮ್. `ಅಬೂ ಹುರೈರಾರಿಂದ ವರದಿ: ಪ್ರವಾದಿ ವರ್ಯರು(ಸ) ಹೇಳಿದರು: ಉತ್ತಮ ಸ್ವಭಾವದವನೇ ಸತ್ಯವಿಶ್ವಾಸಿಗಳಲ್ಲಿ ಪರಿಪೂರ್ಣನು. ನಿಮ್ಮ ಜೀವನ ಸಂಗಾತಿಗಳೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸು ವವನೇ ನಿಮ್ಮ ಪೈಕಿ ಅತ್ತ್ಯುತ್ತಮನು.’ (ತಿರ್ಮಿದಿ) ಇದು ಸದ್ಗುಣಕ್ಕೆ ಇಸ್ಲಾಮ್ ನೀಡಿರುವ ಪ್ರಾಧಾನ್ಯವನ್ನು ಸ್ಪಷ್ಟಪಡಿಸುವ ಪ್ರವಾದಿ ವಚನಗಳ ಲ್ಲೊಂದು ಆದರ್ಶ ವಿಶ್ವಾಸಗಳು [...]
ಅನ್ ಅಬೀದರ್ರ್ ಅನಿನ್ನಬಿಯ್ಯಿ ಸಲ್ಲಾಲ್ಲಾಹು ಅಲೈಹಿವಸಲ್ಲಮ್ ಕಾಲ: ಸಲಾಸತುನ್ ಲಾ ಯುಕಲ್ಲಿಮುಲ್ಲಾಹು ಯೌಮುಲ್ ಕಿಯಾಮತಿ, ಅಲ್ ಮನ್ನಾನುಲ್ಲದೀ ಲಾ ಯುಅïತೀ ಶೈಅನ್ ಇಲ್ಲಾ ಮನ್ನಹು, ವಲ್ ಮುಂಫಿಕು ಸಿಲ್ಅತಹು ಬಿಲ್ ಹಲೀಫಿಲ್ ಫಾಜಿರಿ ವಲ್ ಮುಸ್ಬಿರು ಇಝಾರಹು. ಅಬೂದರ್ರ್(ರ) ವರದಿ: [...]
http://qsaudi.com/sanmarga.com/ebook/
ರಾಷ್ಟ್ರೀಯ ಮಾನವ ಹಕ್ಕು ಆಯೋಗ ನವದೆಹಲಿ: ರಾಜ್ಯದಲ್ಲಿ ನಿರಂತರವಾಗಿ ನಡೆಯು ತ್ತಿರುವ ಕೋಮುಗಲಭೆಗಳ ಕಾರಣವನ್ನು ಸ್ಪಷ್ಟಪಡಿಸುವ ವರದಿಗಳನ್ನು ನಾಲ್ಕು ವಾರಗಳ ಒಳಗಾಗಿ ನೀಡಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ರಾಜಸ್ತಾನ ಸರಕಾರಕ್ಕೆ ಮನವಿ ಮಾಡಿದೆ. ದೆಹಲಿ ಯನ್ನು ಕೇಂದ್ರವಾಗಿಸಿ ಕಾರ್ಯಾಚರಿಸುತ್ತಿರುವ ಮಿಷನ್ ಭಾರತಿಯಾಂ ಎಂಬ ಸಂಘಟನೆಯ ಅಧ್ಯಕ್ಷ ರವಿ ನಿತೇಶ್ ನೀಡಿದ ದೂರಿನಿಂದಾಗಿ ಈ ವರದಿ ಕೋರಲಾಗಿದೆ. ಎಪ್ರಿಲ್ ಕೊನೆಯ ವಾರದಲ್ಲಿ ಸಂಭವಿಸಿದ ಕೋಮುಗಲಭೆಯಲ್ಲಿ ಹಲವಾರು ವಾಹನಗಳು, ಮನೆಗಳು, ಅಂಗಡಿ ಮುಂಗಟ್ಟುಗಳು ಧ್ವಂಸಗೊಂಡಿದ್ದವು. “ಸರಕಾರದ [...]
ಭಾಜಪ ಪ್ರತಿಪಾದಿಸುವ ಹಿಂದುತ್ವವನ್ನು ಹಿಂದು ಧರ್ಮ ಪುರಸ್ಕರಿಸುವುದಿಲ್ಲ ಎಂದು ವಿಧಾನಸಭಾ ಚುನಾ ವಣೆ ಸಾಬೀತುಪಡಿಸಿದೆ. ಧರ್ಮದಲ್ಲಿ ಬಲಾತ್ಕಾರವಿಲ್ಲ ಅರ್ಥಾತ್ ಬಲ ಪ್ರಯೋಗ, ನೈತಿಕ ಪೋಲೀಸ್ಗಿರಿ ಇವೆಲ್ಲವೂ ಯಾವುದೇ ಧರ್ಮದ ಸಾತ್ವಿಕ ಭಾವವನ್ನು ಮಸುಕಾಗಿಸುತ್ತದೆ. ಮಾತ್ರವಲ್ಲ ಮತೀಯ ವಿಚಾರಗಳು ಒಂದು ಸಾಮಾಜಿಕ ಪಿಡುಗಾಗಿ ಪರಿಣಮಿಸುತ್ತದೆ. ಈ ಅನೈತಿಕ ಹೋರಾಟಕ್ಕೆ ಪ್ರತಿ ಹೋರಾಟ ನೀಡಲು ವಿಫಲ ರಾಗುತ್ತಿರುವ ಶಾಂತಿಪ್ರಿಯ ಜನಸಾಮಾನ್ಯರು ಮತಯಂತ್ರದ ಮೂಲಕ ಇದನ್ನು ಮೂಲೋತ್ಪಾಟನೆ ಮಾಡಲು ಅಣಿಯಾಗುತ್ತಾರೆ ಎಂಬ ವಾಸ್ತವಿಕತೆಯನ್ನು ಕಳೆದ ಚುನಾವಣೆ ರುಜುಪಡಿಸಿದೆ. ಭಾಜಪವು ಒಂದು [...]
ಕರ್ನಾಟಕ ವಿಧಾನಸಭಾ ಚುನಾವಣೆಗಳ ಫಲಿತಾಂಶದ ಬಗ್ಗೆ ಜಮಾಅತೆ ಇಸ್ಲಾವಿೂ ಹಿಂದ್ ಕರ್ನಾಟಕ ರಾಜ್ಯ ಘಟಕಾಧ್ಯಕ್ಷರಾದ ಮುಹಮ್ಮದ್ ಅಬ್ದುಲ್ಲಾ ಜಾವೀದ್ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಭದ್ರತೆ, ಜಾತಿ ರಾಜಕೀಯ ಮತ್ತು ಜನಸಾಮಾನ್ಯರಿಂದ ದೂರವಾಗಿದ್ದ ಫ್ಯಾಸಿಸ್ಟ್ ಪಕ್ಷದ ಆಡಳಿತದಿಂದ ಈ ರಾಜ್ಯವು ಮುಕ್ತವಾಗಿದೆ. ರಾಜ್ಯದಲ್ಲಿ ಫ್ಯಾಸಿಸ್ಟ್ ಶಕ್ತಿಗಳ ಸೋಲು ಮತ್ತು ಜಾತ್ಯತೀತ ಪಕ್ಷವೆಂಬ ನೆಲೆಯಲ್ಲಿ ಚಿರಪರಿಚಿತವಾಗಿರುವ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಸಂತೋಷದಾಯಕವಾಗಿದೆ. ರಾಜ್ಯ ರಾಜಕೀಯದಲ್ಲಿ ಈ ಶುಭದಾಯಕ ಬದಲಾವಣೆಗೆ ಇಲ್ಲಿನ ಜನತೆ ಅಭಿನಂದನಾರ್ಹರಾಗಿದ್ದಾರೆ ಎಂದವರು ಹೇಳಿದ್ದಾರೆ. [...]