ಅನುಮಾನ ಮೂಡಿಸುತ್ತಿರುವ ಮತಯಂತ್ರಗಳು

0
718

ಇತ್ತೀಚೆಗೆ ಉತ್ತರ ಪ್ರದೇಶದ ಪೌರಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕೆಲವೆಡೆ ಮತಯಂತ್ರಗಳು ಬಿಜೆಪಿ ಪರವಿರುವುದು ಬಹಿರಂಗವಾಗಿದೆ. ಅಲ್ಲಿ ಯಾವ ಬಟನ್ ಒತ್ತಿದರೂ ಅದು ಕಮಲದ ಚಿಹ್ನೆಗೆ ಮತ ಬೀಳುತ್ತಿತ್ತು. ವಿವಿಧ ಸ್ಥಳಗಳಲ್ಲಿ ಈ ಕುರಿತು ಜಗಳ ಘರ್ಷಣೆಗಳು ತಾರಕಕ್ಕೇರಿ ಓರ್ವ ಅಭ್ಯರ್ಥಿ ಮೇಲೆ ಗುಂಡು ಕೂಡಾ ಹಾರಿಸಲಾದ ಘಟನೆ ವರದಿಯಾಗಿದೆ. ಪಶ್ಚಿಮ ಉತ್ತರ ಪ್ರದೇಶದ ಮೀರತ್‍ನ 89ನೇ ವಾರ್ಡ್‍ನ ಮತಗಟ್ಟೆಯೊಂದರ ಮತಯಂತ್ರದಲ್ಲಿ ಯಾವ ಬಟನ್ ಒತ್ತಿದರೂ ಬಿಜೆಪಿಗೆ ಮತ ಬೀಳುತ್ತಿತ್ತು. ಮತದಾರರು ಈ ಕುರಿತು ದೂರು ನೀಡಿದಾಗ ಅದಕ್ಕೆ ಕ್ರಮ ಕೈಗೊಳ್ಳದೆ ಪರಿಶೀಲಿಸೋಣ ಎಂಬ ಸಲಹೆಯೊಂದಿಗೆ ಮೀರತ್‍ನ ಡಿವಿಜನಲ್ ಕಮೀ ಶನರ್ ಪ್ರಭಾತ್ ಕುಮಾರ್ ಪ್ರತ್ಯP್ಷÀರಾದರು. ಇದೇ ಮೀರತ್‍ನ ದವಾಯ್ ಮತಗಟ್ಟೆಯೊಂದರಲ್ಲಿ ಯಾವುದೇ ಬಟನ್ ಒತ್ತಿದರೂ ಒಂದೋ ಕಮಲದ ಚಿಹ್ನೆಗೆ ಇಲ್ಲವೇ ನೋಟಾ ಆಗುತ್ತಿತ್ತು. ಇದನ್ನು ಚಿತ್ರೀಕರಿಸಿ ದೂರಿತ್ತಾಗ ಹೊಸ ಯಂತ್ರ ತಂದು ಮತದಾನ ಪ್ರಾರಂಭವಾಯಿತು. ಗೋರಖ್ ಪುರದ ಸೌತ್‍ಬುಜ್‍ನಲ್ಲಿ 55ನೇ ವಾರ್ಡ್‍ನಲ್ಲಿ, ಕಾನ್ಪುರದಲ್ಲಿ ಇದೇ ಪುನರಾವರ್ತನೆಯಾಗಿದೆ. ಹರ್ಷನಗರದಲ್ಲಿ ಬಿಎಸ್‍ಪಿ ಅಭ್ಯರ್ಥಿಗೆ ಹಾಕಿದ ಮತ ಬಿಜೆಪಿಗೆ ಬಿತ್ತು. ಮತ್ತೊಮ್ಮೆ ಶ್ರಮಿಸಿದಾಗ ನೋಟಾ ಆಯಿತು. ಈ ಕುರಿತು ದೂರು ನೀಡಿ ದಾಗ ಅಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಕಾರ್ಯಕರ್ತರ ನಡುವೆ ಜಟಾಪಟಿ ನಡೆ ಯಿತು. ಅಲ್ಲಿಯೂ ಮತಯಂತ್ರ ಬದಲಾಯಿಸ ಲಾಯಿತು. ಇದು ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕದ ಅತ್ಯಂತ ಮಹತ್ವದ ಚುನಾವಣೆಯಾಗಿತ್ತು. ಈ ಎಲ್ಲ ಘಟನೆ ನಡೆದ ಬಳಿಕವೂ ಮತಯಂತ್ರದಲ್ಲಿ ಯಾವುದೇ ಲೋಪ ಸಂಭವಿಸಿಲ್ಲವೆಂದು ಉತ್ತರ ಪ್ರದೇಶಧ ಚುನಾವಣಾ ಉಪ ಆಯುಕ್ತ ವೇದಪ್ರಕಾಶ್ ಹೇಳುತ್ತಿರುವುದು ಕೂಡಾ ಅನುಮಾನವನ್ನು ಇನ್ನಷ್ಟು ಪುಷ್ಟೀಕರಿಸು ವಂತಿದೆ. ಆಡಳಿತ ವಿರೋಧಿ ಅಲೆ ಇರುವೆಡೆ ಇಂತಹ ಲೋಪಗಳು ಕಂಡುಬಂದಿದೆ ಎಂದು ಮಾಧ್ಯಮಗಳು ಹೇಳುತ್ತಿವೆ.
ದೇಶವು ಬಹಳ ಕುತೂಹಲದಿಂದ ಕಾಯು ತ್ತಿರುವ ಗುಜರಾತ್ ವಿಧಾನಸಭೆಯ ಚುನಾವಣೆಯ ಹೊಸ್ತಿಲಲ್ಲಿರುವಾಗ ಇಂತಹ ಘಟನೆಗಳು ಸಂಭವಿ ಸುತ್ತಿರುವುದು ಆತಂಕಕಾರಿಯಾಗಿದೆ. ಮತ್ತೊಂದೆಡೆ ಚುನಾವಣಾ ಆಯೋಗವು ಮತಯಂತ್ರದ ವಿಶ್ವಾ ಸಾರ್ಹತೆಯನ್ನು ಸ್ಪಷ್ಟಪಡಿಸುತ್ತಾ ಬರುತ್ತಿದೆ. ಇದು ಪ್ರಜಾಪ್ರಭುತ್ವವನ್ನು ಅಣಕಿಸುವ ರೀತಿಯಲ್ಲಿದೆ. ಮತದಾನದ ಸಂದರ್ಭದಲ್ಲಿ ನಮಗೆ ಬೇಕಾದ ಗುಂಡಿಯನ್ನು ಅದುಮಲು ನಮಗೆ ಸ್ವಾತಂತ್ರ್ಯ ನೀಡಿದೆ. ಆದರೆ ನಾವು ಮತಯಂತ್ರದ ಗುಂಡಿ ಯನ್ನು ಒತ್ತಿದ ಬಳಿಕ ಬೀಳುವ ಮತವನ್ನು ಕಬಳಿಸುವ ಷಡ್ಯಂತ್ರದಲ್ಲಿ ಕೆಲ ಅಧಿಕಾರಮೋಹಿ ಗಳು ಮುಂದಾಗಿದ್ದಾರೆ ಎನ್ನುವುದು ಇದರಿಂದ ಬಹಿರಂಗವಾಗಿದೆ. ಆಡಳಿತ ವಿರೋಧಿ ಪ್ರಾಬಲ್ಯ ವಿರುವ ಕಡೆ ಮತಯಂತ್ರದಲ್ಲಿ ಕಂಡುಬರುವ ಈ ಲೋಪದೋಷಗಳು ವ್ಯವಸ್ಥಿತ ಪ್ರಯತ್ನದ ಭಾಗವೇ ಎಂಬುದನ್ನು ತನಿಖೆ ನಡೆಸಬೇಕಾದ ಅಗತ್ಯವಿದೆ. ಆಡಳಿತಾರೂಢರು ತಮಗೆ ಬೇಕಾದ ರೀತಿಯಲ್ಲಿ ಮತಯಂತ್ರ ಬಳಸುವ ಈ ಹುನ್ನಾರದ ವಿರುದ್ಧ ಜನರ ಪ್ರತಿಭಟನೆಯ ಅಸ್ತ್ರ ಪ್ರಯೋಗ ವಾಗಬೇಕಾಗಿದೆ. ಆದರೆ ನಮ್ಮ ಕೇಂದ್ರ ಸರಕಾರದ ಕೃಪಾಪೋಷಿತ ಕೆಲ ಮಾಧ್ಯಮಗಳಿಗೆ ಇದು ಸುದ್ದಿಯಾಗುವುದಿಲ್ಲ. ಅದು ಚರ್ಚಾವಸ್ತು ಆಗು ವುದೂ ಇಲ್ಲ. ಅದು ಸಮಾಜದಲ್ಲಿ ಈ ಕುರಿತು ಚರ್ಚೆಯಾಗ ದಂತೆ ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದೆ. ಅದರ ಒಂದು ಭಾಗವೇ ಪದ್ಮಾವತಿ ಚಲನಚಿತ್ರ ಪ್ರದರ್ಶನದ ಕುರಿತ ಕೋಲಾ ಹಲ, ಚರ್ಚೆ. ಇದು ಜನರ ಗಮನವನ್ನು ಬೇರೆಡೆಗೆ ಸೆಳೆಯುವಂತಹ ಪ್ರಯತ್ನ ವಲ್ಲದೆ ಇನ್ನೇನೂ ಅಲ್ಲ. ಟಿಪ್ಪು ಜನ್ಮ ದಿನಾಚರಣೆಯ ಕುರಿತು ದಿನಗಟ್ಟಲೆ ಚರ್ಚೆ ನಡೆಸಿದಂತಹ ಕೆಲವು ಚಾನೆಲ್ ಗಳು ಈ ಮತಯಂತ್ರದ ಲೋಪ ದೋಷದ ಕುರಿತ ಚರ್ಚೆಗೆ ಮುಂದಾಗು ತ್ತಿಲ್ಲ. ವಾಸ್ತವಾಂಶ ಎಲ್ಲಿ ಚರ್ಚೆಗೆ ಬಂದು ಬಹಿರಂಗವಾಗಬಹುದೋ ಎಂಬ ಆತಂಕವಿರಬಹುದೇ? ಸಣ್ಣ ಸಣ್ಣ ವಿಚಾರಕ್ಕೂ ಬೇರೆ ಬೇರೆ ಪಕ್ಷದವರನ್ನು ಕರೆದು ಚರ್ಚಿಸುವ ಸುದ್ದಿ ವಾಹಿನಿಗಳು ಪ್ರಜೆಗಳ ಹಕ್ಕುಗಳನ್ನು ಕಬಳಿಸುವಂತಹ ಮತಯಂತ್ರದ ಲೋಪದೋಷಗಳ ಚರ್ಚೆಗೆ ಮುಂದಾಗುತ್ತಿಲ್ಲವೇಕೆ? ಮರ್ದಿತ ವಿಭಾಗಗಳು ದನಿಯೆತ್ತಿದ ಕೂಡಲೇ ಅದನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಈ ದೇಶದಲ್ಲಿ ಹಲವಾರು ಬಾರಿ ನಡೆದಿದೆ. ಕೆಲ ದಿನಗಳ ಹಿಂದೆ ದೆಹಲಿ ಯಲ್ಲಿ ರೈತರ ಬೃಹತ್ ರ್ಯಾಲಿಯೊಂದು ನಡೆಯಿತು. ಅದರಲ್ಲಿ ಮೂರು ಲಕ್ಷದಷ್ಟು ರೈತರು ಪಾಲ್ಗೊಂಡಿದ್ದರು. ಇದು ನಮ್ಮ ಆಡಳಿತವನ್ನು ದಂಗುಬಡಿಸುವಂತಿತ್ತು. ಆದರೆ ಅದು ಮಾತ್ರ ಸುದ್ದಿಯಾಗಲಿಲ್ಲ. ಅದು ಸುದ್ದಿವಾಹಿನಿಗಳಿಗೊಂದು ಚರ್ಚಾ ವಿಷಯವಾಗಿಯೂ ಮೂಡಿ ಬರಲಿಲ್ಲ. ಮಾಧ್ಯಮಗಳು ಪದ್ಮಾವತಿ ಎಂಬ ಸಿನಿಮಾವನ್ನು ಹಿಡಿದು ನೇತಾಡಿ ಲಾಗಹಾಕಿತು.
ಕೃಷಿ ಪ್ರಧಾನವಾದ ಭಾರತದ ದೇಶದಲ್ಲಿ ರೈತರು ಅಸಹಾಯಕರಾಗಿದ್ದಾರೆ. ರಾಜಸ್ತಾನ, ಬಿಹಾರ, ಮಹಾ ರಾಷ್ಟ್ರ, ತಮಿಳುನಾಡು ಹಾಗೂ ಕರ್ನಾಟಕ ಮುಂತಾದೆಡೆಗಳಿಂದ ಒಂದೂವರೆ ಲಕ್ಷ ಪ್ರತಿನಿಧಿಗಳು ಈ ರೈತರ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ತಮ್ಮ ಸಂಕಷ್ಟದ ಕುರಿತು ಜನರ ಗಮನ ಸೆಳೆಯಲು ಅವರು ಸೇರಿದ್ದರು. ಆಡಳಿತಗಾರರಿಗೂ ಕೆಲ ಮಾಧ್ಯಮಗಳ ಗಮನ ಸೆಳೆಯಲು ಅವರು ಸೇರಿದ್ದರು. ಆದರೆ ಅವರೆಲ್ಲರೂ ತಮ್ಮ ಮುಖವನ್ನೇ ಬೇರೆಡೆಗೆ ತಿರು ಗಿಸಿದ್ದರು. ಎಲ್ಲರಿಗೂ ಪದ್ಮಾವತಿ ಮುಂತಾದ ರಾಜಕೀಯ ವಿಚಾರಗಳ ಕುರಿತು ಸಂವಾದ ಚರ್ಚೆ ಏರ್ಪಡಿಸಿ ದ್ದರೇ ಹೊರತು ರೈತರ ಅಹವಾಲು ಗಳನ್ನು ಕೇಳಲು ಅವರು ಮುಂದಾಗ ಲಿಲ್ಲ. ದೇಶದ ರಾಜಧಾನಿಯಲ್ಲಿ ರೈತರು ಇಂತಿಂತಹ ಪ್ರತಿಭಟನೆಯನ್ನು ಸಾರಿದ್ದಾರೆಂದು ಅವರ ಗೋಳನ್ನು ಮಾಧ್ಯಮ ಗಳು ಪ್ರಾಮಾಣಿಕವಾಗಿ ಜನರ ಮುಂದೆ ಪ್ರಸ್ತುತಪಡಿಸಬೇಕಿತ್ತು. ಆಮೂಲಕ ಅವರು ತಮ್ಮ ವೃತ್ತಿಗೆ ನ್ಯಾಯವೊದ
ಗಿಸಬಹುದಿತ್ತು. ಹೀಗೆ ಆಡಳಿತಕ್ಕೆ ಕುತ್ತು ತರುವಂತಹ ವಿಚಾರ ಬಂದಾಗ ವ್ಯವಸ್ಥಿತವಾಗಿ ಜನರ ಗಮನ ಬೇರೆಡೆಗೆ ಸೆಳೆಯುವುದರಿಂದ ಅದು ದೇಶದ ಪ್ರಜಾಪ್ರಭುತ್ವದ ವರ್ಚಸ್ಸಿಗೆ ಹಾನಿ ಎಂಬ ವಾಸ್ತವವನ್ನು ಮಾಧ್ಯಮಗಳು ಅರಿತು ಕೊಳ್ಳಬೇಕು. ಮತಯಂತ್ರಗಳಿಂದ ಪ್ರಾಮಾಣಿಕವಾಗಿ ಚುನಾವಣೆ ನಡೆಸಲು ಸಾಧ್ಯವಿಲ್ಲವೆಂಬ ಅನುಮಾನ ದಟ್ಟವಾಗಿ ರುವಾಗ ಅದನ್ನು ರದ್ದುಪಡಿಸಿ ಹಳೆಯ ಬ್ಯಾಲೆಟ್ ಪೇಪರ್ ಬಳಸುವ ವಿಧಾನ ಅನುಸರಿಸುವುದು ಕ್ಷೇಮವಲ್ಲವೇ?

@ ಸಲೀಮ್ ಬೋಳಂಗಡಿ