ಅನ್ಯ ಮತೀಯನನ್ನು ಪ್ರೀತಿಸಿದ್ದಕ್ಕೆ ಮಂಗಳೂರಿನಲ್ಲಿ ಒಂದೂವರೆ ವರ್ಷದಿಂದ ಗೃಹಬಂಧನದಲ್ಲಿ ನರಳುತಿರುವ ಯುವತಿ

0
2133

ಕೇರಳ ತೃಶೂರು ; ಅನ್ಯ ಮತೀಯನನ್ನು ಪ್ರೀತಿಸಿದ್ದಕ್ಕಾಗಿ ಒಂದೂವರೆ ವರ್ಷದಿಂದ ಓರ್ವ ಯುವತಿ ಗೃಹ ಬಂಧನದಲ್ಲಿ ಹಿಂಸೆಗೊಳಗಾದ ಬಗ್ಗೆ ವರದಿಯಾಗಿದೆ. ಬಿಜೆಪಿ ನಾಯಕರ ನಿಯಂತ್ರಣದಲ್ಲಿ ಈಕೆಯನ್ನು ಹಲವು ಕಡೆ ಸ್ಥಳಾಂತರಿಸಲಾಗಿದೆ. ಆಕೆಯನ್ನು ಗೃಹ ಬಂಧನದಲ್ಲಿಟ್ಟವರು ಅಮೃತ ಆಸ್ಪತ್ರೆಯಲ್ಲಿ ಮಾನಸಿಕ ಅಸ್ವಸ್ಥೆಯೆಂಬ ದಾಖಲೆಯನ್ನು ಸಿದ್ದಪಡಿಸಿದ್ದಾರೆ.  ಮಂಗಳೂರಿನಲ್ಲಿ ಗೃಹ ಬಂಧನದಲ್ಲಿರುವ ಮನೆಯಿಂದ ತಂದೆ ಹಾಗೂ ಕುಟುಂಬಸ್ಥತರಿಗೆ ಕಳುಹಿಸಿದ ವಿಡಿಯೋ ಸಂದೇಶದಲ್ಲಿ ಈ ವಿವರ ಲಭ್ಯವಾಗಿದೆ. ಮಂಗಳೂರು ನ್ಯಾಯಾಲಯದ ನಿರ್ದೇಶದನುಸಾರ ಯುವತಿಯನ್ನು ಮತ್ತೆ ಮಹಿಳಾ ಮಂದಿರಕ್ಕೆ ತಲುಪಿಸಲಾಗಿದೆ.
ಕೇರಳದ ತೃಶೂರಿನ ಈ ಯುವತಿ ಮಂಗಳೂರಿನ ಅಜ್ಞಾತ ಸ್ಥಳದಿಂದ ಬಹಳ ಜಾಣ್ಮೆಯಿಂದ ಈ ಸ೦ದೇಶ ಕಳುಹಿಸಿದ್ದಾಳೆ. ಕಳೆದ ಕೆಲ ತಿಂಗಳುಗಳಿಂದ  ಕ್ರೂರ ಹಿಂಸೆಗೆ ಒಳಗಾದ ಈಕೆ ನನ್ನನ್ನು ಈ ಹಿಂಸಾ ಸ್ಥಳದಿಂದ ಕಾಪಾಡಬೇಕೆಂದು ತಂದೆ ಮತ್ತು ಕುಟುಂಬಸ್ಥರಿಗೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾಳೆ.
ನನ್ನ ಪ್ರೀತಿಯ ವಿಚಾರ ಮನೆಯವರಿಗೆ ತಿಳಿದ ಕೂಡಲೇ ಮೊದಲು ರಹಸ್ಯ ತಾಣವೊಂದಕ್ಕೆ ಕರೆದು ಕೊಂಡು ಹೋಗಿ  ಅಮೃತ ಆಸ್ಪತ್ರೆಯಲ್ಲಿ ಮಾನಸಿಕ ಅಸ್ವಸ್ಥೆಯೆಂಬ ಸರ್ಟಿಫಿಕೇಟ್ ತಯಾರಿಸಿದರು. ತಂದೆಗೆ ಪರಿಚಯವಿರುವ ಓರ್ವರೊಂದಿಗಿನ ಪ್ರಣಯವನ್ನು ತಂದೆಯ ಮರಣದ ಬಳಿಕ ಮನೆಯವರು ವಿರೋಧಿಸಿದರು. ತಾಯಿಯೊಂದಿಗಿನ ಕೋಪವನ್ನು ನನ್ನಲ್ಲಿ ತೀರಿಸಬೇಡಿ ಎಂದು ತಂದೆಯ ಕುಟುಂಬಸ್ಥತರೊಂದಿಗೆ ಗೋಗರೆದಿದ್ದಾಳೆ.
ನ್ಯಾಯಾಲಯ ಮಧ್ಯ ಪ್ರವೇಶಿಸಿದ ಬಳಿಕ ಕರ್ನಾಟಕ ಪೋಲೀಸರು ಮಹಿಳಾ ಮಂದಿರಕ್ಕೆ ವರ್ಗಾಯಿಸಿದರು. ಆಕೆಯ ತಾಯಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯ ಇವರಿಗೆ ಜಾಮೀನು ನೀಡಿತ್ತು. ಯುವತಿಯನ್ನು ಕೇರಳ ಪೋಲೀಸರಿಗೆ ಹಸ್ತಾಂತರಿಸಲು ಕರ್ನಾಟಕ ಪೋಲೀಸರು ಸಿದ್ದರಾದಾಗ ಪೋಲೀಸರನ್ನು ತೀವ್ರವಾಗಿ ವಿಮರ್ಶಿಸಿದ ಮಂಗಳೂರು ಸೀನಿಯರ್ ಅಡಿಶನಲ್ ನ್ಯಾಯಾಲಯದ  ನ್ಯಾಯಾಧೀಶರು ಅದಕ್ಕೆ ಅನುಮತಿಸಲಿಲ್ಲ. ಇದರಿಂದ ಕೇರಳದ ಡಿಜಿಪಿ ನಿರ್ದೇಶದನುಸಾರ ಮಂಗಳೂರಿಗೆ ಬಂದ ಗುರುವಾಯೂರು ಪೋಲೀಸರು ಯುವತಿಯೊಂದಿಗೆ ಮಾತನಾಡಲೂ  ಆಗದೆ ಬರಿಗೈಯಲ್ಲಿ ಹಿಂದಿರುಗ ಬೇಕಾಯಿತು.
ಮಂಗಳೂರಿನ ಅಜ್ಞಾತ ಸ್ಥಳವೊಂದರಿಂದ ಫೋನ್ ಮೂಲಕ ಕೇರಳ ಡಿಜಿಪಿಗೆ ವಿಷಯ ತಿಳಿಸಿ ಯುವತಿ ನೆರವು ಯಾಚಿಸಿದ್ದರು. ಆಕೆಯ ಪ್ರೇಮಿ ರಹಸ್ಯವಾಗಿ ತಲುಪಿಸಿದ ಸಿಮ್ ಕಾರ್ಡು ಬಳಸಿ ಈ ದೂರು ನೀಡಿದ್ದರು. ಕೂಡಲೇ ಈ ವಿಚಾರವನ್ನು ಕರ್ನಾಟಕ ಪೋಲೀಸರ ಗಮನಕ್ಕೆ ಡಿಜಿಪಿ ತಂದರು. ಕರ್ನಾಟಕ ಡಿಜಿಪಿಯವರ ಆದೇಶದನುಸಾರ ಮಂಗಳೂರು ನಗರ ಪೋಲೀಸ್ ಆಯುಕ್ತರ ನೇತೃತ್ವದಲ್ಲಿ ಅಜ್ಞಾತ ಸ್ಥಳವನ್ನು ಪತ್ತೆಹಚ್ಚಲಾಯಿತು. ಆಕೆಯಿಂದ ವಿವರ ಸಂಗ್ರಹಿಸಿ ತಾಯಿಯ ವಿರುದ್ದ ದೂರು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಮಗಳು ಮಾನಸಿಕ ಅಸ್ವಸ್ಥೆಯೆಂದು ತಾಯಿ ನ್ಯಾಯಾಲಯದಲ್ಲಿ ಪನರುಚ್ಚರಿಸಿದರು. ಪೋಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದ ನ್ಯಾಯಾಲಯ ತಾಯಿಗೆ ಜಾಮೀನು ನೀಡಿತು. ಆದರೆ ತಾಯಿಯ ಜೊತೆ ಹೋಗಲಾರೆ ಎಂಬ ನಿರ್ಧಾರದಲ್ಲಿ ಆ ಹೆಣ್ಮಗಳು ಗಟ್ಟಿಯಾಗಿದ್ದಳು. ನ್ಯಾಯಾಲಯ ಆಕೆಯನ್ನು ಮಹೀಳಾ ಮಂದಿರಕ್ಕೆ ಕಳುಹಿಸಿತು. ಕಳೆದ ಒಂದೂವರೆ ವರ್ಷದಿಂದ ಆಕೆ ತೀವ್ರ ಹಿಂಸೆಗೆ ಗುರಿಯಾದ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಗೆ ಸ್ಥಳೀಯ ಶಾಸಕರಿಗೆ ಹಾಗೂ ಡಿಜಿಪಿಗೆ ವಿವರ ತಿಳಿಸಿದ್ದರು.
ಹೆಣ್ಮಗಳನ್ನು ಕರೆದುಕೊಂಡು ಹೋಗಲು ಮಂಗಳೂರಿಗೆ ಬಂದ ಕೇರಳ ಪೋಲೀಸರಿಗೆ ನೋಡಲು ಕೂಡಾ ಮಂಗಳೂರು ಪೋಲೀಸರು ಅನುಮತಿಸಿಲ್ಲ. ನ್ಯಾಯಾಲಯ  ಕೂಡಾ ಹೆಣ್ಮಗಳ ವಿಚಾರದಲ್ಲಿ ಕೇರಳ ಪೋಲೀಸರು ಭಾಗಿಯಾಗಂದತೆ ನೋಡಿಕೊಂಡಿತು. ಈ ಕಾರಣದಿಂದ ಮಂಗಳೂರು ತಲುಪಿದ ಗುರುವಾಯೂರ್ ಎಸ್.ಐ ಸುನುದಾಸ್ ನೇತೃತ್ವದ ಪೋಲೀಸರು ಕೇರಳಕ್ಕೆ ಹಿಂದಿರುಗ ಬೇಕಾಯಿತು. ಮೀಡಿಯಾ ವನ್ ವರದಿ ಮಾಡಿದೆ

ಮೀಡಿಯಾ ವನ್ ವಿಡಿಯೋ ವರದಿ