ಅಫ್ರೀನ್ ಸಂಪೂರ್ಣವಾಗಿ ಟರ್ಕಿಯ ನಿಯಂತ್ರಣದಲ್ಲಿ; ಉರ್ದುಗಾನ್

0
447

ಅಫ್ರೀನ್: ಅಫ್ರೀನ್ ಸಂಪೂರ್ಣವಾಗಿ ನಮ್ಮ ಸೇನೆಯ ನಿಯಂತ್ರಣದಲ್ಲಿದೆ ಎಂದು ಟರ್ಕಿ ಅದ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಸ್ಪಷ್ಟಪಡಿಸಿದ್ದಾರೆ. ಅಫ್ರೀನ್ ಸಿರಿಯಾದ ಉತ್ತರದ ವಲಯದೊಡನೆ ಹಾಗೂ ಟರ್ಕಿಯ ಜೊತೆ ಸೇರಿಕೊಂಡಿರುವ ಪ್ರದೇಶವಾಗಿದೆ. ಕುರ್ದಿಗಳ ಆದಿಪತ್ಯವಿರುವ ವಲಯದಲ್ಲಿ ಟರ್ಕಿಯ ಸೇನಾಪತಾಕೆಯೂ ರಾರಾಜಿಸುತ್ತದೆ. ನಗರದಲ್ಲಿ ತೀವ್ರ ಹೋರಾಟ ನಡೆಯುತ್ತಿದ್ದು ಅಫ್ರೀನ್‍ನ ಹತ್ತಿರದ ಪ್ರದೇಶಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾನವ ಹಕ್ಕುಗಳ ಗುಂಪುಗಳು ಹೇಳಿದೆ. ಫ್ರೀ ಸಿರಿಯನ್ ಆರ್ಮಿಯ ಜೊತೆ ಸೇರಿ ಟರ್ಕಿ ಸೇನೆಯು ಯುದ್ದ ಮಾಡುತ್ತಿದೆ ಕುರ್ದ್ ಉಗ್ರರನ್ನು ನಿರ್ಮೂಲನ ಮಾಡುವುದು ಟರ್ಕಿಯ ಉದ್ದೇಶವಾಗಿದೆ.

ಆಪರೇಶನ್ ಆಲಿವ್ ಬ್ರಾಂಚ್ ಎಂಬ ಹೆಸರಿನಲ್ಲಿ ನಡೆಯುವ ಈ ಸೇನಾ ಚಟುವಟಿಕೆಯಲ್ಲಿ ಈ ತನಕ 3500ರಷ್ಟು ಕುರ್ದ್ ಉಗ್ರರನ್ನು ನಿರ್ಮೂಲನ ಮಾಡಲಾಗಿದೆಯೆಂದು ಟರ್ಕಿ ಹೇಳಿದೆ. ಈಗಾಗಲೇ 29 ಗ್ರಾಮಗಳನ್ನು ಉಗ್ರರಿಂದ ರಕ್ಷಿಸಿದ ಟರ್ಕಿ ಸೇನೆಯು ತನ್ನ ಸೇನಾ ಕಾರ್ಯಾಚರಣೆಯ ಅಂತಿಮ ಹಂತದಲ್ಲಿದೆ. ಕಳೆದ ಜನವರಿ 20 ರಿಂದ ಟರ್ಕಿಯು ಈ ಸೇನಾ ಕಾರ್ಯಾಚರಣೆ ಪ್ರಾರಂಭಿಸಿddu 400 ರಷ್ಟು ಸೈನಿಕರೂ ಹತ್ಯೆಯಾಗಿದ್ದಾರೆ.