ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯ ನಂತರ…

0
343

@ ಸಲೀಮ್ ಬೋಳಂಗಡಿ
ಚುನಾವಣೆ ಘೋಷಣೆಯಾದ ಬಳಿಕ ಅಭ್ಯರ್ಥಿಗಳ ಟಿಕೆಟ್ ಹಂಚಿಕೆಯ ಕುರಿತು ತೀವ್ರ ಪ್ರಸವ ವೇದನೆಯಿಂದ ಬಳಲುತ್ತಿದ್ದ ಪಕ್ಷಗಳು ಪಟ್ಟಿ ಬಿಡುಗಡೆಯ ನಂತರ ನಿರಾಳ ಎನ್ನುವಂತಹ ಪರಿಸ್ಥಿತಿ ಎಲ್ಲ ಪಕ್ಷಗಳದ್ದಾಗಿದೆ ಅಳೆದೂ ತೂಗಿದ ನಂತರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಗೊಂಡರೂ ಕಾಂಗ್ರೆಸ್‍ನಲ್ಲಿ ವಲಸಿಗರ ಮತ್ತು ಮೂಲ ಕಾಂಗ್ರೆಸ್‍ನ ನಡುವಿನ ತಿಕ್ಕಾಟ ಎದ್ದು ಕಾಣುತ್ತಿದೆ. ಆದರೂ ಒಂದೇ ಹಂತಕ್ಕೆ 224ಕ್ಕೆ ಕ್ಷೇತ್ರಗಳ ಪೈಕಿ 218 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಿರುವುದು ವಿಶೇಷವೇ ಸರಿ.

ಇತ್ತೀಚಿನ ದಶಕಗಳಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಇಷ್ಟೊಂದು ದೊಡ್ಡ ಪಟ್ಟಿ ಬಿಡುಗಡೆ ಮಾಡಿದೆ. ಹೈಕಮಾಂಡ್ ಅಳೆದು ತೂಗಿ ಟಿಕೆಟ್ ನೀಡಿದೆಯಾದರೂ ಸ್ವಲ್ಪ ಮಟ್ಟಿಗೆ ಸಿದ್ದರಾಮಯ್ಯ ನವರ ಪ್ರಭಾವವನ್ನು ಕುಗ್ಗಿಸಲು ಮೂಲ ಕಾಂಗ್ರೆಸ್ಸಿಗರು ಮಾಡಿದ ಪ್ರಯತ್ನಗಳು ಫಲ ನೀಡಿವೆ. ಏಕಾಧಿಪತ್ಯವಾಗಿ ಬೆಳೆಯುತ್ತಿದೆಯೆಂಬು ದನ್ನು ತೋರಿಸಲು ಕೆಲ ಮೂಲ ಕಾಂಗ್ರೆಸ್ಸಿಗರು ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ. ಆದರೆ ಸಿದ್ದರಾಮಯ್ಯನವರ ವರ್ಚಸ್ಸು ಏನೆಂಬುದು ಹೈಕಮಾಂಡ್‍ಗೆ ಮನದಟ್ಟಾಗಿದೆ. ದೇಶದೆಲ್ಲೆಡೆ ಕಾಂಗ್ರೆಸ್ ಸೋತು ಹೈರಾಣಾಗಿರುವಾಗ ತನ್ನ ಜನಸ್ನೇಹಿ ಆಡಳಿತದಿ ಂದ ಸಿದ್ದರಾಮಯ್ಯ ಕಾಂಗ್ರೆಸ್ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ನಾಯಕರಿಗೂ ತಲೆ ನೋವಾಗುವ ರೀತಿಯಲ್ಲಿ ಸಡ್ಡು ಹೊಡೆದು ನಿಂತಿದ್ದಾರೆ. ಅನ್ನ ಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಇದುವರೆಗೆ ಗುಜರಾತ್‍ನಿಂದ ಅಭಿವೃದ್ಧಿಯ ಮಾದರಿ ಎಂದು ಹೇಳಿ ಜನರನ್ನು ಮಂಕು ಮರುಳು ಮಾಡುತ್ತಿದ್ದ ಬಿಜೆಪಿಗೆ ಆಡಳಿತವನ್ನು ಹೇಗೆ ನಡೆಸ¨ಬೇಕೆಂಬು ದನ್ನು ಸಿದ್ದರಾಮಯ್ಯರಿಂದ ನೋಡಿ ಕಲಿಯಿರಿ ಎಂದು ರಾಹುಲ್ ಗಾಂಧಿಯವರು ತಿರುಗೇಟು
ನೀಡಿದ್ದು ಕೂಡಾ ಇಲ್ಲಿ ಸ್ಮರಣಾರ್ಹ.

ಸಿದ್ದರಾಮಯ್ಯನವರ ವಿರುದ್ಧ ಸೆಟೆದು ನಿಂತು ಕಾಂಗ್ರೆಸ್ ತ್ಯಜಿಸಿದ ಎಸ್.ಎಂ. ಕೃಷ್ಣ ಮತ್ತು ಶ್ರೀನಿವಾಸ್ ಪ್ರಸಾದ್ ಸ್ಥಿತಿ ಕೂಡಾ ಬಿಜೆಪಿಯಲ್ಲಿ ಶೋಚನೀಯವಾಗಿದೆ ಎಂದು ಅಲ್ಲಿ ಕೇಳಿ ಬರು ತ್ತಿರುವ ಬೆಳವಣಿಗೆಗಳು ಸೂಚಿಸುತ್ತಿವೆ. ಹಗಲು ಕಂಡ ಬಾವಿಗೆ ರಾತ್ರಿ ಬಿದ್ದಂತಹ ಸ್ಥಿತಿಯನ್ನು ಇವರಿಬ್ಬರು ಎದುರಿಸುತ್ತಿದ್ದಾರೆ. ಸದ್ಯ ವೀರಪ್ಪ ಮೊೈಲಿಯವರು ಕೂಡಾ ತನ್ನ ಪ್ರಭಾವವನ್ನು ಬಳಸಿ ಕಾಂಗ್ರೆಸ್‍ಗೆ ಕಿರಿಕ್ ಆಗುವಂತಹ ನಡೆಯಲ್ಲಿ ತೊಡಗಿದ್ದಾರೆ. ಅವರ ಪುತ್ರ ವ್ಯಾಮೋಹ ಅವರನ್ನು ಪತನದಂಚಿಗೆ ತಳ್ಳಿದರೂ ಅಚ್ಚರಿಯಿಲ್ಲ. ಉತ್ತಮ ಸಂಸದೀಯ ಪಟು ಮಲ್ಲಿಕಾರ್ಜುನ ಖರ್ಗೆಯವರು ಕೂಡಾ ರಾಜ್ಯ ಸರಕಾರದ ವಿರುದ್ಧ ನಾನಾ ರೀತಿಯ ಬಾಣಗಳನ್ನು ಪ್ರಯೋಗಿಸುತ್ತಿದ್ದಾರೆ. ಸ್ವಾರ್ಥ ಬದಿಗಿಟ್ಟು ರಾಜ್ಯದ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕಾಗಿದ ಅನಿ ವಾರ್ಯತೆ ಎದುರಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮಣಿಸಲು ಜನತಾದಳ ಮತ್ತು ಬಿಜೆಪಿ ನಾನಾ ರೀತಿಯ ತಂತ್ರಗಳನ್ನು ಹೆಣೆಯು ತ್ತಿರುವಾಗ ಮುಖ್ಯಮಂತ್ರಿಗಳನ್ನು ಬಲ ಪಡಿಸಬೇಕಾದ ಅಗತ್ಯವಿದೆ. ಯಾಕೆಂದರೆ, ಸರಕಾರವು ಜನ ಸಾಮಾನ್ಯರ ಮಟ್ಟಿಗೆ ಉತ್ತಮ ಆಡಳಿತ ನೀಡಿದೆ. ಅಹಿಂದ ವಿಭಾಗದವರಿಗೆ 2013-14ರಲ್ಲಿ ನೀಡಿದ 5.04 ಕೋಟಿ ಅನುದಾನಗಳು 2018-19 ಆಗುವಾಗ 11.98 ಕೋಟಿಗೆ ವೃದ್ಧಿಸಿದೆ. ಅಹಿಂದ ವಿಭಾಗಕ್ಕೆ ನೀಡಿದ 32 ಭರವಸೆಗಳಲ್ಲಿ 28ನ್ನು ಪಾಲಿಸಲಾಗಿದೆ. ಆದ್ದರಿಂದ ನುಡಿದಂತೆ ನಡೆದ ಸರಕಾರ ಎಂದು ಹೇಳುವುದರಲ್ಲಿ ಅರ್ಥವಿದೆ.
ದೇಶದಾದ್ಯಂತ ಕೇಂದ್ರ ಸರಕಾರದ ದುರಾಡಳಿತದ ಬಗ್ಗೆ ಪ್ರತಿಭಟನೆಗಳು ಸಿದ್ದರಾಮಯ್ಯರವರಿಗೆ ವರದಾನ ವಾಗುವ ಸಾಧ್ಯತೆ ಇದೆ. ಕಥುವಾ, ಉನ್ನಾವ, ಸೂರತ್ ಮುಂತಾದೆಡೆ ನಡೆದ ಅತ್ಯಾಚಾರ ಪ್ರಕರಣಗಳು ಅದರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಜನರು ಆಕ್ರೋಶಭರಿತರಾಗಿದ್ದಾರೆ. ಪುಟ್ಟ ಹುಡುಗಿಯ ಮೇಲಿನ ಅತ್ಯಾಚಾರವನ್ನು ಯಾಕೆ ದೊಡ್ಡದಾಗಿ ಬಿಂಬಿಸುತ್ತೀರಿ, ಅದು ಪ್ರವಾಸೋದ್ಯಮಕ್ಕೆ ಹಾನಿ ಮಾಡುತ್ತದೆ ಎಂದು ಹೇಳು ವಂತಹ ಅಮಾನವೀಯತೆಯನ್ನು ಅರುಣ್ ಜೇಟ್ಲಿಯಂತಹವರು ಪ್ರದರ್ಶಿ ಸಿರುವುದು ಸಾರ್ವಜನಿಕರನ್ನು ಆಘಾತಕ್ಕೆ ಒಳಪಡಿಸಿದೆ. ಇದನ್ನೆಲ್ಲ ಜನ ನೋಡುವುದಿಲ್ಲವೇ? ಅತ್ಯಾಚಾರಿ ಗಳನ್ನು ಸಮರ್ಥಿಸುವಂತಹ ಹೇಯ ರಾಜಕಾರಣ ಜನರಿಗೆ ಅರ್ಥವಾಗುವು ದಿಲ್ಲವೇ? ದಲಿತರ ಮೇಲೆ ನಡೆಯುವ ದೌರ್ಜನ್ಯಗಳು ಇವೆಲ್ಲವೂ ಬಿಜೆಪಿಗೆ ಈ ಚುನಾವಣೆಯಲ್ಲಿ ಪ್ರತಿಕೂಲವಾಗಿ ಪರಿಣಮಿಸಲಿದೆ. ಆದ್ದರಿಂದ ಸೋಲಿನ ವಾಸನೆಯನ್ನು ಗ್ರಹಿಸಿದ ಬಿಜೆಪಿ ಸ್ವತಂತ್ರ ಪಕ್ಷಗಳನ್ನು ರಚಿಸಿ ಆ ಮೂಲಕ ಮತವನ್ನು ಒಡೆಯುವ ಕುತಂತ್ರದ ದಾರಿಯನ್ನು ಆರಿಸಿದೆ. ಈ ತಂತ್ರ ಉತ್ತರ ಪ್ರದೇಶದಲ್ಲಿ ಯಶಸ್ವಿಯಾಗಿದೆ. ಕನ್ನಡಿಗರು ಮಾತ್ರ ಈ ತಂತ್ರಕ್ಕೆ ಆಹುತಿಯಾಗಲಾರದು. ಯಾಕೆಂದರೆ ಇಲ್ಲಿ ಹುಟ್ಟುವ ಹೊಸ ಪಕ್ಷಗಳು ಇಲ್ಲಿನ ಜಾತ್ಯತೀತ ಮತಗಳ ವಿಭಜನೆಗೆ ಮಾತ್ರ ಕಾರಣವಾಗುತ್ತವೆ. ಅದು ಜೆಡಿಎಸ್ ಮತ್ತು ಕಾಂಗ್ರೆಸ್‍ನ ಮತ ಕೋಟೆಗೆ ಪ್ರತಿಕೂಲವಾಗಲಿದೆ.

ಅದೇ ರೀತಿ, ಬಿಜೆಪಿಗೂ ಕೆಲ ಪ್ರಾದೇಶಿಕ ಪಕ್ಷಗಳು ತಲೆ ನೋವಾ ಗಲಿದೆ. ಮುಂಬೈ ಕರ್ನಾಟಕ ಭಾಗದಲ್ಲಿ ಶಿವಸೇನೆಯು ಚುನಾವಣೆಯಲ್ಲಿ ಸ್ಪರ್ಧಿ ಸಿದರೆ ಬಿಜೆಪಿಯ ಓಟು ಬ್ಯಾಂಕ್‍ಗೆ ಹೊಡೆತ ಬೀಳುವ ಸಾಧ್ಯತೆ ನಿಚ್ಚಳ ವಾಗಿದೆ. ಇದು ಬಿಜೆಪಿಯನ್ನು ಕಾಡು ವುದು ನಿಶ್ಚಿತ. ಏನೇ ಆಗಲಿ, ಜಾತ್ಯತೀತ ಮತಗಳು ಚದುರಿ ಹೋಗದಂತೆ ಪ್ರಯತ್ನಿಸಬೇಕಾದ ಅನಿವಾರ್ಯತೆ ಕನ್ನಡಿಗರಿಗೆ ಎದುರಾಗಿದೆ. ಭ್ರಷ್ಟಾಚಾರ ರಹಿತವಾದ, ಸರ್ವರಿಗೂ ಸಮಪಾಲು ಎಂಬಂತಹ ಜನಸ್ನೇಹಿ ಸರಕಾರ ಅಧಿಕಾರಕ್ಕೇರಲು ಜನರು ಪ್ರಯತ್ನಿಸ ಬೇಕಾಗಿದೆ.