ಅಸ್ಸಾಮ್ ಪೌರತ್ವ ಸಮಸ್ಯೆ: ಏನು, ಎತ್ತ?

0
389

ಡಾ| ಕಾಸಿಮ್ ರಸೂಲ್ ಇಲ್ಯಾಸ್ ದೆಹಲಿ

ಅಸ್ಸಾಮ್‍ನಲ್ಲಿ ಬಂಗಾಳಿ ಮುಸಲ್ಮಾನರ ಸಂಕಷ್ಟಗಳು ಕಡಿಮೆಯಾಗುವ ಲಕ್ಷಣವಿಲ್ಲ. 1980 ರಲ್ಲಿ ಬಾಂಗ್ಲಾದೇಶಿ ನುಸುಳುಕೋರರು ಎಂಬ ಹೆಸರು ಹೇಳಿ ಅವರನ್ನು ರಾಜ್ಯದಿಂದ ಹೊರ ಹಾಕುವ ಅಭಿಯಾನ ನಡೆಯಿತು. ಅದರಲ್ಲಿ ಸಾವಿರಾರು ಮಂದಿಯನ್ನು ಕೊಲ್ಲಲಾಯಿತು. ಲP್ಷÀಗಟ್ಟಳೆ ಜನರು ನಿರಾಶ್ರಿತರಾದರು. ಆರಂಭದಲ್ಲಿ ಈ ಚಳವಳಿ ಕೇವಲ ಮುಸಲ್ಮಾನರ ವಿರುದ್ಧ ವಾಗಿರಲಿಲ್ಲ. ಅದರಲ್ಲಿ ಹಿಂದೂ ಬಂಗಾಳಿಗಳೂ ಇದ್ದರು. ಆದರೆ ನಂತರ ಆಲ್ ಅಸ್ಸಾಮ್ ಸ್ಟೂಡೆಂಟ್ಸ್ ಯೂನಿಯನ್ ನಡೆಸುತ್ತಿದ್ದ ಈ ಚಳವಳಿಯನ್ನು ಆರೆಸ್ಸೆಸ್ ಕೇವಲ ಮುಸಲ್ಮಾನರ ವಿರುದ್ಧ ತಿರುಗಿಸಿತು.
1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಅಸ್ಸಾಂ ಗಣ ಪರಿಷದ್‍ನೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು. ಅದನ್ನು ಅಸ್ಸಾಂ ಎಕಾರ್ಡ್ (ಅಸ್ಸಾಂ ಒಡಂಬಡಿಕೆ) ಎಂದು ಕರೆಯಲಾಗುತ್ತದೆ. ಅದರ ಪ್ರಕಾರ, 1971ರ ಮಾರ್ಚ್ 25ರ ನಂತರ ರಾಜ್ಯದೊಳಗೆ ಪ್ರವೇಶಿಸುವ ಬಂಗಾಳಿ ಮುಸಲ್ಮಾನರನ್ನೂ ಹಿಂದೂ ಗಳನ್ನೂ ಭಾರತೀಯ ನಾಗರಿಕರೆಂದು ಒಪ್ಪಲಾ ಗದು. 1951ರಲ್ಲಿ ಪ್ರಥಮ ಜನಗಣತಿಯ ನಂತರ ದೇಶಕ್ಕೆ ಪೌರತ್ವದ ರಾಷ್ಟ್ರೀಯ ರಿಜಿಸ್ಟರ್ ರಚಿಸಲಾಗುವುದೆಂದೂ ಘೋಷಿಸಲಾಯಿತು. ಆದರೆ ಅದನ್ನು ಎಂದೂ ಕಾರ್ಯಗತ ಗೊಳಿಸಲಾಗಿಲ್ಲ. 2014ರಲ್ಲಿ ಅದನ್ನು ಪುನಃ ನವೀಕರಿಸಲಾಯಿತು. ಅಸ್ಸಾಂ ಎಕಾರ್ಡ್‍ನ ನಂತರ ವಿದೇಶಿಗಳನ್ನು ಗುರುತಿಸಲಿಕ್ಕಾಗಿ ಮಾಡಲಾದ ಸರ್ವೇಯಲ್ಲಿ ಕೆಲವೇ ಮಂದಿಯನ್ನು ಬಂಗ್ಲಾದೇಶೀ ಯರೆಂದು ಸಾರಲಾಯಿತೆಂಬುದು ಸತ್ಯ. ವಸ್ತುತಃ ಈ ಮಧ್ಯೆ ಸ್ವಯಂ ಅಸ್ಸಾಂ ಗಣಪರಿಷದ್‍ಗೂ ರಾಜ್ಯದಲ್ಲಿ ಸರಕಾರ ರಚಿಸುವ ಅವಕಾಶ ಸಿಕ್ಕಿತು. ಅಸ್ಸಾಮ್ ಎಕಾರ್ಡ್(ಒಡಂಬಡಿಕೆ)ನ ಪ್ರಕಾರ ಅನಧಿಕೃತ ವಲಸಿಗರ ಪರಿಚಯಕ್ಕಾಗಿ ರಚಿಸಲಾದ ಯಾವುದಾದರೊಂದನ್ನು ನಾಗರಿಕತೆಯ ಪುರಾವೆ ಯಾಗಿ ಅಂಗೀಕರಿಸಲಾಯಿತು. ಈ ನಿಯಮವನ್ನು ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಲಾದಾಗ ರಾಜ್ಯ ಮತ್ತು ಕೇಂದ್ರ (ಕಾಂಗ್ರೆಸ್)ಗಳು ಅದನ್ನು ಬಹಳ ದುರ್ಬಲವಾಗಿ ವಾದಿಸಿತು. ಪರಿಣಾಮವಾಗಿ ಸುಪ್ರೀಮ್ ಕೋರ್ಟ್ ಅದನ್ನು ಕೊನೆಗೊಳಿಸಿತು.
ಸುಪ್ರೀಮ್ ಕೋರ್ಟ್‍ನ ಈ ಆದೇಶದಂತೆ, ಪೌರತ್ವದ ರಾಷ್ಟ್ರೀಯ ರಿಜಿಸ್ಟರನ್ನು ಅಸ್ಸಾಂನಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಈ ಮಧ್ಯೆ ಸುಪ್ರೀಮ್ ಕೋರ್ಟ್ ಒಂದು ಮಹತ್ವದ ಸಮಸ್ಯೆಯಲ್ಲಿ ಪೌರತ್ವಕ್ಕೆ ಪಂಚಾಯತ್ ಸರ್ಟಿಫಿಕೇಟ್ ಸಾಕೆಂದು ಹೇಳಿತು. ಇದನ್ನು ರಾಜ್ಯ ಸರಕಾರವು ಕೊನೆಗೊಳಿಸಿತ್ತು. ಸುಪ್ರೀಮ್ ಕೋರ್ಟ್‍ನ ಈ ತೀರ್ಮಾನದ ಪ್ರಕಾರ, ಲಕ್ಷಗಟ್ಟಳೆ ಜನರ ಪೌರತ್ವ ಜೀವ ಪಡೆಯಿತು. ಇದರಲ್ಲಿ ಸುಮಾರು 50 ಸಾವಿರ ಮುಸ್ಲಿಮ್ ಸ್ತ್ರೀಯರೂ ಇದ್ದಾರೆ.
ಈಗ ಇನ್ನೊಂದು ಸಮಸ್ಯೆ ಎದುರಾಗಿದೆ. ಕೇಂದ್ರದ ಬಿಜೆಪಿ ಸರಕಾರವು ಅಸ್ಸಾಮ್‍ನಲ್ಲಿ ಪೌರತ್ವದ ಕುರಿತಂತೆ ಒಂದು ಹೊಸ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಿದೆ. ಅದರಲ್ಲಿ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಲ್ಲಿನ, ಹಿಂಸೆ, ದೌರ್ಜನ್ಯಗಳಿಂದಾಗಿ ಬಂದಿರುವ ಹಿಂದುಗಳು, ಕ್ರೈಸ್ತರು, ಬೌದ್ಧರು ಮತ್ತು ಫಾರ್ಸಿಗಳು 11 ವರ್ಷದ ಬದಲು 6 ವರ್ಷ ದಿಂದ ಅಸ್ಸಾಮ್, ಮೇಘಾಲಯ ಮುಂತಾದೆಡೆಗಳಲ್ಲಿ ನೆಲೆಸಿದವರಿಗೆ ಭಾರತದ ಪೌರತ್ವವನ್ನು ನೀಡಲಾಗುವುದು ಎಂದು ಹೇಳಲಾಗಿದೆ. ಇಲ್ಲಿ ಒಂದು ವಿಷಯ ಸ್ಪಷ್ಟವಾಗಿ ತಿಳಿದಿರಬೇಕಾದುದೇನೆಂದರೆ, ಬಿಜೆಪಿ ಒಂದೆಡೆ ಅಸ್ಸಾಮಿನಲ್ಲಿ ಜನಸಂಖ್ಯೆಯ ಅನುಪಾತವನ್ನು ಬದಲಿಸ ಬಯಸುತ್ತಿದ್ದರೆ ಇನ್ನೊಂದೆಡೆ ತನ್ನ ಪರವಾಗಿ ಒಂದು ಸುಭದ್ರ ವೋಟ್ ಬ್ಯಾಂಕ್ ಸ್ಥಾಪಿಸಬಯಸುತ್ತದೆ. ಒಂದೆಡೆ ಅದರ ಪ್ರಯತ್ನವು ಬಂಗ್ಲಾದೇಶಿ ವಲಸಿಗರ ಹೆಸರಿನಲ್ಲಿ ಮುಸಲ್ಮಾನರನ್ನು ಸಂಶಯಗ್ರಸ್ತ ಮತದಾರ (De Voter)ರಾಗಿ ಪೌರತ್ವದಿಂದ ಹೊರ ಹಾಕುವುದಾಗಿದೆ. ಇನ್ನೊಂದೆಡೆ ಬಿಜೆಪಿಗೆ ಬೆಂಬಲಿಗರಲ್ಲದ ಅಸ್ಸಾಮಿ ಹಿಂದೂಗಳ ವಿರುದ್ಧ ಬಂಗಾಳಿ ಹಿಂದೂಗಳನ್ನು ನೆಲೆಸುವಂತೆ ಮಾಡಿ ಒಂದು ಪ್ರಬಲ ವೋಟ್ ಬ್ಯಾಂಕನ್ನೂ ಮಾಡುವುದಾಗಿದೆ. ಈ ಉದ್ದೇಶಕ್ಕಾಗಿ ಇತ್ತೀಚೆಗೆ ಜೊೈಂಟ್ ಪಾರ್ಲಿಮೆಂಟರಿ ಕಮಿಟಿಯು ಅಸ್ಸಾಮಿನಲ್ಲಿ ಪ್ರವಾಸ ಕೈಗೊಂಡಾಗ ಅದು ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಬಿಜೆಪಿಯ ರಾಜ್ಯ ಸರಕಾರದ ಬೆಂಬಲಿಗ ಅಸ್ಸಾಮ್ ಗಣ ಪರಿಷತ್, ಈ ಮಸೂದೆಯನ್ನು ಅಂಗೀಕರಿಸಿದರೆ ಸರಕಾರದಿಂದ ಹೊರ ಬರುವುದೆಂದು ಎಚ್ಚರಿಕೆ ನೀಡಿದೆ.
ಅಸ್ಸಾಮ್‍ನ ಬಂಗಾಳಿ ಮುಸಲ್ಮಾನರ ಒಂದು ದೊಡ್ಡ ಸಮಸ್ಯೆ ಬ್ರಹಪುತ್ರ ನದಿಯ ನೆರೆಯದ್ದಾಗಿದೆ. ಅದರ ಸುತ್ತಮುತ್ತಲೂ ಅವರ ವಸತಿಗಳಿವೆ. ನೆರೆಯಿಂದಾಗಿ ಪ್ರತಿವರ್ಷ ಲಕ್ಷಗಟ್ಟಳೆ ಜನರು ನಿರಾ ಶ್ರಿತರಾಗುತ್ತಿದ್ದಾರೆ. ಅವರ ಸಾಮಾನು ಸರಂಜಾಮುಗಳೆಲ್ಲ ನೆರೆಯಲ್ಲಿ ಕೊಚ್ಚಿ ಹೋಗುತ್ತವೆ. ಅದರಲ್ಲಿ ಅವರ ಪೌರತ್ವ ದಾಖಲೆಗಳೂ ಸೇರಿವೆ. ಅವರು ಇತರ ಸರಕಾರಿ ಜಮೀನಿನಲ್ಲಿ ವಾಸ ಹೂಡಿದರೆ ಅವರನ್ನು ವಿದೇಶಿಗಳೆಂದು ಹೇಳಲಾಗುತ್ತದೆ.
ಇನ್ನೊಂದು ಸಮಸ್ಯೆಯು ಬೋಡೋಲ್ಯಾಂಡ್‍ನದ್ದಾಗಿದೆ. 2003ರಲ್ಲಿ ಬೋಡೋ ಟ್ರಿಬ್ಯೂನಲ್ ಏರಿಯಾ ಡಿಸ್ಟ್ರಿಕ್ಟ್ ನ ಹೆಸರಲ್ಲಿ ಬೋಡೋ ಗೋತ್ರಗಳಿಗಾಗಿ ಒಂದು ಸ್ವಾಯತ್ತ ಕೌನ್ಸಿಲ್ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್‍ನ ಹೆಸರಲ್ಲಿ ಸ್ಥಾಪಿಸಲಾಗಿದೆ. ಅದರಲ್ಲಿ ಬೋಡೋ ಗೋತ್ರಗಳಿಗೆ ವಿಶೇಷ ಅಧಿಕಾರಗಳನ್ನು ನೀಡಲಾಗಿದೆ. ವಸ್ತುತಃ ಆ ಪ್ರದೇಶದಲ್ಲಿ ಮುಸಲ್ಮಾನರು ಬಹುದೊಡ್ಡ ಸಂಖ್ಯೆಯಲ್ಲಿದ್ದಾರೆ. ಅಸ್ಸಾಮ್‍ನಲ್ಲಿ ಇದೆಲ್ಲ ಏಕೆ ನಡೆಯುತ್ತಿದೆಯೆಂದರೆ,
ಕಾಶ್ಮೀರದ ನಂತರ ಇಲ್ಲಿ ಮುಸಲ್ಮಾನರ ಅನುಪಾತ ಹೆಚ್ಚಿದೆ. ಜನಗಣತಿಯ ಪ್ರಕಾರ, ಇಲ್ಲಿ ಮುಸಲ್ಮಾನರ ಸಂಖ್ಯೆ 24% ಇದೆ. ಆದರೆ ಅನಧಿಕೃತ ಮಾಹಿತಿ ಪ್ರಕಾರ ಅದು 40% ಇದೆ. 1971 ರಲ್ಲಿ ಬಂಗ್ಲಾದೇಶವನ್ನು ಪಾಕಿಸ್ತಾನ ದಿಂದ ಬೇರ್ಪಡಿಸಿ ಸ್ವತಂತ್ರಗೊಳಿಸಿ ದಾಗ ಭಾರತ ಸರಕಾರವೇ ಬಂಗಾಳಿ ಮುಸಲ್ಮಾನರನ್ನೂ ಹಿಂದುಗಳನ್ನೂ ಇಲ್ಲಿ ವಾಸಿಸಲು ಅನುಮತಿ ನೀಡಿತ್ತು ಎಂಬುದು ನೆನಪಿಡಬೇಕಾದ ಅಂಶ.
ಭಾರತದ ಇತರ ರಾಜ್ಯಗಳ ಮುಸಲ್ಮಾನರಿಗೆ ಅಸ್ಸಾಮಿನ ಮುಸಲ್ಮಾನರ ಈ ಸಂಕಷ್ಟಗಳ ಅರಿವಿರುವುದು ಕಡಿಮೆಯೆಂಬುದು ವಿಷಾದಕರ. ಜಮ್‍ಇಯ್ಯತುಲ್ ಉಲೆಮಾ ಮತ್ತು ಜಮಾಅತೆ ಇಸ್ಲಾಮೀ ಹಿಂದ್ ಈ ವಿಷಯದಲ್ಲಿ ಖಂಡಿತ ಆಸಕ್ತಿ ವಹಿಸುತ್ತಿವೆ. ಆದರೆ ಭಾರತದ ಮುಸಲ್ಮಾನರು ಮತ್ತು ಅವರ ಸಂಘಟನೆಗಳು ಅಸ್ಸಾಮಿನ ಮುಸಲ್ಮಾನರ ಸಂಕಷ್ಟಗಳಲ್ಲಿ ಅವರಿಗೆ ನೆರವಾಗುವ ಅಗತ್ಯ ಇದೆ. ಅನ್ಯಥಾ ಅವರ ಅವಸ್ಥೆಯು ರೋಹಿಂಗ್ಯನ್ ಮುಸಲ್ಮಾನರಂತಾದೀತೋ ಎಂದು ಭಯಪಡಬೇಕಾಗಿದೆ.
[ಲೇಖಕರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ – ಸಂ.]