ಆರೋಪಮುಕ್ತ ವಾಸಿಫ್ ನನ್ನು ಆತಂಕಿ ವಾಸಿಫ್ ಎಂದ ಪ್ರಕರಣ: ದೈನಿಕ್ ಜಾಗರಣ್ ಪತ್ರಿಕೆಯ ವಿರುದ್ಧ ವಿಚಾರಣೆ ಚುರುಕುಗೊಳಿಸಿದ ಸು. ಕೋರ್ಟ್

0
363

ಮೂಲ : ಟು ಸರ್ಕಲ್ ಡಾಟ್ ಇನ್
ಅನು: ಆಯಿಷಾ ಅಫೀಫಾ
ಹಿಂದಿ ದೈನಿಕ  ದೈನಿಕ್ ಜಾಗರಣ್ ವಿರುದ್ಧ ವಾಸಿಫ್ ಹೈದರ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ಕುರಿತಂತೆ ನ್ಯಾಯಮೂರ್ತಿ ಚಲಮೇಶ್ವರ್ ನೇತೃತ್ವದ ಸರ್ವೋಚ್ಚ ನ್ಯಾಯಾಲಯ ನ್ಯಾಯಾಂಗ ಪೀಠವು  ಏಪ್ರಿಲ್ 3ರಂದು ವಿಚಾರಣೆ ನಡೆಸಿತು. ವಸಿಫ್ ಹೈದರ್ ರ ಮೇಲೆ ಪೊಲೀಸರು ಹೊರಿಸಿರುವ  ಭಯೋತ್ಪಾದನೆಯ ಎಲ್ಲ ಆರೋಪಗಳಿಂದಲೂ ನ್ಯಾಯಾಲಯ ಮುಕ್ತ ಗೊಳಿಸಿ ಬಿಡುಗಡೆ ಮಾಡಿದ ಬಳಿಕವೂ ದೈನಿಕ್ ಜಾಗರಣ್ ಪತ್ರಿಕೆಯು ನಿರಂತರ ಒಂದು ವರ್ಷದವರೆಗೆ ಹೈದರ್ ನನ್ನ ಭಯೋತ್ಪಾದಕನೆಂದು ಕರೆಯಿತು. ಬನರಾಸ್ ಸ್ಫೋಟದಲ್ಲಿ ಅವರ ಪಾತ್ರವನ್ನು ಒತ್ತಿ ಹೇಳುವ ಮತ್ತು ಇತರ ಭಯೋತ್ಪಾದಕ ಚಟುವಟಿಕೆಗಳೊಂದಿಗೆ ಸಂಪರ್ಕ ಕಲ್ಪಿಸುವಂತಹ ವಾಸ್ತವವಲ್ಲದ  ಮತ್ತು ಪೊಲೀಸ್ ತನಿಖೆಯ ಮೇಲೆ ಆಧಾರಿತವಾಗಿಲ್ಲದ  ಸುಳ್ಳು ಕಥೆಗಳನ್ನು ಸೃಷ್ಟಿಸಿತು. ವಾಸಿಫ್ ಹೈದರ್ ರನ್ನು  ‘ಪದೇಪದೇ ಆತಂಕಿ ವಸಿಫ್’ ಎಂದು ಕರೆಯಿತು. ತನ್ನ ಬಿಡುಗಡೆಯ ಬಳಿಕವೂ ಪೀತ ಪ್ರಚಾರ ನಡೆಸುತ್ತಿರುವುದನ್ನು ಪ್ರಶ್ನಿಸಿ,  ಪತ್ರಿಕೆಯ ಸಂಪಾದಕರು  ಮತ್ತು  ಪ್ರಕಾಶಕರ  ವಿರುದ್ಧ ವಸಿಫ್ ಪ್ರಕರಣ ದಾಖಲಿಸಿದ್ದರು.
ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್ಅವರು ವಸಿಫ್ ಪರ ವಾದಿಸಿದರು ಮತ್ತು ಈ ವಿಚಾರವು ಒಬ್ಬ ಮುಗ್ದನಿಗೆ  ಮಾತ್ರ ಸೀಮಿತವಾಗಿಲ್ಲ ಬದಲಾಗಿ  ಹಲವಾರು ಸಂದರ್ಭಗಳಲ್ಲಿ ಪುನರಾವರ್ತಿತ ಮಾದರಿಯಂತೆ ಕಾಣುತ್ತಿದೆ  ಆದ್ದರಿಂದ ನ್ಯಾಯಾಲಯವು ಇದನ್ನು ಸಮಗ್ರ ರೀತಿಯಲ್ಲಿ ಪರಿಗಣಿಸಬೇಕು ಎಂದು ವಿನಂತಿಸಿದರು. ಪ್ರಶಾಂತ್  ಭೂಷಣ್  ತಂಡದ ಸದಸ್ಯರಾದ  ಗೋವಿಂದ್ ಅವರು, ಯಾವುದೇ ಪತ್ರಿಕೆ   ಓರ್ವ ಆಪಾದಿತನನ್ನು  ಭಯೋತ್ಪಾದಕ ವ್ಯಕ್ತಿಯಾಗಿ ಮುದ್ರೆ ಒತ್ತಲು  ಸಾದ್ಯವಿಲ್ಲ . ಈ ಬಗ್ಗೆ ಕಾಯ್ದೆ  499 ಮತ್ತು 500 ರಲ್ಲಿ ಸಾಕಷ್ಟು ವಿವರಗಳಿವೆ. ಪತ್ರಿಕೆಯ  ಕ್ರಮಗಳು ಸ್ಪಷ್ಟವಾಗಿ ದುರುದ್ದೇಶಪೂರಿತವಾಗಿದೆ” ಎಂದಿದ್ದಾರೆ.
ಟೂ ಸರ್ಕಲ್ ಡಾಟ್ ನೆಟ್ ಜೊತೆ  20೧೬ ರಲ್ಲಿ  ಮಾತಾಡಿದ್ದ ಹೈದರ್,  ತನ್ನ ವಿರುದ್ಧ ದಾಖಲಿಸಲಾದ ಸುಳ್ಳು ಪ್ರಕರಣಹೇಗೆ ತನ್ನ  ಕುಟುಂಬದ ಜೀವನವನ್ನು ನಾಶಮಾಡಿದೆ ಅನ್ನುವುದನ್ನು ಹೇಳಿಕೊಂಡಿದ್ದರು.  ಪ್ರಕರಣ ದಾಖಲಾದ ಏಳು ವರ್ಷಗಳ ನಂತರ ಅವರನ್ನು ಖುಲಾಸೆಗೊಳಿಸಲಾಯಿತು. ಆದರೆ, ಆ ಬಳಿಕ ಅವರು ಸಾಮಾನ್ಯ ಜೀವನ ಸಾಗಿಸಲು ಹರಸಾಹಸ ಪಟ್ಟಿದ್ದರು. “ನಾನು ಜೈಲಿನಿಂದ ಹೊರಗೆ ಬಂದಿದ್ದೇನೆ, ಆದರೆ ಈಗ ನಾನು ದೊಡ್ಡ ಜೈಲಿನಲ್ಲಿದ್ದೇನೆ ಎಂದು ಭಾವಿಸುತ್ತೇನೆ” ಎಂದು ಅವರು ಹೇಳಿದ್ದರು.
ವಸಿಫ್ ಹೈದರ್ ರನ್ನು, ಇಂಟೆಲಿಜೆನ್ಸ್ ಬ್ಯೂರೊ (ಐಬಿ), ದೆಹಲಿ ಪೊಲೀಸ್ ನ  ವಿಶೇಷ ವಿಭಾಗ  ಮತ್ತು ಸ್ಪೆಶಲ್ ಟಾಸ್ಕ್ ಫೋರ್ಸ್ (ಎಸ್ಟಿಎಫ್) ತಂಡಗಳಿಂದ ೨೦೦೧ ರಲ್ಲಿ ಉತ್ತರ ಪ್ರದೇಶದಲ್ಲಿ ಅಪಹರಣಕೊಳಗಾಗುವಾಗ ಬೆಕ್ಟಾನ್ ಡಿಕಿನ್ಸನ್ ಕಂಪನಿಯ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು .  ದೀರ್ಘ ಕಾನೂನು ಹೋರಾಟ, ಮೂರನೇ ಹಂತದ ಚಿತ್ರಹಿಂಸೆ, ಅಕ್ರಮ ಬಂಧನ  ಮತ್ತು ತೀವ್ರವಾದ ಮಾನಸಿಕ ಕಿರುಕುಳಗಳ ನಂತರ  ವಸಿಫ್ ನನ್ನು  10 ವಿವಿಧ ಪ್ರಕರಣಗಳಲ್ಲಿ ತಪ್ಪಾಗಿ ಸಿಲುಕಿ ಸಲಾಯಿತು. ಬಳಿಕ  8 ವರ್ಷವಿಚಾರಣಾಧೀನ ಕೈದಿಯಾಗಿ ಜೈಲಲ್ಲಿದ್ದು, 2009 ರಲ್ಲಿ ಎಲ್ಲಾ ಆರೋಪಗಳಿಂದ  ಖುಲಾಸೆಗೊಂಡು ಬಿಡುಗಡೆಗೊಂಡರು.

ಬರಹಗಾರ್ತಿ ಮನೀಶಾ ಸೇಥಿ ಹೇಳುತ್ತಾರೆ,  ‘ಆರೋಪಿಯ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ನಿರ್ಮಿಸುವಲ್ಲಿ ಮಾಧ್ಯಮದ ಪಾತ್ರ ಬಹಳ ಬಲಶಾಲಿಯಾಗಿದೆ. ಇದು ನಾಗರಿಕರ ನ್ಯಾಯೋಚಿತ  ಹಕ್ಕನ್ನು ತಡೆಗಟ್ಟುತ್ತದೆ. ಪತ್ರಿಕೆಗಳು ವರದಿಮಾಡಿದ ಪರಿಣಾಮವಾಗಿ,  ಕಾನೂನಿನ ದೃಷ್ಟಿಯಲ್ಲಿ  ಖುಲಾಸೆಯಾದ ನಂತರವೂ  ಜನರ ಕಣ್ಣಿನಲ್ಲಿ ತಪ್ಪಿತಸ್ಥರಾಗಿರುತ್ತಾರೆ. ಈ ವಿದ್ಯಮಾನದಲ್ಲಿ ಪತ್ರಿಕೆಯ  ದುರುದ್ದೇಶಪೂರಿತ ನಿಲುವನ್ನು  ನ್ಯಾಯಾಲಯಗಳು  ಖಂಡಿತವಾಗಿಯೂ ಅರಿತುಕೊಳ್ಳಬೇಕು.
ಈ ಪ್ರಕರಣದಲ್ಲಿ ಮಾಧ್ಯಮಗಳ ಪಾತ್ರ  ಮತ್ತು ಪ್ರಕರಣವನ್ನು ಬಗೆಹರಿಸುವಲ್ಲಿ ಪೊಲೀಸರ ಕ್ರಮವನ್ನು  2016 ರಲ್ಲಿ ಭಾರತೀಯ ಕಾನೂನು  ಆಯೋಗದ ಮಾಜಿ ಅಧ್ಯಕ್ಷರಾದ  ನ್ಯಾಯಮೂರ್ತಿ  ಎ.ಪಿ.ಶಾಹ್  ಪ್ರಶ್ನಿಸಿರುವುದ್ದರಲ್ಲದೆ, 

ನ್ಯಾಯಮೂರ್ತಿ ಎ.ಪಿ.ಶಾಹ್, ಭಾರತದ ಕಾನೂನು ಆಯೋಗದ ಮಾಜಿ ಅಧ್ಯಕ್ಷರು, ಜ್ಯೂರಿ ವರದಿಯ ಆವಿಷ್ಕಾರಗಳನ್ನು ಪ್ರಸ್ತುತಪಡಿಸುತ್ತಿರುವ ಚಿತ್ರ

ತೀವ್ರ ನಿರಾಶೆಯನ್ನು ವ್ಯಕ್ತಪಡಿಸಿದ್ದರು . ಇವರೊಂದಿಗೆ ಸಿನಿಮಾ ನಿರ್ದೇಶಕ ಸಯೀದ್ ಅಖ್ತರ್ ಮಿರ್ಜಾ, ಜಿಎಸ್ ಬಾಜ್ಪೈ (ಎನ್ಎಲ್ಯು ದೆಹಲಿ ರಿಜಿಸ್ಟ್ರಾರ್), ಖ್ಯಾತ ಪತ್ರಕರ್ತ ನೀನಾ ವ್ಯಾಸ್, ದೆಹಲಿ ಶಾಲಾ ಶಿಕ್ಷಣ ಸಚಿವ ನಂದಿನಿ ಸುಂದರ್, ಟಿಐಎಸ್ಎಸ್ ಉಪನಿರ್ದೇಶಕ ಅಬ್ದುಲ್ ಶಬಾನ್, ಪತ್ರಕರ್ತ ವಿನೋದ್ ಶರ್ಮಾ ಮತ್ತು ಅಡ್ವೊಕೇಟ್ ಮೋನಿಕಾ ಸಕ್ರಾನಿ ಅವರು ಭಯೋತ್ಪಾದನೆ ಆರೋಪ ಹೊತ್ತು ತಪ್ಪಾಗಿ ಶಿಕ್ಷೆಗೊಳಗಾದ ಜನರಿಗೆ ಸೂಕ್ತ  ಪರಿಹಾರ ನೀಡಬೇಕೆಂದು  ಆಗ್ರಹಿಸಿದ್ದಾರೆ .