ಆಸಿಫಾಳಿಗೆ ಮರುಗಿದ ಮಂಗಳೂರು: ವಿ ವಾಂಟ್ ಜಸ್ಟೀಸ್.. ಮೊ೦ಬತ್ತಿ ಸ್ಮರಣೆಯಲ್ಲಿ ಮೊಳಗಿದ ಘೋಷಣೆ.

0
11478

ಮಂಗಳೂರಿನ ಸಮಾನ ಮನಸ್ಕರ ವೇದಿಕೆಯು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಏರ್ಪಡಿಸಿದ್ದ ಮೊ೦ಬತ್ತಿ ಸ್ಮರಣೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಸ್ವಯಂಪ್ರೇರಿತರಾಗಿ ಭಾಗವಹಿಸಿದರಲ್ಲದೆ, ವಿ ವಾಂಟ್ ಜಸ್ಟೀಸ್ ಎಂದು ಘೋಷಣೆ ಕೂಗಿದರು. ಒಂದು ಹಂತದಲ್ಲಿ ಮೊ೦ಬತ್ತಿ ಸ್ಮರಣೆ ಕಾರ್ಯಕ್ರಮ ಮುಗಿದ ಬಳಿಕವೂ ಜನರು ನಿಂತಲ್ಲಿಂದ ಕದಲದೇ ವ್ಯವಸ್ಥೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಸಂಘಟಕರು ಕಾರ್ಯಕ್ರಮ ಮುಗಿದಿದೆ ಎಂದು ಪದೇ ಪದೇ ಘೋಷಿಸುತ್ತಿದ್ದರೂ ಜನರು ಕದಲಲು ಕೆಲ ಕಾಲ ನಿರಾಕರಿಸಿ ಆಸಿಫಾ ಅತ್ಯಾಚಾರ, ಹತ್ಯೆಯಿಂದ ತಮಗಾಗಿರುವ ದುಃಖವನ್ನು ವ್ಯಕ್ತಪಡಿಸಿದರು. ಮುಸ್ಲಿಂ ಮಹಿಳೆಯರೂ ಸೇರಿದಂತೆ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದ ಈ ಸಭೆಯಲ್ಲಿ ವಿಚಾರವಾದಿ ನರೇಂದ್ರ ನಾಯಕ್, ಜಮಾ ಅತೆ ಇಸ್ಲಾಮಿ ಹಿಂದ್ ಮಂಗಳೂರು ಸ್ಥಾನೀಯ ಅಧ್ಯಕ್ಷ ಮುಹಮ್ಮದ್ ಕು೦ಞ, ಧರ್ಮಸ್ಥಳದ ಸೌಜನ್ಯಳ ತಾಯಿ,ಸಾಮಾಜೀಕ ಹೋರಾಟಗಾರ್ತಿ ವಿದ್ಯಾ ದಿನಕರ್ ಮಾತಾಡಿದರು . ಸಾವಿರಾರು ಮೊ೦ಬತ್ತಿಗಳು ಒಮ್ಮೆಗೆ ಉರಿದುವು. ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.