ಆಸಿಫಾಳ ಹೆಸರಲ್ಲಿ ಕಾಲೆಳೆಯಲು ಬಂದವರನ್ನು ಟ್ವೀಟರ್ ನಲ್ಲಿ ಝಾಡಿಸಿದ ರಾಜದೀಪ್ ಸರ್ದೇಸಾಯಿ

0
1467

ನ್ಯೂಸ್ ಡೆಸ್ಕ್
ಕಾಶ್ಮೀರದ ಕಥುವಾದಲ್ಲಿ ಆಸಿಫಾ ಎಂಬ ೮ ವರ್ಷದ ಮಗುವಿನ ಮೇಲೆ ಅತ್ಚಾರಗೈದು ಕೊಲೆಗೈದ ಘಟನೆಯನ್ನು ಖಂಡಿಸಿ ಖ್ಯಾತ ಪತ್ರಕರ್ತ ರಾಜ್ ಡೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದರು. ಈ ಘಟನೆಯ ಆರೋಪಿಗಳ ಪರ ಹಿಂದೂ ಏಕ್ತಾ ಮಂಚ್ ರಾಲಿ ನಡೆಸಿತ್ತು. ತ್ರಿವರ್ಣ ಧ್ವಜವನ್ನು ಹಿಡಿದು ಆರೋಪಿಗಳನ್ನು ಬೆಂಬಲಿಸಿ ನಡೆದ ಈ ರಾಲಿಯಲ್ಲಿ ಕಾಶ್ಮೀರದ ಇಬ್ಬರು ಬಿಜೆಪಿ ಸಚಿವರು ಭಾಗವಹಿಸಿದ್ದರು. ಇದನ್ನು ಸರ್ದೇಸಾಯಿ ಖಂಡಿಸಿದ್ದರು. ಈ ಕುರಿತಾಗಿ ಸರ್ದೇಸಾಯಿ ಯವರನ್ನು ಟ್ವೀಟರ್ ನಲ್ಲಿ ಕೆಲವರು ಪ್ರಶ್ನಿಸಿದ್ದರು. ಕಳೆದ ತಿಂಗಳು ಅಸ್ಸಾಮ್ ನ ಬರೋಡ ಎಂಬಲ್ಲಿ ೫ ವರ್ಷದ ಮಗುವನ್ನು ಅತ್ಯಾಚಾರ ಗೈದು ಕೊಲೆಗೈದವರ ಬಗ್ಗೆ ಈ ರೀತಿಯ ಆಕ್ರೋಶವೇಕೆ ಕಾಣಿಸುತ್ತಿಲ್ಲ ಎಂಬುದ ಅವರ ವಾದವಾಗಿತ್ತು. ಅದಕ್ಕೆ ಸರ್ದೇಸಾಯಿಯವರು ಮಾರ್ಮಿಕವಾಗಿ ಹೀಗೆ ಟ್ವೀಟ್ ಮಾಡಿದ್ದಾರೆ.
8
ನಿಮ್ಮ ಪ್ರಶ್ನೆ ತೀರಾ ಸರಳವಾದುದು. ಕಥುವಾದಲ್ಲಿ ಹಿಂದೂ ಏಕ್ತಾ ಮಂಚ್ ನಂತೆ ಅಸ್ಸಾಮ್ ನಲ್ಲಿ ಅತ್ಯಾಚಾರಿಗಳ ಪರ ವಹಿಸಿ ಯಾವುದೇ ಮುಸ್ಲಿಂ ಗುಂಪು ರಾಲಿ ನಡೆಸಿದೆಯೇ? ಯಾವುದೇ ಸಚಿವರು ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆಯೇ? ಅತ್ಯಾಚಾರಿಗಳನ್ನು ಸಮರ್ಥಿಸಿ ಯಾರಾದರೂ ತ್ರಿವರ್ಣ ದ್ವಜವನ್ನು ಹಾರಾಡಿಸಿದ್ದಾರೆಯೇ?
ಸದ್ಯ ಈ ಟ್ವೀಟ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.