ಇಸ್ಲಾಮಿನಲ್ಲಿ ಗಂಡು ಮತ್ತು ಹೆಣ್ಣು

0
1698

ಮಾನವನು ಆತ್ಮ ಮತ್ತು ದೇಹದ ಸಮ್ಮಿಲನವಾಗಿದ್ದಾನೆ. ದೇಹವು ನಾಶವಾಗುತ್ತದೆ. ಅದು ಮಣ್ಣನ್ನು ತಲಪಿದ ಕೂಡಲೇ ಹುಳಗಳಿಗೆ ಆಹಾರವಾಗುತ್ತದೆ. ಬೆಂಕಿಗೆ ಹಾಕಿದರೆ ಬೂದಿ ಯಾಗುತ್ತದೆ. ಆದರೆ ಆತ್ಮ ನಾಶವಾಗದು. ದೇಹವು ಆತ್ಮದ ವಾಹನವಾಗಿದೆ. ಜನನದಿಂದ ಮರಣದ ತನಕ ಅದು ಆತ್ಮವನ್ನು ಹೊತ್ತು ತಿರುಗುತ್ತದೆ. ಮರಣದೊಂದಿಗೆ ಅದರ ಅಗತ್ಯವಿಲ್ಲ ವಾಗುವುದು. ದೇಹದ ಕಾರ್ಯ ಸ್ಥಗಿತಗೊಳ್ಳುವುದು. ಆ ಬಳಿಕ ಆತ್ಮಕ್ಕೆ ಹೆಚ್ಚು ಪ್ರಾಶಸ್ತ್ಯವಿರು ವುದು. ಮರಣದೊಂದಿಗೆ ಭೂಮಿಯಲ್ಲಿನ ಕರ್ಮ ಫಲದ ಅನುಭವದ ಆರಂಭವಾಗುವುದು. ಅಲ್ಲಿಂದ ಜೀವಂತಗೊಳಿಸಿದ ತಕ್ಷಣ ಆತ್ಮದ ಒಳಿತು ಕೆಡುಕುಗಳಿಗನುಸಾರವಾದ ಅದು ರೂಪ ತಾಳುತ್ತದೆ. ಭೂಮಿಯಲ್ಲಿದ್ದ ಅದೇ ಶರೀರದಿಂದಲೇ ಅದು ರೂಪ ತಾಳುತ್ತದೆ. ಆದರೆ ಭೂಮಿಯಲ್ಲಿದ್ದ ಅದೇ ರೂಪದಲ್ಲಿರಲಾರದು. ಉದ್ದದ ವ್ಯಕ್ತಿ ಉದ್ದವಾಗಿಯೂ ಕುಳ್ಳ ವ್ಯಕ್ತಿ ಕುಳ್ಳನಾಗಿಯೂ ಕಪ್ಪು ಬಣ್ಣದವರು ಕಪ್ಪಗಾಗಿಯೂ ಬಿಳಿಯರು ಬಿಳಿಯರಾಗಿಯೂ ಕಣ್ಣಿದ್ದವರು ಕಣ್ಣಿರುವವ ರಾಗಿಯೂ ಕುರುಡರು ಕುರುಡರಾಗಿಯೂ ಇರಲಾರರು.