ಉತ್ತರಪ್ರದೇಶದಲ್ಲಿ ಮಹಿಳಾ ದೌರ್ಜನ್ಯದಲ್ಲಿ ಭಾರೀ ಹೆಚ್ಚಳ:  ಸರಕಾರದಿಂದಲೇ ಬಹಿರಂಗ

0
499

ನ್ಯೂಸ್ ಡೆಸ್ಕ್
ನವದೆಹಲಿ: ಉತ್ತರ ಪ್ರದೇಶದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯದ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗಿದೆಯೆಂದು ಸರಕಾರವೇ ಇಂದು ವಿದಾನ ಸಭೆಯಲ್ಲಿ ತಿಳಿಸಿದ್ದಾಗಿ ವರದಿಯಾಗಿದೆ. ಸಮಾಜವಾದಿ ಪಕ್ಷದ ಶಾಸಕ ನಹೀದ್ ಹಸನ್‍ರ ಪ್ರಶ್ನೆಗೆ ಉತ್ತರವಾಗಿ ಕಳೆದ ವರ್ಷಗಳಿಗಿಂತ ಅಪರಾಧಗಳು ಈ ವರ್ಷ ಇಮ್ಮಡಿಯಾಗಿ ವೃದ್ದಿಸಿದೆ ಎಂದು ಸರಕಾರ ತಿಳಿಸಿದೆ. 761 ಅತ್ಯಾಚಾರ, ಮೂರುಸಾವಿರಕ್ಕಿಂತಲೂ ಹೆಚ್ಚು ಶೋಷಣೆಯ ಪ್ರಕರಣಗಳು, 3400 ಅಪಹರಣ ಪ್ರಕರಣಗಳು ನಡೆದಿದೆ. ಲೈಂಗಿಕ ಕಿರುಕುಳದ ಸಂಖ್ಯೆಯಲ್ಲಿಯೂ ಇಮ್ಮಡಿ ಹೆಚ್ಚಳವಾಗಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ಕುಲ್‍ದೀಪ್ ಸಿಂಗ್ ಶಂಕರ್ ಶಾಸಕನ ರಕ್ಷಣೆಗೆ ಬಿಜೆಪಿ ಶ್ರಮಿಸುತ್ತಿರುವುದರ ನಡುವೆ ಈ ಅಂಕಿ ಅಂಶ ಹೊರಬಿದ್ದಿದೆ. ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ನಕಲಿ ಎನ್‍ಕೌಂಟರ್‍ ನ ಬಗ್ಗೆಯೂ ಪ್ರತಿಪಕ್ಷಗಳು ಟೀಕಿಸಿವೆ.