ಕತರ್ ವಿರುದ್ಧ ಸೌದಿ ಸೇನಾ ದಾಳಿ ಕೈಗೊಳ್ಳುವುದೇ? ಫ್ರಾನ್ಸ್ ಗೆ ಸೌದಿ ಕಳುಹಿಸಿರುವ ಪತ್ರದಲ್ಲಿ ಏನಿದೆ?

0
1161

ನ್ಯೂಸ್ ಡೆಸ್ಕ್

ರಿಯಾದ್: ಅತ್ಯಾಧುನಿಕ S 400 ಶಸ್ತ್ರಾಸ್ತ್ರವನ್ನು ರಷ್ಯಾದಿಂದ ಖರೀದಿಸುವ ಒಪ್ಪಂದದಿಂದ ಕತಾರ್ ಹಿಂಜರಿಯದಿದ್ದಲ್ಲಿ, ಕತರ್ ಮೇಲೆ ಸೇನಾ ದಾಳಿ ನಡೆಸುವುದಾಗಿ ಸೌದಿ ಬೆದರಿಕೆ ಹಾಕಿದೆಯೆಂದು ಫ್ರಾನ್ಸ್ ನ Le Monde ದಿನಪತ್ತಿಕೆ ವರದಿ ಮಾಡಿದೆ.
ವರದಿಯ ಪ್ರಕಾರ,
ರಷ್ಯಾದೊಂದಿಗಿನ ಈ ಒಪ್ಪಂದ ಜಾರಿಗೆ ಬರದಂತೆ ನೋಡಿಕೊಳ್ಳಲು ಸೌದಿಯು ಫ್ರಾನ್ಸ್ ನ ಅಧ್ಯಕ್ಷ ಇಮ್ಮಾನುವೆಲ್ ಮಾರ್ಕೊಸ್ ರಿಗೆ ಪತ್ರ ಬರೆದಿದೆ ಮತ್ತು ಪ್ರಾದೇಶಿಕ ಸ್ಥಿರತೆ ಕಾಪಾಡಿಕೊಳ್ಳಲು ನೆರವಾಗುವಂತೆ ಕೋರಿದೆ. S 400 ಎಂಬ ಅತ್ಯಾಧುನಿಕ ಮಿಸೈಲ್ ವ್ಯವಸ್ಥೆಯನ್ನು ನಿರ್ಮೂಲನಗೊಳಿಸಲು ಮಿಲಿಟರಿ ದಾಳಿಯೂ ಸೇರಿದಂತೆ ಎಲ್ಲ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೌದಿ ಸಿದ್ಧವಾಗಲಿದೆ ಎಂದು ವರದಿ ತಿಳಿಸಿದೆ.