ಕರಿಯ ಯುವಕನಿಗೆ ಗುಂಡಿಟ್ಟ ಪೊಲೀಸರು: ಕಾರಣ ಏನು ಗೊತ್ತೆ?

0
620

ಕ್ಯಾಲಿಫೊರ್ನಿಯಾ: ಕರಿಯ ವರ್ಗದ ಯುವಕನೊಬ್ಬನನ್ನು ಜೊತೆಯಲ್ಲಿ ಪಿಸ್ತೂಲು ಇದೆಯೆಂದು ಆರೋಪಿಸಿ ಪೋಲೀಸನೋರ್ವನು ಗುಂಡು ಹಾರಿಸಿ ಕೊಂದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ನಿಜವಾಗಿ ಆತನ ಬಳಿ ಸೆಲ್ ಫೋನ್ ಹೊರತು ಬೇರೇನೂ ಇರಲಿಲ್ಲವೆಂದು ನಂತರ ತಿಳಿದು ಬಂದಿದೆ. ಯುವಕನ ಮೇಲೆ ಇಪ್ಪತ್ತು ಸಾರಿ ಗುಂಡು ಹಾರಿಸಲಾಗಿದೆ. ಘಟನೆ ನಡೆಯುವಾಗ ಆತನ ಅಜ್ಜ ಮತ್ತು ಅಜ್ಜಿಯ ಮನೆಯ ಪಕ್ಕದಲ್ಲಿ ಕರಿಯವರ್ಗದ ಸ್ಟೀಫನ್ ಇದ್ದನು. ಆಫ್ರಿಕನ್ ಅಮೇರಿಕನ್ ವಂಶಜನ ಹತ್ಯೆಯ ವಿರುದ್ದ ಕ್ಯಾಲಿ ಫೋರ್ನಿಯಾದಲ್ಲಿ ಭಾರೀ ಪ್ರತಿಭಟನೆ ಭುಗಿಲೆದ್ದಿದೆ.

ಈ ವಿವರವನ್ನು ಘಟನೆಯ ಕುರಿತ ದೃಶ್ಯಗಳನ್ನು ಬಾಡಿ ಕ್ಯಾಮರಾ, ಹೆಲಿಕಾಪ್ಟರ್ ಫೂಟೇಜ್ ಮೂಲಕ ಪೋಲೀಸ್ ಇಲಾಖೆ ಬಹಿರಂಗಪಡಿಸಿದೆ. ಪೋಲೀಸಿಗೆ ಬಂದ ಫೋನ್ ಕರೆಯಿಂದಾಗಿ ಇನ್ಫ್ರಾಡ್ ಕ್ಯಾಮರಾ ಇರುವ ಹೆಲಿಕಾಪ್ಟರ್ ಮುಖಾಂತರ ಯುವಕನನ್ನು ಬೆನ್ನಟ್ಟಲಾಯಿತು. ತಮ್ಮ ಕಾರಿನ ಗಾಜನ್ನು ಯಾರೋ ಒಡೆಯುತ್ತಿದ್ದಾರೆಂಬ ದೂರು ಬಂದಿತ್ತು. ಮನೆಯ ಪಕ್ಕದ ಬೇಲಿಯಿಂದ ಹಾರಿ ಹೋದ ಯುವಕನನ್ನು ಅಕ್ರಮಿಯೆಂದು ಪೋಲೀಸರು ಅಪಾರ್ಥ ಕಲ್ಪಿಸಿದ್ದರು. ಆತನ ಕೈಯಲ್ಲಿದ್ದ ಸೆಲ್ ಫೋನನ್ನು ನೋಡಿ ಪಿಸ್ತೂಲು, ಪಿಸ್ತೂಲು ಎಂದು ಪೋಲೀಸನೊಬ್ಬ ಕೂಗುವುದು ಕೂಡಾ ಕ್ಯಾಮರಾದಲ್ಲಿ ದಾಖಲಾಗಿದೆ.
ಕೈಯಲ್ಲಿದ್ದ ಪಿಸ್ತೂಲು ಮೂಲಕ ದಾಳಿಗೆ ಸಿದ್ದನಾಗುತ್ತಿದ್ದಾನೆಂಬ ತಪ್ಪು ಕಲ್ಪನೆಯಿಂದ ಪೋಲೀಸರು ಗುಂಡಿಕ್ಕಿದ್ದಾನೆಂದು ಅಧಿಕೃತ ವರದಿ ತಿಳಿಸಿದೆ.