ಕರ್ನಾಟಕ: 50 ಸಾವಿರ ಸ್ವಯಂ ಸೇವಕರೊಂದಿಗೆ ಕಣಕ್ಕಿಳಿದ ಆರೆಸೆಸ್ಸ್

0
1277

ರಾಜ್ಯ ವಿಧಾನಸಙಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ, 60 ಸಾವಿರ ಸ್ವಯಂಸೇವಕರೊಂದಿಗೆ ಆರೆಸೆಸ್ಸ್ ರಂಗಕ್ಕಿಳಿದಿದೆ. ಜಾತಿ ರಾಜಕೀಯದ ವಿರುದ್ಧ ಹಿಂದುತ್ವ ರಾಜಕೀಯ ಎಂಬ ಅಜೆಂಡಾದೊಂದಿಗೆ ಪ್ರತಿ ಮತದಾರನನ್ನೂ ತಲುಪುವ ಕಾರ್ಯಸೂಚಿಯನ್ನು ಈ ಕಾರ್ಯಕರ್ತರಿಗೆ ನೀಡಲಾಗಿದೆ. ಈಗಾಗಲೇ 20 ಸಾವಿರ ಕಾರ್ಯಕರ್ತರು ವಿವಿಧೆಡೆ ಕಾರ್ಯಪ್ರವ್ರತ್ತರಾಗಿರುವುದಾಗಿಯೂ ಆರೆಸೆಸ್ಸ್ ನ ಉನ್ನತ ಮೂಲಗಳು ತಿಳಿಸಿವೆ. ಮೂರೂ ಪಕ್ಷಗಳು ತಮ್ಮ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಸಂಪೂರ್ಣ ಶಕ್ತಿಯೊಂದಿಗೆ ಅಖಾಡಕ್ಕಿಳಿಯವ ಗುರಿಯನ್ನು ಆರೆಸೆಸ್ಸ್ ಇಟ್ಟುಕೊಂಡಿದೆ.
ಆರೆಸೆಸ್ಸ್ ನ ಹಿರಿಯ ನಾಯಕರ ಪ್ರಕಾರ, ಸ್ವಯಂಸೇವಕರು ಮುಖ್ಯವಾಗಿ, ಕರಾವಳಿ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಮೇಲೆ ಹೆಚ್ಚು ಒತ್ತುಕೊಟ್ಟು ಕಾರ್ಯಪ್ರವ್ರತ್ತರಾಗಲಿದ್ದಾರೆ. ಲಿಂಗಾಯತ- ವೀರಶೈವ ವಿವಾದದ ಹಿನ್ನೆಲೆಯಲ್ಲಿ ಈ ಭಾಗದ 90 ರಿಂದ 100 ಸ್ಥಾನಗಳು ನಿರ್ಣಾಯಕವೆಂದು ಆರೆಸೆಸ್ಸ್ ಭಾವಿಸುತ್ತದೆ. ಸಾಮಾಜಿಕ್ ಸದ್ಭಾವನ್ ಕ್ಯಾಂಪೇನ್ ಎಂಬ ಹೆಸರಲ್ಲಿ ಯುವಕರು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪುವ ಯೋಜನೆ ಆರೆಸೆಸ್ಸ್ ನದ್ದು. ವಸತಿ ಮತ್ತು ಉಪವಸತಿ ಎಂಬುದಾಗಿ 2,240 ಬೂತ್ ಗಳನ್ನು ವರ್ಗೀಕರಿಸಲಾಗಿದ್ದು, ಸ್ವಯಂ ಸೇವಕರು ಅಲ್ಲಿ ಕಾರ್ಯಪ್ರವ್ರತ್ತರಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ಆರೆಸೆಸ್ಸ್ ನ ಸಕ್ರಿಯ ಪಾತ್ರವು ಎಷ್ಟು ಪ್ರಭಾವಶಾಲಿ ಎಂಬುದಕ್ಕೆ 2014 ರ ಲೋಕಸಭಾ ಚುನಾವಣೆಯಲ್ಲಿ BJP ಪಡೆದ ಅಭೂತಪೂರ್ವ ಗೆಲುವೇ ಉತ್ತಮ ಉದಾಹರಣೆ ಎಂದು ಹಿರಿಯ ಆರೆಸೆಸ್ಸ್ ಪ್ರಚಾರಕ್ ಅಭಿಪ್ರಾಯಪಡುತ್ತಾರೆ.
ಆದರೆ, ಆರೆಸೆಸ್ಸ್ ನ ಸಂಘಚಾಲಕ್, ಪ್ರಚಾರಕ್ ಮತ್ತು ಮುಖ್ಯಶಿಕ್ಷಕ್ ಆಗಿರುವವರು ರಾಜಕೀಯದಲ್ಲಿ ಸಕ್ರಿಯ ಪಾತ್ರ ನಿರ್ವಹಿಸುವುದರಿಂದ ತಡೆಯಲಾಗಿದ್ದು, ಈ ತಡೆ ಸ್ವಯಂ ಸೇವಕರಿಗೆ ಅನ್ವಯಿಸುವುದಿಲ್ಲ ಎಂದು ಕರ್ನಾಟಕ, ಆಂಧ್ರ ಮತ್ತು ತೆಲಂಗಾಣಗಳಿಗೆ ಕ್ಷೇತ್ರೀಯ ಸಂಘಚಾಲಕ್ ಆಗಿರುವ ವಿ. ನಾಗರಾಜ್ ಅಭಿಪ್ರಾಯಪಡುತ್ತಾರೆ.

ಮುರಳೀಧರ ಖಜನೆ
ಮೂಲ: ದಿ ಹಿಂದೂ
Photo Indiatoday