ಕಾಂಗ್ರೆಸ್ ಪಕ್ಷದ ಟ್ವೀಟ್ ಗೆ ಶರ್ಮಿಷ್ಠಾ ಮುಖರ್ಜಿ ತೀವ್ರ ಆಕ್ರೋಶ

0
675

ಕಾಂಗ್ರೆಸ್ ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ರಾಜೀವ್ ಗಾಂಧಿ ಮತ್ತು ಪ್ರಣಬ್ ಮುಖರ್ಜಿಯವರು ಇರುವ ಫೋಟೋವನ್ನು ಹಾಕಿ ಅದಕ್ಕೆ ಶ್ರೀ ರಾಜೀವ್ ಗಾಂಧಿ ಮತ್ತು ಪ್ರಣಬ್ ಮುಖರ್ಜಿಯವರು 1985ರಲ್ಲಿ ಎಂದು ಶೀರ್ಷಿಕೆ ಬರೆದು ಪೋಸ್ಟ್ ಮಾಡಲಾಗಿತ್ತು.

ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಶರ್ಮಿಷ್ಠಾ ಮುಖರ್ಜಿ, ಪ್ರಣಬ್ ಮುಖರ್ಜಿಯವರು ಇಂದಿನ ಭಾರತದ ರಾಷ್ಟ್ರಪತಿಗಳಾಗಿರುವುದರಿಂದ ಅವರ ಹೆಸರಿನ ಮೊದಲು ಶ್ರೀ ಸೇರಿಸುವ ಕನಿಷ್ಟ ಸೌಜನ್ಯವಾದರೂ ಇರಲಿ ಎಂದು ಪೋಸ್ಟ್ ಮಾಡಿದ್ದರು. ಶರ್ಮಿಳಾ ಟ್ವೀಟ್ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ತನ್ನ ಟ್ವೀಟ್ ಅಳಿಸಿ ಹಾಕಿದೆ.