By October 17, 2012 0 Comments

ಕಿಯಾಮತ್ ಉಂಟಾಗುವ ಲಕ್ಶಣಗಳೇನು? ದಯವಿಟ್ಟು ಉತ್ತರಿಸಿರಿ. …

ಕಿಯಾಮತ್ ಉಂಟಾಗುವ ಲಕ್ಶಣಗಳೇನು? ದಯವಿಟ್ಟು ಉತ್ತರಿಸಿರಿ.
 ಲೋಕಾಂತ್ಯವಾಗುವಾಗ ಕಿಯಾಮತ್ ಆಗುತ್ತದೆ. ಅದರ ಲಕ್ಷಣಗಳನ್ನು ಪ್ರವಾದಿ
ಮುಹಮ್ಮದ್(ಸ) ಒಂದು ಹದೀಸ್‍ನಲ್ಲಿ ವಿವರಿಸಿದ್ದಾರೆ. ಅವು ಹೀಗಿವೆ:
ಪ್ರವಾದಿಯವರು(ಸ) ಹೇಳಿದರು- ಹತ್ತು ಲಕ್ಷಣಗಳು ಒಂದರ ಹಿಂದೆ ಒಂದರಂತೆ ಗೋಚರಿಸದೆ
ಕಿಯಾಮತ್ ಬರಲಾರದು.
1) ಸೂರ್ಯನು ಪಶ್ಚಿಮದಿಂದ ಉದಯಿಸುವುದು 2) ಇಡೀ ಲೋಕವನ್ನು ಆವರಿಸಿಕೊಂಡಿರುವ ಒಂದು
ಹೊಗೆ 3) ಜನರೊಂದಿಗೆ ಮಾತನಾಡುವ ಒಂದು ಪ್ರಾಣಿ 4) ಯಅïಜೂಜ್-ಮಅïಜೂಜರ ಕ್ಷೋಭೆ 5)
ಈಸಾ(ಅ) ಬಿನ್ ಮರ್ಯಮ್‍ರ ಅವರೋಹಣ 6) ಭೀಕರವಾದ ಮೂರು ಭೂ ಕುಸಿತಗಳು 7) ಒಂದು
ಪಶ್ಚಿಮದಲ್ಲಿ 8) ಇನ್ನೊಂದು ಪೂರ್ವದಲ್ಲಿ 9) ಮತ್ತೊಂದು ಅರಬ್ ಪರ್ಯಾಯ ದ್ವೀಪದಲ್ಲಿ
10) ಏಡನ್‍ನಿಂದ ಏಳುವ ದಳ್ಳುರಿಯೊಂದು ಜನರನ್ನು ಅಟ್ಟಿಕೊಂಡು ಹೋಗುವುದು.
(ಮುಸ್ಲಿಮ್)
ಇನ್ನೊಂದು ಹದೀಸ್‍ನಲ್ಲಿ ಮೇಲೆ ಪ್ರಸ್ತಾಪಿಸಿದ ಹೊಗೆಯ ಕುರಿತು ಹೀಗೆ ಹೇಳಿದ್ದಾರೆ- ಆ
ಹೊಗೆ ಆವರಿಸಿದಾಗ ಸತ್ಯವಿಶ್ವಾಸಿಗೆ ಶೀತ ಬಾಧೆಯಾ ದಂತಾಗುವುದು. ಸತ್ಯನಿಷೇಧಿಗೆ
ಉಸಿರು ಕಟ್ಟಿದಂತಾಗುವುದು.
ಮೇಲಿನ ಹದೀಸ್‍ನಲ್ಲಿ ಯಅïಜೂಜ್-ಮಅïಜೂಜ್‍ರ ಕುರಿತೂ ಪ್ರಸ್ತಾಪಿಸಲಾಗಿದೆ.
ಯಅïಜೂಜ್-ಮಅïಜೂಜ್ ಎಂದರೆ ಇಬ್ಬರು ವ್ಯಕ್ತಿಗಳ ಹೆಸರಲ್ಲ. ಅದು ಪುರಾತನ ಕಾಲದಿಂದಲೂ
ನಾಗರಿಕ ಸಮಾಜಗಳನ್ನು ಕೊಳ್ಳೆ ಹೊಡೆಯುತ್ತಿದ್ದ ಏಶ್ಯಾ ಖಂಡದ ಈಶಾನ್ಯ ಭಾಗದಲ್ಲಿ
ವಾಸಿಸುತ್ತಿದ್ದ ಎರಡು ಜನಾಂಗಗಳಾಗಿವೆ. ಅವರು ಏಶ್ಯಾದ ದೇಶಗಳ ಮೇಲೆ ಮಾತ್ರವಲ್ಲ,
ಯುರೋಪಿನ ರಾಷ್ಟ್ರಗಳ ಮೇಲೂ ಆಕ್ರಮಣ ನಡೆಸಲು ನುಗ್ಗಿ ಬರುತ್ತಿದ್ದರು. ಅವರ
ಕಿರುಕುಳದಿಂದ ಬೇಸತ್ತ ಜನಾಂಗಗಳು ದುಲ್‍ಕರ್ನೈನ್ ಚಕ್ರವರ್ತಿಯ ವಿಜಯ ಯಾತ್ರೆಯ ವೇಳೆ
ಆತನೊಂದಿಗೆ ಅವರು ಬರದಂತೆ ಮಾಡಲು ಒಂದು ತಡೆಗೋಡೆ ಕಟ್ಟಿಕೊಡಬೇಕೆಂದು
ವಿನಂತಿಸಿದ್ದರು. ಅದರಂತೆ ಅವನು ದೀರ್ಘವಾದ ಒಂದು ಉಕ್ಕಿನ ಗೋಡೆಯನ್ನು
ಕಟ್ಟಿಸಿದ್ದನು. ಅದರಿಂದಾಗಿ ಅವರ ಆಕ್ರಮಣದ ಸರಣಿ ನಿಂತಿತ್ತು. ಇನ್ನು ಕಿಯಾಮತ್
ಹತ್ತಿರವಾಗುವಾಗ ಆ ಜನಾಂಗಗಳೂ ಮುಂದುವರಿದು ಎಲ್ಲೆಡೆ ಆಕ್ರಮಣ ನಡೆಸುವಂತಹ ಶಕ್ತಿ
ಗಳಿಸಲೂಬಹುದು. ಆಗ ಅವು ಇನ್ನೊಮ್ಮೆ ಕ್ಷೋಭೆ ಹರಡಲೂ ಬಹುದು. ಅವರ ಈ ಪುನರಾಗಮನವನ್ನು
ಪ್ರಸ್ತುತ ಹದೀಸ್‍ನಲ್ಲಿ ಕಿಯಾಮತ್‍ನ ಲಕ್ಷಣಗಳಲ್ಲೊಂದೆಂದು ಸಾರಲಾಗಿದೆ.

Post a Comment