ಕುದುರೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟ ರಾಜ್ಯಪಾಲ

0
353

: ಎ.ಎಸ್. ಸುರೇಶ್ ಕುಮಾರ್
ನವದೆಹಲಿ; ಕುದುರೆ ವ್ಯಾಪಾರಕ್ಕೆ ಹೊರಟವರನ್ನು ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿದ್ದಾರೆ. ಅತೀ ದೊಡ್ಡ ಪಕ್ಷವಾಗಿದ್ದೂ ಆಡಳಿತ ನಡೆಸುವಷ್ಟು ಬಹುಮತ ದೊರೆಯದೆ ಕಂಗಾಲಾಗಿ ವಿರೋಧ ಪಕ್ಷದ ಶಾಸಕರನ್ನು ಖರೀದಿಸುವ ಪ್ರಯತ್ನಗಳನ್ನು ಕಂಡೂ ಕಾಣದಂತೆ ನಟಿಸಿದ ರಾಜ್ಯಪಾಲ ವಜೂ ಬಾಯಿವಾಲಾರವರು ಯಡಿಯೂರಪ್ಪರನ್ನು ಸರಕಾರ ರಚಿಸಲು ಆಹ್ವಾನಿಸಿದರು. ಈ ಮೂಲಕ ರಾಜ್ಯಪಾಲರ ಪಕ್ಷಪಾತಿತನ ಹಸಿಯಾಗಿ ಗೋಚರಿಸುತ್ತಿವೆ.
ಬಹುಮತ ಸಾಬೀತು ಪಡಿಸಲು ಸಾಕಷ್ಟು ಸಮಯ ಬಿಜೆಪಿಗೆ ದೊರೆಯುತ್ತಿದೆ. ಕುದುರೆ ವ್ಯಾಪಾರದ ಹೊರತು ಬಹುಮತ ಸಾಬೀತು ಪಡಿಸಲು ಸಾಧ್ಯವಿಲ್ಲ. ಪಕ್ಷಾಂತರ ವಿರೊಧಿ ಕಾಯ್ದೆಯ ವ್ಯಾಪ್ತಿಯಲ್ಲಿ ಬರುವ ಅನೈತಿಕತೆಗೆ ಬಿಜೆಪಿ ಮುಂದಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಆದರೆ ಈ ವಾಸ್ತವವನ್ನು ಅರಿತ ವಜುಬಾಯಿ ವಾಲಾ ಕಣ್ಣು ಮುಚ್ಚಿ ತೆಪ್ಪಗಿದ್ದಾರೆ.
ತಮ್ಮೊಂದಿಗಿರುವ ಎಲ್ಲಾ ಶಾಸಕರನ್ನು ರಾಜ್ಯಪಾಲರ ಮುಂದೆ ಹಾಜರು ಪಡಿಸುವೆವು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಹೇಳಿರುವುದನ್ನು ಕಡೆಗಣಿಸಿ ರಾಜ್ಯಪಾಲರು ಯಡಿಯೂರಪ್ಪರನ್ನು ಸರಕಾರ ರಚಿಸಲು ಆಹ್ವಾನಿಸಿದ್ದಾರೆ. ಸ್ಪಷ್ಟ ಬಹುಮತ ವಿರುವವರನ್ನು ದೂರವಿಟ್ಟು ಬಹುಮತವಿಲ್ಲದ ಅತಿ ದೊಡ್ಡ ಪಕ್ಷವನ್ನು ಆಹ್ವಾನಿಸಿದರು.
ನೂರು ಕೋಟಿ ರೂಪಾಯಿ ವರೇಗೆ ಶಾಸಕರಿಗೆ ಆಮಿಶ ನೀಡುತ್ತಿದ್ದಾರೆಂದು ಹೇಳಿ ಕುಮಾರ ಸ್ವಾಮಿ ಸರಕಾರ ರಚನೆಗೆ ನೀಡಿದ ಮನವಿಯನ್ನು ರಾಜ್ಯಪಾಲರು ಕೇಳಿಸಿಕೊಳ್ಳಲಿಲ್ಲ.
ದೆಹಲಿಯಲ್ಲಿ ರಿಮೋಟ್ ಕಂಟ್ರೋಲ್ ಮುಖಾಂತರ ನಿಯಂತ್ರಸಲಾಗುತ್ತದೆಯೆಂಬುದು ಈ ಎಂಬತ್ತರ ಹರೆಯದ ರಾಜ್ಯಪಾಲರ ನಡೆ ಬಹಿರಂಗಪಡಿಸುತ್ತಿದೆ. ಗೋವಾ, ಮಣಿಪುರ ಮುಂತಾದೆಡೆ ಅತಿದೊಡ್ಡ ಪಕ್ಷವಾದ ಕಾಂಗ್ರೆಸನ್ನು ದೂರವಿರಿಸಿ ಸಣ್ಣ ಪಕ್ಷವನ್ನು ಕರೆದು ಅಧಿಕಾರ ಅನುಭವಿಸುತ್ತಿರುವ ಬಿಜೆಪಿ ಕರ್ನಾಟಕದಲ್ಲಿ ಬಣ್ಣ ಬದಲಾಯಿಸಿದೆ.  ರಾಜ್ಯಪಾಲರ ನಡೆಯ ವಿರುದ್ಧ ಕಾನೂನು ಹೋರಾಟಕ್ಕೆ ಕಾಂಗ್ರೆಸ್ ಮುಂದಾಗಿದೆ. ಬೊಮ್ಮಾಯಿ ಪ್ರಕರಣದ ಸುಪ್ರೀಮ್ ಕೋರ್ಟಿನ ತೀರ್ಮಾನ ನಮ್ಮ ಪರವೆಂಬ ವಾದವೂ ಕಾಂಗ್ರೆಸ್‍ಗಿದೆ. ಚುನಾವಣೆಗಿಂತ ಮುಂಚಿನ ಅತೀ ದೊಡ್ಡ ಮೈತ್ರಿ ಕೂಟ ಅಥವಾ ಚುನಾವಣೆಯ ನಂತರದ ಅತೀ ದೊಡ್ಡ ಮೈತ್ರಿ ಕೂಟ ಗಳಿಗೆ ಅವಕಾಶ ನೀಡಿದ ಬಳಿಕ ಸರಳ ಬಹುಮತವಿಲ್ಲದ ಅತೀ ದೊಡ್ಡ ಪಕ್ಷವನ್ನು ಪರಿಗಣಿಸಬೇಕು ಎಂಬುದು ಬೊಮ್ಮಾಯಿ ಪ್ರಕರಣದ ನ್ಯಾಯಾಲಯದ ತೀರ್ಮಾನವಾಗಿದೆ