ಕುದ್ಸ್ ನ ಕಾವಲು ಭಟರಿಗೆ ಕೃತಜ್ಞತೆಗಳು

0
512

ಪವಿತ್ರ ನಗರದ ಮತ್ತು ಅಲ್ಲಿನ ಮಸೀದಿಯ, ಆರಾಧಾನಾಲಯಗಳ ಅರಬ್ ಅಸ್ಮಿತೆಯನ್ನು ಉಳಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು, ಮಸ್ಚಿದುಲ್ ಅಕ್ಸಾವನ್ನು ಅತಿಕ್ರಮಣ ಕೋರರ ಬಂಧನದಿಂದ ಬಿಡುಗಡೆಗೊಳಿಸಲು, ಅದರ ಮೇಲಿರುವ ಇಸ್ರೇಲಿನ ದಿ ಗ್ಬಂಧನವನ್ನು ಕೊನೆಗೊಳಿಸಲಿಕ್ಕಾಗಿ, ಫೆಲೆಸ್ತೀನ್‍ನ ನಾಲ್ದೆಸೆಗಳಿಂದ ಹತ್ತಾರು, ನೂರಾರು, ಸಾವಿರಾರು ಮಂದಿಯ ತಂಡ ಮಸ್ಚಿದುಲ್ ಅಕ್ಸಾಕ್ಕೆ ಹೊರಟು ನಿಂಂತಿದೆ. ಇವರು ಕುದ್ಸ್‍ನ ಕಾವಲು ಭಟರು. ರಕ್ಷಣೆಗಾಗಿ ಹೊರಟು ನಿಂತವರು. ಹೌದು ಮಸ್ಚಿದುಲ್ ಅಕ್ಸಾದ ಒಂದು ಜುಮಾ ನಮಾಝ್‍ನ್ನು ಭದ್ರ ತೆಯ ಕಾರಣವೊಡ್ಡಿ ಇಸ್ರೇಲ್ ತಡೆದದ್ದೇ ಇತ ರೆಲ್ಲ ವಿಚಾರಕ್ಕಿಂತ ಅಕ್ಸಾ ರಕ್ಷಣೆಯ ವಿಚಾರದಲ್ಲಿ ವಿಶ್ವಾಸಿಗಳನ್ನು ಪ್ರೇರೇಪಿಸಿದೆ. ಅದರ ರಕ್ಷಣೆಗೆ ಈಗ ಹೊರಟು ನಿಂತವರಿಂದ ರಕ್ತ ಸಾಕ್ಷ್ಯ ಅರ್ಥಾತ್ ಹುತಾತ್ಮರಾಗುವುದನ್ನು ಬಿಟ್ಟರೆ ಇನ್ನೇನೂ ಸಾಧ್ಯವಿಲ್ಲ. ಅವರ ಬಳಿ ಜೀವವೊಂದು ಇದೆ. ತ್ಯಾಗಕ್ಕೆ ಅವರಲ್ಲಿ ಇನ್ನೇನೂ ಇಲ್ಲ. ಇಸ್ರೇಲಿನ ಆಜ್ಞಾಧಿಕಾರಿಗಳಿಗೆ ಮಣಿಯಲು ಅವರು ಸರ್ವಥಾ ಸಿದ್ಧರಿಲ್ಲ. ಪವಿತ್ರ ಮಸ್ಚಿದುಲ್ ಅಕ್ಸಾದ ಪ್ರತಿಯೊಂದು ಆದಾನ್ ಕರೆಯೊಂದಿಗೂ ಈ ಭವನದ ರಕ್ಷಣೆಗೆ ಅರ್ಹರಾದ ಜನರು ನಾವೆಂದು ಅವರು ಘೋಷಿಸುತ್ತಿದ್ದಾರೆ.