ಕೆಪಿಎಂಇ KPME ಮಸೂದೆ ಎಂದರೆ ಏನು ಮತ್ತು ಯಾಕೆ?

0
943

‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ– 2017’
ಶೀಘ್ರ ಜಾರಿಯಾಗಲಿ…ಬಡರೋಗಿಗಳನ್ನು ಕಾಪಾಡಲಿ
ಖಾಸಗಿ ಆಸ್ಪತ್ರೆಗಳ ಧನದಾಹಕ್ಕೆ ಎಲ್ಲ ವರ್ಗದ ಜನರೂ ಬಲಿಯಾಗುತ್ತಿದ್ದಾರೆ. ವೈದ್ಯಕೀಯ ವರದಿಗಳನ್ನು ತಿರುಚುವುದು, ಇಲ್ಲದ ರೋಗ ಇದೆ ಎಂದು ವಿವಿಧ ತಪಾಸಣೆ ಮಾಡಿಸುವುದು, ರೋಗಿ ಸತ್ತ ಮೇಲೂ ಹೆಣವನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಹಣ ಮಾಡಿಕೊಳ್ಳುವುದು ಇವೆಲ್ಲವೂ ಜನ ಸಾಮಾನ್ಯರ ಅನುಭವಗಳಾಗಿವೆ.
ಈ ಅಮಾನವೀಯ ಕೃತ್ಯಕ್ಕೆ ಕಡಿವಾಣ ಹಾಕಲೇಬೇಕಿದೆ.
ಖಾಸಗಿ ಆಸ್ಪತ್ರೆಗಳ ಮೇಲ್ವಿಚಾರಣೆಗೆ ರಾಜ್ಯದಲ್ಲಿರುವ ಏಕೈಕ ಕಾಯ್ದೆಯಾದ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ– 2007’ರಲ್ಲಿ (ಕೆಪಿಎಂಇ) ಇಂತಹ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಯಾವುದೇ ಕಲಮುಗಳು ಇಲ್ಲ.
ಈ ಸಂಕಷ್ಟ ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ– 2007’ರಲ್ಲಿ (ಕೆಪಿಎಂಇ) ಜಾರಿಗೆ ತರಲು ಮುಂದಾಯಿತು.
ನಿವೃತ್ತ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಅಧ್ಯಯನ ನಡೆಸಿ ತನ್ನ ವರದಿ ಸಲ್ಲಿಸಿದೆ. ನೂತನ ಮಸೂದೆಯ ಅಗತ್ಯವನ್ನು ಹೇಳಿದೆ.

ಮಸೂದೆಯಲ್ಲಿರುವ ಪ್ರಮುಖ ಅಂಶಗಳೇನು?

* ರಾಜ್ಯ ಸರ್ಕಾರ ನಿಗದಿಪಡಿಸುವುದಕ್ಕಿಂತ ಹೆಚ್ಚಿನ ಶುಲ್ಕವನ್ನು ಖಾಸಗಿ ಆಸ್ಪತ್ರೆಯವರು ವಸೂಲು ಮಾಡಿದರೆ ₹ 25 ಸಾವಿರದಿಂದ ₹ 5 ಲಕ್ಷದವರೆಗೆ ದಂಡ ಮತ್ತು ಆರು ತಿಂಗಳಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ.
* ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೋಗಿಯಿಂದ ಅಥವಾ ಅವರ ಪ್ರತಿನಿಧಿಯಿಂದ ಮುಂಗಡ ಪಾವತಿಸುವಂತೆ ಒತ್ತಾಯಿಸುವಂತಿಲ್ಲ.
* ಆಸ್ಪತ್ರೆಯಲ್ಲಿ ಯಾವುದೇ ವ್ಯಕ್ತಿ ಮೃತಪಟ್ಟರೆ ಸಂಬಂಧಿಕರಿಗೆ ದೇಹ ಹಸ್ತಾಂತರಿಸುವ ಮೊದಲು ಬಾಕಿ ಮೊತ್ತ ಪಾವತಿಸುವಂತೆ ಒತ್ತಾಯಿಸುವಂತಿಲ್ಲ.
* ಬಾಕಿ ಮೊತ್ತವನ್ನು ನಂತರ ಸಂಗ್ರಹಿಸಬಹುದು…. ಹೀಗೆ ಬಡ ರೋಗಿಳ ರಕ್ಷಣೆಗೆ ಹಲವು ಬದಲಾವಣೆಗಳು ನೂತನ ವಿಧೇಯಕದಲ್ಲಿರಲಿದೆ.
* ಈ ಕಾಯ್ದೆ ಜಾರಿಯಾದಲ್ಲಿ ಖಾಸಗಿ ಆಸ್ಪತ್ರೆಗಳಿಂದ ಆಗುತ್ತಿರುವ ತೊಂದರೆಗಳು ತಪ್ಪಲಿದ್ದು, ಬಡರೋಗಿಗಳ ರಕ್ಷಣೆಯಾಗಲಿದೆ.