ಕೋರೆಗಾಂವ್: ಹೊಸ ಚಳವಳಿಗೆ ಮುನ್ನುಡಿಯೇ?

0
273

ಹೊಸ ವರ್ಷದ ಆರಂಭದಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ದಲಿತರಾದ ಮಹಾರ್ ಸಮುದಾಯ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದ ವಿರುದ್ಧ ಮೇಲ್ವರ್ಗದ ತೀವ್ರವಾದಿಗಳು ನಡೆಸಿದ ದಾಳಿಯ ನಂತರ ಪ್ರತಿಭಟನೆ ಮತ್ತು ಹರತಾಳಗಳೆಲ್ಲವೂ ರಾಷ್ಟ್ರ ಮಟ್ಟದಲ್ಲಿ ಚರ್ಚಾ ವಿಷಯವಾಗಿದ್ದು ಈ ಘಟನೆಗೆ ರಾಜಕೀಯ ಮತ್ತು ಸಾಮಾಜಿಕವಾದ ಹಲವು ವ್ಯಾಖ್ಯಾನಗಳಿರುವುದರಿಂದ ವಿಷಯ ಪಾರ್ಲಿಮೆಂಟಿನಲ್ಲಿಯೂ ಪ್ರಕ್ಷುಬ್ದತೆ ಸೃಷ್ಟಿಸಿತು.

ಜನವರಿ ಒಂದಕ್ಕೆ ಭೀಮಾ-ಕೊರೆಗಾಂವ್ ಯುದ್ಧಕ್ಕೆ 200 ವರ್ಷಗಳು ಸಂದ ಹಿನ್ನೆಲೆಯಲ್ಲಿ ಜನವರಿ 1ರಂದು ಸಂಭ್ರಮಾ ಚರಣೆಯಲ್ಲಿ ತೊಡಗಿದ್ದ ದಲಿತ ಸಮುದಾಯದ 10 ಲಕ್ಷ ಮಂದಿಯ ಮೇಲೆ ಮೇಲ್ವರ್ಗದ ಮಂದಿ ದಾಳಿ ಮಾಡಿದ್ದರಿಂದ ರಾಜ್ಯವ್ಯಾಪಿ ಪ್ರತಿಭಟನೆ ಹೋರಾಟಗಳು ನಡೆದುವು. ಇದರಲ್ಲಿ ಎರಡು ಮಂದಿಯ ಜೀವ ಹೋಯಿತು. ದಲಿತ ನಾಯಕ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಭೇಡ್ಕರ್ ಬಂದ್‍ಗೆ ಕರೆ ಕೊಟ್ಟರು. ಮುಂಬೈ ಮಹಾನಗರ ಜನಜೀವನ ಸ್ಥಂಭನಗೊಂಡಿತ್ತು. ಮೆಟ್ರೊ ಸಹಿತ ರೈಲುಗಳು ಮಾತ್ರವಲ್ಲ ವಿಮಾನಗಳ ಹಾರಾಟ ಕೂಡಾ ದಾರಿ ತಪ್ಪಿತು.

ಇಷ್ಟೊಂದು ಪ್ರತಿಭಟನೆಯ ಜ್ವಾಲೆ ಈ ಹಿಂದೆ ಮುಂಬೈಯಲ್ಲಿ ನಡೆದಿಲ್ಲ ಎನ್ನಬಹುದಾದಷ್ಟು ದಲಿತರ ಪ್ರತಿಭಟನೆಯ ಕಾವಿತ್ತು. ಪರಿಸ್ಥಿತಿ ತೀವ್ರಗತಿಯಲ್ಲಿ ಕೆಟ್ಟು ಹೋಗುವ ಸಾಧ್ಯತೆಯನ್ನು ಮನಗಂಡು 24 ಗಂಟೆಗಳ ಕಾಲದ ಬಂದ್‍ನ್ನು ಸಂಜೆಯೇ ಹಿಂದಕ್ಕೆ ಪಡೆಯಲಾಗಿತ್ತು. ಆದರೆ ದಲಿತರ ಆಕ್ರೋಶ ದೇಶದಾದ್ಯಂತ ಬೆಂಕಿಯುಂಡೆಯಂತಿದೆ.
ಪುಣೆ ಸಮೀಪದ ಭೀಮಾ ಕೊರೆಗಾಂವ್ ಎನ್ನುವ ಕುಗ್ರಾಮ ಇತಿಹಾಸದಲ್ಲಿ ಜಾಗಪಡೆದದ್ದು ಎರಡನೆ ಬಾಜಿರಾವ್ ನೇತೃತ್ವದ ಪೇಶ್ವೆ ¸ಸೈನ್ಯವನ್ನು 1818 ಜನವರಿ ಒಂದಕ್ಕೆ ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿಯ ಸೈನ್ಯದ ಅಧೀನದಲ್ಲಿದ್ದ ದಲಿತ ಹೋರಾಟ ಗಾರರು ಸೋಲಿ ಸಿದ್ದರಿಂದ. ಅಂದು ಈಸ್ಟ್ ಇಂಡಿಯ ಕಂಪೆನಿಯ 200 ಸೈನಿಕರು ಕೊಲ್ಲಲ್ಪಟ್ಟಿದ್ದರು. ಪೇಶ್ವೆಗಳ 500 ಸೈನಿಕರು ಬಲಿಯಾಗಿದ್ದರು. ಕಂಪೆನಿಯ ಕಡೆಯಲ್ಲಿ ಸತ್ತವರಲ್ಲಿ 22 ಮಂದಿ ಮಹಾರ್ ಜಾತಿಯವರಿದ್ದರು. ತಮ್ಮನ್ನು ಸಾಮಾಜಿಕವಾಗಿ ದಮನಿಸು ತ್ತಿರುವ, ಅಸ್ತಿತ್ವವವನ್ನೇ ನಿರಾಕರಿ¸ಸುತ್ತಿದ್ದ ಬ್ರಾಹ್ಮಣ ಪೇಶ್ವೆಗಳ ವಿರುದ್ಧ ಹೋರಾಡಲಿಕ್ಕಾಗಿಯೇ ಮಹಾರ್ ಜಾತಿಯವರು ಬ್ರಿಟಿಷರ ಸೈನ್ಯಕ್ಕೆ ಸೇರಿದ್ದರು. ಕೊರಗಾಂವ್‍ನ ವಿಜಯ ಬ್ರಾಹ್ಮಣರ ಆಧಿಪತ್ಯದ ವಿರುದ್ಧದ ವಿಜಯವಾಗಿ ಮಹಾರ್ ಜಾತಿಯ ದಲಿತರು ಘೋಷಿಸಿದರು. ಬ್ರಿಟಿಷರು ಗ್ರಾಮದಲ್ಲಿ ಸ್ಥಾಪಿಸಿದ್ದ ವಿಜಯ ಸ್ಮಾರಕದ ಸಮೀಪ ಪ್ರತಿ ವರ್ಷವೂ ಜನವರಿ 01 ರಂದು ಮಹಾರ್ ಜನರು ಒಟ್ಟು ಸೇರುತ್ತಿದ್ದರು. ಬಲಿದಾನ ನೀಡಿದವರಿಗೆ ಕಂಬನಿ ಅರ್ಪಿಸುವುದು ರೂಢಿಯಾಗಿತ್ತು. 1927ರಲ್ಲಿ ಅಂಬೇಡ್ಕರ್ ಅಂತಹ ದೊಂದು ಕಾರ್ಯಕ್ರಮದಲ್ಲಿ ಭಾಗ ವಹಿಸುವುದರೊಂದಿಗೆ ಮೂಲೆಗೊತ್ತಲ್ಪ ಟ್ಟಿದ್ದ ಜನ ವಿಭಾಗದ ಆತ್ಮವಿಶ್ವಾಸ ಉಜ್ವಲಗೊಳ್ಳುವಂತಾಯಿತು.
ಈ ಸಲ 200ನೇ ವರ್ಷಾಚರಣೆ ಆಗಿದ್ದುದರಿಂದ ದೇಶಾದ್ಯಂತ ವಿವಿಧ ಕಡೆಗಳಿಂದ ದಲಿತರು ಪುಣೆಗೆ ಹರಿದು ಬಂದರು. ಮಾತ್ರವಲ್ಲ ಭೀಮ್ ಆರ್ಮಿ ಅಧ್ಯಕ್ಷ ವಿನಯ್ ರತನ್ ಸಿಂಗ್, ಪ್ರಕಾಶ್ ಅಂಬೆಡ್ಕರ್, ಗುಜರಾತ್‍ನ ಹೊಸ ದಲಿತ ಮುಖ ಜಿಗ್ನೇಶ್ ಮೇವಾನಿ ಮುಂತಾದವರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು. ದಲಿತ ಸಮುದಾಯದಲ್ಲದಾದ ಈ ಹೊಸ ಜಾಗೃತಿಯು ತೀವ್ರ ಬಲಪಂಥೀಯ ಗುಂಪುಗಳನ್ನು ಮತ್ತು ಹಿಂದುತ್ವ ಶಕ್ತಿ ಗಳನ್ನು ದಿಗ್ಭ್ರಮೆಗೊಳಿಸಿದ್ದು ಸಹಜವೇ. ದಲಿತರ ವಿರುದ್ಧ ದಾಳಿ ನಡೆಸಲು ಅವರಿಗೆ ಇದೇ ಪ್ರೇರಣೆಯಾಗಿರ ಬಹುದು.

ಮಹಾರಾಷ್ಟ್ರದ ಹೊಸ ಬೆಳವಣಿ ಗಳು ರಾಷ್ಟ್ರಮಟ್ಟದಲ್ಲಿ ದಲಿತ, ಹಿಂದು ಳಿದ, ದುರ್ಬಲ ವಿಭಾಗಗಳ ನಡುವೆ ಬೆಳೆಯುತ್ತಿರುವ ಹೊಸ ಜಾಗೃತಿಯನ್ನು ಪ್ರತಿಫಲನಗೊಳಿಸುತ್ತಿದೆ. ಅವರು ಸಶಕ್ತೀಕರಣದ ಹೆಜ್ಜೆಯಲ್ಲಿ ಸಾಗುತ್ತಿದ್ದಾರೆ ಎನ್ನುವುದನ್ನು ತೋರಿಸಿಕೊಡುತ್ತಿದೆ. ಗುಜರಾತ್‍ನ ಉನಾದಲ್ಲಿ ಸತ್ತ ಗೋವು ಗಳ ಚರ್ಮ ಸುಲಿದಿದ್ದಾರೆ ಎಂಬ ಆರೋಪದಲ್ಲಿ ದಲಿತ ಯುವಕರನ್ನು ಕ್ರೂರವಾಗಿ ಹೊಡೆದ ಘಟನೆಯ ಪ್ರತಿಕಾರವೆನ್ನುವಂತೆ ಬೆಳೆದು ಬಂದ ಜಿಗ್ನೆಶ್ ಮೇವಾನಿ, ಸಹಸ್ರಾಬ್ದಗಳಿಂದ ಅನುಭವಿಸುತ್ತ ಬಂದ ಜಾತೀಕೃತ ಉಚ್ಚನೀಚತೆಗಳಿಂದ ವಿಮೋಚನೆಯ ಪ್ರತೀಕವಾಗಿ ಬದಲಾಗುವಾಗ ದೇಶದ ಯಾವ ಮೂಲೆಯಲ್ಲಿಯೂ ಜಿಗ್ನೇಶ್ ಗಳು ಹುಟ್ಟುವುದರಲ್ಲಿ ಆಶ್ಚರ್ಯವಿಲ್ಲ. ಇದುವರೆಗೆ ತಮ್ಮ ಕಡಿವಾಣದ ಅಡಿ ಯಲ್ಲಿ ಕಷ್ಟದಲ್ಲಿ ಬದುಕಿದ ದುರ್ಬಲ ವಿಭಾಗಗಳು ಅವರ ಅಸ್ತಿತ್ವವನ್ನು ಮರಳಿ ಗಳಿಸುವುದು ಮತ್ತು ರಾಜ ಕೀಯ ಅಸ್ತಿತ್ವವನ್ನು ಮರುಗಳಿಸುವು ದಕ್ಕೆ, ಏಕೀಕೃತ ಹಿಂದೂ ಮತ ಬ್ಯಾಂಕ್‍ನಲ್ಲಿ ತಮ್ಮ ರಾಜಕೀಯ ಭವಿಷ್ಯದ ಕನಸು ಕಾಣುತ್ತಿರುವ ಹಿಂದುತ್ವ ಶಕ್ತಿಗಳನ್ನು ಕಷ್ಟಕ್ಕೊಳಪಡಿಸು ತ್ತಿರಬಹುದು. ಅದಕ್ಕೆ ಅವರು ಫ್ಯಾಶಿಸ್ಟ್ ಶೈಲಿ ಅಳವಡಿಸಿಕೊಂಡರು. ಇದ ರಿಂದಾಗಿ ಅವರು ದಲಿತ ಏಕೀಕರಣ ಸುಲಭಗೊಳಿಸಿದರು. ಸಾಮಾಜಿಕ ಸ್ಪರ್ಧಿಗಳ ವಿರುದ್ಧ ತೀವ್ರ ಹೋರಾಡಲಿ ಕ್ಕಾಗಿ ಅಕ್ರಮಕ್ಕೆ ಇಳಿದ ದುಃಶಕ್ತಿಗಳ ಕಣ್ಣುಗಳನ್ನು ಮೇಲಿನ ಘಟನೆ ತೆರೆಸಬೇಕಾಗಿದೆ. ಮಹಾರ್ ಜನರು ಸಾಮಾಜಿಕ ಅಂಗೀಕಾರಕ್ಕಾಗಿ ಅತಿ ಸಮರ್ಥರು ಎನ್ನುವುದನ್ನು ¸ಸಂಘಪರಿ ವಾರ ನೇತೃತ್ವ ನೆನೆಯಬೇಕಿತ್ತು. ಛತ್ರಪತಿ ಶಿವಾಜಿಯ ಅಡಿಯಲ್ಲಿ ಸೈನಿಕನಾಗಿ ಉನ್ನತ ಪದವಿಗಳಿಸಲು ಇವರಿಗೆ ಭಾಗ್ಯ ಸಿಕ್ಕಿತ್ತು. ಆದರೆ, ಪೇಶ್ವೆ ಆಡಳಿತ ದಲ್ಲಿ ಅಸ್ಪøಶ್ಯತೆ ಇವರ ಜೀವನವನ್ನು ಕಷ್ಟಕರಗೊಳಿಸಿತು. ತಾವು ನಡೆದು ಬಂದ ಹೆಜ್ಜೆಗಳನ್ನು ಮಾಯುವಂತೆ ಮಾಡುವುದನ್ನು ಸಹಿಸದ ಹೊಸ ತಲೆಮಾರು ಕೋಪೋದ್ರಿಕ್ತವಾಗಿದ್ದು ನಿಜ. ಅಧಿಕಾರ ಬಲ ಉಪಯೋಗಿಸಿ ಒಂದು ಜನವಿಭಾಗದ ಪ್ರಗತಿಯನ್ನು ತಡೆಯಬಹುದೆಂದು ತಿಳಿಯುವುದು ಶುದ್ಧ ಮೂರ್ಖತನವಾಗಿದೆ. ಸಾಮಾಜಿಕ ಅಸ್ತಿತ್ವ ಮರಳಿಗಳಿಸುವ ಇವರು ನಾಳಿನ ಭಾರತದ ಪಾತ್ರವನ್ನು ನಿರ್ಣಯಿಸು ವವರು ಆಗಿರುತ್ತಾರೆನ್ನುವುದನ್ನು ಮರೆಯಬಾರದು.