ಗಗನಕ್ಕೇರಿದ ಬಝ್ ಬದುಕಿನಲ್ಲಿ ಸೋತರೇ?

0
445

ಮನುಷ್ಯ ಎಷ್ಟು ಎತ್ತರಕ್ಕೂ ಏರಬಹುದು. ಚಂದ್ರನ ಮೇಲೆಯೂ ಹತ್ತಬಹುದು. ಆದರೆ ಮನುಷ್ಯನಾಗಿ ಯಶಸ್ಸು ಅಷ್ಟು ಸುಲಭದಲ್ಲಿ ದಕ್ಕುವಂತಹದ್ದಲ್ಲ ಎನ್ನುವುದು ನೀಲ್ ಅರ್ಮ್ ಸ್ಟ್ರಾಂಗ್‍ರ ಸಹಗಗನ ಯಾತ್ರಿಯಿಂದ ನಮಗೆ ತಿಳಿದು ಬರುತ್ತದೆ. ಆರ್ಮ್‍ಸ್ಟ್ರಾಂಗ್ ನಂತರ ಚಂದ್ರಗ್ರಹದಲ್ಲಿ ಎರಡನೆಯ ಹೆಜ್ಜೆ ಊರಿದವರು ಬಝ್ ಅಲ್ಡ್ರಿನ್. ಬಝ್ ಈಗ ಸುದ್ದಿಯಾಗಿರುವುದು ಗಗನ ಯಾತ್ರೆಗಾಗಿಯಲ್ಲ. ಕುಟುಂಬದ ಕಾರಣದಿಂದ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಕ್ಕಳು ಮತ್ತು ಮ್ಯಾನೇಜರ್ ತನ್ನ ಆಸ್ತಿಯನ್ನು ಕಬಳಿಸುತ್ತಿದ್ದಾರೆ ಎಂದು ಬಝ್ ದೂರು ಕೊಟ್ಟಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆಗಿಳಿದಿದ್ದಾರೆ. ತಂದೆಯ ವಯೊ ಸಹಜ ತೊಂದರೆಯಿದು, ಅವರು ಬಳಲಿದ್ದಾರೆ ಎಂದು ಕುಟುಂಬವು ಬಝ್‍ರ ದೂರಿನ ಕುರಿತು ಪ್ರತಿಕ್ರಿಯಿಸಿದೆ. 88 ವರ್ಷ ಪ್ರಾಯದ ಬಝ್ ಚಂದ್ರನೆತ್ತರ ಏರಿಯೂ ಜೀವನದಲ್ಲಿ ಈಗ ನೆಮ್ಮದಿ ಕಾಣದಾಗಿದ್ದಾರೆ.
ಇಂತಹ ಬಝ್ ಯಾನೆ ಎಡ್ವಿನ್ ಯೂಜಿನ್ ಅಲ್ಡ್ರಿನ್ ಜೂನಿಯರ್ ತನ್ನ ಆ ದಿನಗಳಲ್ಲಿ ಸಾಮಾನ್ಯರಲ್ಲ. ಅಮೆರಿಕದ ಇಂಜಿನಿಯರ್, ಏರ್‍ಫೆರ್ಸ್‍ನ ಕಮಾಂಡ್ ಪೈಲಟ್, ಆಕಾಶಕ್ಕೇರಿದ ನೌಕೆಗೂ ಪೈಲಟ್, ಆರ್ಮ್‍ಸ್ಟಾಂಗ್‍ರ ಸಹಯಾತ್ರಿಕ ಮಾತ್ರವಲ್ಲ ಆ ದಿನಗಳಲ್ಲಿ ಅರ್ಥಾತ್ ಯೌವ್ಹನದಲ್ಲಿ ಸ್ಪುರದ್ರೂಪಿ ಚೆಲುವ ಬೇರೆ. ಆರ್ಮ್‍ಸ್ಟ್ರಾಂಗ್‍ರ ಜತೆ ಚಂದ್ರನಲ್ಲಿ 1969 ಜುಲೈ 21ರ 3:15ಕ್ಕೆ ಅವರು ಪಾದ ಊರಿದ್ದರು. ಮೊದಲು ಆರ್ಮ್ ಸ್ಟ್ರಾಂಗ್ ನಂತರ ಬಝ್ ಚಂದ್ರನಲ್ಲಿ ಹೆಜ್ಜೆ ಹಾಕಿದರು. ಹಳೆಯ ಕಾಲದಲ್ಲಿ ನಡೆದ ಈ ಸಾಧನೆಯ ಬಲದಲ್ಲಿಯೇ ಅಮೆರಿಕದ ನಾಸಾ ಯಶಸ್ಸಿನ ಉತ್ತುಂಗದಲ್ಲಿ ಈಗಲೂ ಇದೆ. ಮೊದಲು ಚಂದ್ರನಲ್ಲಿ ಕಾಲೂರಿದವರು ಮತ್ತು ಯಶಸ್ವಿಯಾಗಿ ¨ ಭೂಮಿಗೆ ಮರಳಿ ಬಂದವರು ತುಂಬ ಧೈರ್ಯಶಾಲಿಗಳೇ ಆಗಿರುತ್ತಾರೆ. ಈಗ ಹಣವಿದ್ದವರಿಗೂ ಚಂದ್ರನಿಗೆ ಪ್ರವಾಸ ಹೋಗಲು ಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಹಿಂದೆಲ್ಲ ಗಗನಯಾತ್ರಿಗಳು ಚಂದ್ರನಲ್ಲಿ ಹೋಗಿ ಮರಳಿದ್ದು ಇವರಿಗೆಲ್ಲ ಧೈರ್ಯ ತಂದು ಕೊಟ್ಟಿದೆ ಎಂಬುದು ಸಣ್ಣ ವಿಚಾರವಲ್ಲ. ಗಗನಯಾತ್ರೆಗೆ ಹೋಗಿದ್ದ ಭಾರತದ ಕಲ್ಪನಾ ಚಾವ್ಲಾ ಸಹಿತ ಏಳು ಮಂದಿ ಸ್ಪೇಸ್ ಶಟ್ಲ್ ಸ್ಫೋಟಗೊಂಡು¸ ಸತ್ತು ಹೋದ ಘಟನೆ 2003ರಲ್ಲಿ ನಡೆದಿತ್ತು. ಆದ್ದರಿಂದ ಗಗನಕ್ಕೆ ಹಾರುವುದು, ಚಂದ್ರನೆಡೆಗೆ ಹಾರುವುದು ಸಾವನ್ನು ಗೆದ್ದು ಬರುವ ಹುಚ್ಚು ಹಂಬಲವನ್ನು ಹೊಂದಿದ್ದವರಿಂದ ಮಾತ್ರ ಸಾಧ್ಯವಿದೆ. ಇಂತಹ ಒಂದು ಹುಚ್ಚು ಹಂಬಲ ಅಥವಾ ಸಾಧನೆಯ ಬಲ ಬಝ್ ಎಡ್ರಿನ್‍ರಿಗಿದೆ. ಅದರಲ್ಲಿ ಅವರು ಗೆದ್ದವರು. ಈಗ ಎಂಬತ್ತೆಂಟು ವರ್ಷದ ಅವರು ಅಮೆರಿಕ ದಲ್ಲಿ ವಾಸವಿದ್ದಾರೆ. ಆದರೆ ಆಸ್ತಿಗಾಗಿ ತಂದೆ ಮಕ್ಕಳಲ್ಲಿ ಅಮೆರಿಕದ ಕೋರ್ಟಿನಲ್ಲಿ ಹೋರಾಟ ನಡೆಯುತ್ತಿದೆ. ಮನುಷ್ಯ ಎಷ್ಟೆತ್ತರ ಏರಿದರೂ ಚಿಕ್ಕವರು ಎನ್ನುವುದನ್ನು ಬಝ್ ಎಲ್ಡ್ರಿನ್‍ರ ಜೀವನ ವಿಚಾರ ಜಗತ್ತಿಗೆ ಉದಾಹರಣೆಯಾಗಿ ತೋರಿಸುತ್ತಿದೆ. ಮುದಿ ವಯಸ್ಸು, ಮಕ್ಕಳು ಮರಿಗಳೊಂದಿಗೆ ಸಮಾಧಾನದಿಂದ ಜೀವಿಸಬೇಕಾಗಿದ್ದ ವಯಸ್ಸಿನಲ್ಲಿ ಸಮಾಧಾನ ಅವರಿಗಿಲ್ಲ. ತಂದೆಯೊಂದಿಗೆ ಪ್ರೀತಿಯಿದೆ ಎಂಬ ನೆಪದಲ್ಲಿ ತನ್ನ ಆಸ್ತಿ ಸಂಸ್ಥೆಗಳನ್ನು ಮಕ್ಕಳು ವಶಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಮಗ ಈಗ ತನ್ನ ಸಂಪತ್ತಿನ ಒಡೆತನದ ಹಕ್ಕನ್ನು ವಹಿಸಿಕೊಂಡಿದ್ದಾನೆ ಎಂದು ಬಝ್ ದೂರಿನಲ್ಲಿ ತಿಳಿಸಿದ್ದಾರೆ.
ಅತಿಪ್ರೀತಿ ವ್ಯಕ್ತಪಡಿಸಿ ಮಗ, ಮಗಳು ಮತ್ತು ಮ್ಯಾನೇಜರ್ ತನ್ನ ಎರಡನೆ ಮದುವೆ ತಡೆದಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಕೊನೆಗಾಲ ದಲ್ಲಿ ಮಕ್ಕಳು ಮತ್ತು ಸಂಬಂಧಿಕರೊಂದಿಗೆ ಕಾನೂನು ಹೋರಾಟ ನಡೆಸಬೇಕಲ್ಲ ಎಂಬ ಬೇಸರ ವನ್ನು ಕೂಡಾ ಅವರು ತೋರಿಸುತ್ತಿದ್ದಾರೆ. ತಂದೆಯ ಹಲವು ಹೊಸ ಗೆಳೆಯರು ಅವರ ದಾರಿತಪ್ಪಿಸುತ್ತಿದ್ದಾರೆ ಎಂದು ಮಕ್ಕಳಲ್ಲಿಯೂ ದೂರಿದೆ.
ಬಝ್ ಜೀವನದಲ್ಲಿ ಏನೋ ಕೊರತೆ ಅನು ಭವಿಸುತ್ತಿದ್ದಾರೆ. ಆದ್ದರಿಂದ ತಮ್ಮವರನ್ನು ವಿಶ್ವಾಸದಿಂದ ನೋಡಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಮಕ್ಕಳು ಹೇಳುತ್ತಾರೆ. ಮರೆವು ರೋಗದಿಂದ ಬಳಲುತ್ತಿದ್ದಾರೆ. ಅವರ ಮಾನಸಿಕ ಸ್ಥಿತಿಯ ಅಧ್ಯಯನಕ್ಕೆಂದೇ ಕೋರ್ಟು ಒಂದು ಮೆಡಿಕಲ್ ಕಮಿಟಿಯನ್ನು ರಚಿಸಿತ್ತು. ನಮ್ಮ ನಡುವೆ ಅಂತಹ ಸಮಸ್ಯೆಗಳಿಲ್ಲ. ಇದ್ದರೆ ಅದೆಲ್ಲ ಮುಂದಕ್ಕೆ ನಿಧಾನವಾಗಿ ಸರಿಹೋಗಬಹುದು ಎಂದು ಮಕ್ಕಳು ಹೇಳುತ್ತಿದ್ದಾರೆ.


ಆದರೆ ಬಝ್ ಸಣ್ಣ ಕನಸು ಹೊಂದಿದವರೇನಲ್ಲ. ಚಂದ್ರನಲ್ಲಿ ಜನ ಜೀವನ ಸಾಧ್ಯಗೊಳಿಸ ಬೇಕೆಂದು ಹೇಳುವವರು. ಅವರ ಈ ವಾದಕ್ಕೆ ಮತ್ತು ನಾಸಾದ ಅಧ್ಯಯನಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂಗೀಕಾರವನ್ನು ನೀಡಿದ್ದಾರೆ. ಇಂತಹ ಚಿಂತಕನ ಮನೊ ನೆಲೆಯನ್ನು ಅಂದಾಜಿಸಲು ಕೋರ್ಟು ವೈದ್ಯಕೀಯ ಚಿಂತಕರನ್ನು ನೇಮಕ ಗೊಳಿಸಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಸ್ವತಃ ಅವರ ಚಿಂತನೆಗೆ ಬೆಲೆ ನೆಲೆಯನ್ನು ಕೊಡುತ್ತಾರೆ ಎಂದಿದ್ದರೆ ಮನೆ ಮಂದಿ ಸ್ವತಃ ಮಕ್ಕಳು ಅವರು ಚಿಂತಿಸಲು ಅರ್ಹರಲ್ಲ. ಅರೆ ಹುಚ್ಚರು ಅಥವಾ ಅವರಿಗೆ ಅಲ್ಶೀಮರ್ಸ್ ಕಾಯಿಲೆ ಇದೆ ಎನ್ನುತ್ತಿದ್ದಾರೆ. ಒಬ್ಬ ದೇಶದ ಮಹಾನ್ ಸಾಧಕ ಮನೆ ಮಂದಿಯ ದೃಷ್ಟಿಯಲ್ಲಿ ಎಂತಹವರು. ಒಂದು ಆಸ್ತಿ ವಿಚಾರದಲ್ಲಿ, ಮುದಿ ವಯಸ್ಸಿನಲ್ಲಿ ಎಂತಹ ಅವಸ್ಥೆ ಈ ಸಾಧಕನದ್ದು ಎಂಬಿವೆಲ್ಲವೂ ಪಾಠ ಬೋಧಕವಾಗಿದೆ. ಮನುಷ್ಯ ಆಕಾಶಕ್ಕೆ ಹತ್ತಿ ಒಂದಲ್ಲ ಒಂದು ದಿನ ಏನನ್ನು ಮಾಡಬಹುದು. ಆದರೆ ಸಂಸಾರದಲ್ಲಿ, ಕುಟುಂಬದಲ್ಲಿ ಇಂತಹ ಸಾಧನೆ ಆಗಬೇಕಾದರೆ ಸುಲಭವಿಲ್ಲ. ಈ ನಿಟ್ಟಿನಲ್ಲಿ ಯೋಚಿಸುವಾಗ ಬಝ್ ಬದುಕು ಹೋರಾಟ ಎಲ್ಲರಿಗೂ ಪಾಠದಾಯಕವಾಗಿದೆ. ಗಗನಕ್ಕೆ ನೆಗೆದರೂ ಕುಟುಂಬ ಶಿಖರ ತಲುಪುವುದು ಅಷ್ಟು ಸುಲಭವಲ್ಲ ಎನ್ನುವ ಸತ್ಯವನ್ನು ಬಝ್ ಅಡ್ರಿನ್‍ರ ಜೀವನಗಾಥೆ-ವ್ಯಥೆ ನಮಗೆ ವಿವರಿಸಿ ಕೊಡುತ್ತಿದೆ.