ಗಾಂಧೀಜಯಂತಿ: ಇನ್ನು ಮೂರು ವರ್ಷ ರೈಲಿನಲ್ಲಿ ಮಾಂಸಾಹಾರವಿಲ್ಲ: ರೈಲ್ವೆ ಸಚಿವಾಲಯ

0
1225

ನವದೆಹಲಿ: ಗಾಂಧಿ ಜಯಂತಿ ದಿನದಂದು ರೈಲಿನಲ್ಲಿ ಸಸ್ಯಾಹಾರ ಮಾತ್ರ ವಿತರಿಸುವ ಯೋಜನೆಯನ್ನು ರೈಲ್ವೆ ಇಲಾಖೆ ಹಾಕಿಕೊಂಡಿದೆ. ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಪ್ರಯುಕ್ತ ಮುಂದಿನ ಮೂರು ವರ್ಷಗಳಲ್ಲಿ ಅಕ್ಟೋಬರ್ ಎರಡರಂದು ರೈಲ್ವೆಯಲ್ಲಿ ಸಸ್ಯಾಹಾರ ದಿನವಾಗಿ ಆಚರಿಸಲು ಉದ್ಧೇಶಿಸಿದೆ.

ರೈಲ್ವೆ ಇಲಾಖೆ ಹೊರಡಿಸಿದ ಕಳೆದ ತಿಂಗಳು ಹೊರಡಿಸಿದ ಆದೇಶದನುಸಾರ 2018, 19, 20 ರ ವರ್ಷಗಳಲ್ಲಿ ಅಕ್ಟೋಬರ್ ಎರಡರಂದು ಯಾವುದೇ ರೈಲ್ವೇ ನಿಲ್ದಾಣಗಳಲ್ಲಾಗಲೀ ರೈಲಿನಲ್ಲಾಗಲೀ ಮಾಂಸಾಹಾರ ವಿತರಿಸುವುದಿಲ್ಲವೆಂದು ರೈಲ್ವೆ ಇಲಾಖೆಯ ನೌಕರರು ಭರವಸೆ ನೀಡಬೇಕೆಂದು ಹೇಳಲಾಗಿದೆ.
ರೈಲ್ವೇ ಸಚಿವಾಲಯ ಮುಂದಿರಿಸಿದ ಈ ನಿರ್ದೇಶಗಳನ್ನು ಅಂಗೀಕರಿಸಿದರೆ ಅಕ್ಟೋಬರ್ ಎರಡು ಸ್ವಚ್ಚದಿನದೊಂದಿಗೆ ಡಿಜಿಟಲ್ ದಿನವಾಗಿ ಆಚರಿಸಲಾಗುವುದು.  ಜೊತೆಗೆ ದಂಡಿ ಯಾತ್ರೆಯ ಸ್ಮರಣೆ ಸಹಿತ ಹಲವಾರು ಕಾರ್ಯಕ್ರಮಗಳನ್ನು ರೈಲ್ವೆ ಇಲಾಖೆ ಹಮ್ಮಿಕೊಂಡಿದೆ.
ಗಾಂಧೀಜಿಯ ಚಿತ್ರವಿರುವ ಟಿಕೇಟು ಹಾಗೂ ಸ್ವಚ್ಚತೆಯ ಸ೦ದೇಶದೊಂದಿಗಿನ ರೈಲ್ವೆ ಸೇವೆ ಮುಂತಾದ ಅನೇಕ ಯೋಜನೆಗಳನ್ನು ರೈಲ್ವೆ ಇಲಾಖೆ ಹಾಕಿಕೊಂಡಿದೆ.