ಬಿಜೆಪಿ ತೋಡಿದ ಖೆಡ್ಡಾಕ್ಕೆ ಬಿದ್ದರೇ ಗುಂಡೂರಾವ್?

0
316

“ಬಿಜೆಪಿಯವರೇ ಜಿಹಾದಿಗಳು” ಎಂದರೇನು? ಜಿಹಾದ್ ಎಂಬುದು ಅರಬಿ ಪದ. ಪವಿತ್ರ ಕುರ್ ಆನಿನಲ್ಲಿ ಆ ಪದದ ಉಲ್ಲೇಖ ಇದೆ. ಪರಿಶ್ರಮ ಎಂದು ಅದರ ಅರ್ಥ. ಅಸ್ಲಾಂ ಜಿಹಾದ್, ಅರ್ಮಾನ್ ಜಿಹಾದ್ ಎಂದೆಲ್ಲ ಮುಸ್ಲಿಮರು ಹೆಸರಿಡುವುದಿದೆ. ಗಲ್ಫ್ ರಾಷ್ಟ್ರಗಳಲ್ಲಂತೂ ಜಿಹಾದ್ ಹೆಸರುಗಳು ಸಾಮಾನ್ಯ. ಶೋಭಾ ಕರಂದ್ಲಾಜೆ ಗೊತ್ತು ಗುರಿಯಿಲ್ಲದೆ ಪದ ಬಳಸುತ್ತಾರೆಂದು ಹೇಳಿ ಸಚಿವ ದಿನೇಶ್ ಗುಂಡೂರಾವ್ ಕೂಡ ಕೂಡ ಅದನ್ನೇ ಅನುಸರಿಸರಿಸಿದರೆ ಹೇಗೆ? ಶೋಭಾ ಮತ್ತು ಅವರ ತಂಡಕ್ಕೆ ಜಿಹಾದ್ ಪದದ ಅಗತ್ಯ ಇದೆ. ಅವರು ಉದ್ದೇಶ ಪೂರ್ವಕವಾಗಿಯೇ ಆಯ್ಕೆ ಮಾಡಿಕೊಂಡ ಪದ ಅದು. ನಿರ್ಧಿಷ್ಟ ಧರ್ಮ ಮತ್ತು ಅದರ ಅನುಯಾಯಿಗಳನ್ನು ಅವಮಾನಿಸುವುದಕ್ಕಾಗಿಯೇ ಆ ಪದವನ್ನು ಆಯ್ಕೆ ಮಾಡಲಾಗಿದೆ. ಲವ್ ಜಿಹಾದ್, ಲ್ಯಾoಡ್ ಜಿಹಾದ್ ಇತ್ಯಾದಿಗಳು ಅದರದ್ದೇ ಭಾಗ. ಹಾಗಂತ ಗುಂಡೂರಾವ್ ಕೂಡ ಅವರು ತೋಡಿದ ಖೆಡ್ಡಾಕ್ಕೆ ಬೀಳುವುದೇ?

ಏ ಕೆ ಕುಕ್ಕಿಲ

LEAVE A REPLY

Please enter your comment!
Please enter your name here