ಗುಜರಾತ್ ಫಲಿತಾಂಶ ಪ್ರಕಟವಾದರೆ ಯಾರನ್ನು ಹೊಣೆ ಮಾಡಬೇಕು, ?

0
846

ಜೀವವಿರೋಧಿ ವಿಚಾರಧಾರೆಯ ಎದುರು ಜೀವಪರ ವಿಚಾರಧಾರೆಯನ್ನು ಸಮರ್ಪಕವಾಗಿ ಜನರೆದುರು ಮಂಡಿಸುವಲ್ಲಿ ಆಗುತ್ತಿರುವ ವೈಫಲ್ಯವನ್ನು ಮುಚ್ಚಿಹಾಕುವುದಕ್ಕಾಗಿ EVM ಅನ್ನು ಒಂದು ಮರೆಯಾಗಿ ಬಳಸಿಕೊಳ್ಳಲಾಗುತ್ತಿದೆಯೇ? ಗುಜರಾತ್ ಚುನಾವಣೆಯ ಬಗ್ಗೆ ಈಗಾಗಲೇ ಬಂದಿರುವ ಎಲ್ಲ ಸಮೀಕ್ಷೆಗಳೂ ಬಿಜೆಪಿಯ ಪರವಾಗಿದೆ. ಈ ಸಮೀಕ್ಷೆಗಳೇನೂ EVM ಆಧಾರಿತ ಅಲ್ಲವಲ್ಲ. ಜನರ ಒಲವನ್ನು ಪರಿಗಣಿಸಿಕೊಂಡು ಮಾಡಲಾದ ಎಲ್ಲ ಸಮೀಕ್ಷೆಗಳೂ ಬಿಜೆಪಿಯ ಗೆಲುವನ್ನೇ ಹೇಳುತ್ತಿವೆ ಎಂಬುದರ ಅರ್ಥ ಏನು? ಒಂದು ವೇಳೆ ಸಮೀಕ್ಷೆಗಳು ಹೇಳಿದ ರೀತಿಯಲ್ಲೇ ಗುಜರಾತ್ ಫಲಿತಾಂಶ ಪ್ರಕಟವಾದರೆ ಯಾರನ್ನು ಹೊಣೆ ಮಾಡಬೇಕು, EVM ಅನ್ನೋ, ಜೀವಪರರನ್ನೋ? ಬಹುಶಃ EVM ನ ಬಗ್ಗೆ ಶಂಕೆಯನ್ನು ಹುಟ್ಟುಹಾಕಿ, ಅದರ ಸುತ್ತಲೇ ಚರ್ಚೆ ಎಬ್ಬಿಸಿ ಕೊನೆಗೆ, Ballet Paper ನ ಹೊರತು ಗೆಲುವು ಸಾಧ್ಯವಿಲ್ಲ ಎಂಬ ನಿರಾಶೆಯ ವಾತಾವರಣವನ್ನು ಉತ್ಪಾದಿಸುವ ಸಂಚಿನ ಭಾಗವೇ ಈ EVM ಚರ್ಚೆ? ಯಾರಿಗೆ ಓಟು ಹಾಕಿದರೂ ಬಿಜೆಪಿಗೇ ಬೀಳುತ್ತೆ… ಎಂಬ ಭಾವವು ಅಂತಿಮವಾಗಿ ಜೀವಪರ ವಿಚಾರಧಾರೆಯ ಕುರಿತು ನಾಗರಿಕರನ್ನು ನಿರ್ಲಕ್ಷ್ಯದೆಡೆಗೆ ತಲುಪಿಸುತ್ತದೆ. ಜೀವವಿರೋಧಿಗಳು ಬಯಸುವುದೇ ಇಂಥ ವಾತಾವರಣವನ್ನು. ಸದ್ಯ ನಮ್ಮ ಗಮನ ಜೀವವಿರೋಧಿಗಳ ಪ್ರಚಾರತಂತ್ರಕ್ಕೆ ಪ್ರತಿತಂತ್ರಗಳನ್ನು ಹೆಣೆಯುವ ಕಡೆಗೆ ಇರಬೇಕೇ ಹೊರತು EVM ಮೇಲಲ್ಲ. EVM ಅನ್ನು ಶಂಕಿತಗೊಳಿಸುವುದರ ಹಿಂದೆ ಜೀವವಿರೋಧಿಗಳ ಕೈವಾಡ ಇರಲೂ ಬಹುದು.

ಏ ಕೆ ಕುಕ್ಕಿಲ