ಗುಜರಾತ್ ಮುಸ್ಲಿಮರ ಮನೆಗೆ ಎಕ್ಸ್ ಗುರುತು

0
2007

ಅಹ್ಮದಾಬಾದ್, ನ.15: ಗುಜರಾತ್ ಚುನಾವಣೆಗಿಂತ ಮೊದಲು ಒಂದು ಆಶ್ಚರ್ಯಕಾರಿ ವಿಷಯ ಬಹಿರಂಗವಾಗಿದೆ. ಸೋಮವಾರ ಅಹ್ಮದಾಬಾದ್‍ನ ಕೆಲವು ಪ್ರದೇಶಗಳಲ್ಲಿ ಮುಸ್ಲಿಮರ ಮನೆಯ ಹೊರಗೆ ಎಕ್ಸ್ ಅಥವಾ ಕ್ರಾಸ್ ಚಿಹ್ನೆಯ ಪೋಸ್ಟರುಗಳು ಕಂಡು ಬಂದಿದೆ. ಟೈಮ್ಸ್ ನೌ ವರದಿಯ ಪ್ರಕಾರ ಇದರ ನಂತರ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಆಡಳಿತದ ಬಿಜೆಪಿ ಗುಜರಾತ್‍ನಲ್ಲಿ ಕೋಮು ದಂಗೆ ಸೃಷ್ಟಿಸಲು ವಿಪಕ್ಷಗಳ ಕೃತ್ಯ ಇದೆಂದು ಪ್ರತಿಕ್ರಿಯಿಸಿದೆ. ಪ್ರದೇಶದ ಮುಸ್ಲಿಮರ ಮನೆಗಳ ಹೊರಗೆ ಅಂಟಿಸಲಾದ ಗುರುತುಗಳ ಕುರಿತು ಜನರು ಸ್ಥಳೀಯಾಡಳಿತಕ್ಕೆ ತಿಳಿಸಿದ್ದಾರೆ. ಬಿಜೆಪಿ ವಿರುದ್ಧ ಆರೋಪ ಹೋರಿಸುತ್ತಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವರ್ಚಸ್ಸು ಹಾಳು ಮಾಡುವುದಕ್ಕೆ ಹೀಗೆ ಮಾಡಲಾಗಿದೆ ಎಂದಿದೆ. ಕಾಂಗ್ರೆಸ್ ಕೋಮು ಧ್ರವೀಕರಣಕ್ಕಾಗಿ ಹೀಗೆ ಮಾಡುತ್ತಿದೆ ಎಂದು ಹೇಳಿದೆ.
ಬಿಜೆಪಿಯ ವಕ್ತಾರ ಸಂಬೀತ್ ಪಾತ್ರ ಅವರು ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಮೂಲವನ್ನು ಕಳೆದು ಕೊಂಡಿದೆ. ಮತ ಗಳಿಸಲಿಕ್ಕಾಗಿ ಇಂತಹ ಕೃತ್ಯಕ್ಕಿಳಿದಿದೆ ಎಂದಿದ್ದಾರೆ. ಆರೆಸ್ಸೆಸ್‍ನ ರಾಕೇಶ್ ಸಿನ್ಹ ಎಕ್ಸ್ ಗುರುತು ಕಾಂಗ್ರೆಸ್ಸಿನ ಹಳೆಯ ರಾಜಕೀಯವಾಗಿದೆ. ಆದರೆ ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಅಂತರವಿರಿಸಿಕೊಳ್ಳಬೇಡಿ ಎಂದು ಕರೆ ನೀಡಿದ್ದಾರೆ. ಎಮ್‍ಐಎಂ ಇದರ ಹಿಂದೆ ಯಾರಿದ್ದಾರೆ ಎಂದು ತನಿಖೆ ಆಗಬೇಕೆಂದು ಆಗ್ರಹಿಸಿದೆ. ಗುಜರಾತ್‍ನಲ್ಲಿ ಎರಡು ಚರಣಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಮೊದಲ ಚರಣ ಮತದಾನ ಡಿಸೆಂಬರ್ 9ಕ್ಕೆ ನಡೆಯಲಿದೆ. ಎರಡನೆ ಚರಣದ ಮತದಾನ ಡಿಸೆಂಬರ್ 14ಕ್ಕೆ ನಡೆಯಲಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಫಲಿತಾಂಶ ಡಿಸೆಂಬರ್ 18ಕ್ಕೆ ಘೋಷಿಸಲಾಗುವುದು.