ಜನಾಂಗೀಯ ದ್ವೇಷದಲ್ಲಿ ಬಾಲೆಯ ರಕ್ತ

0
415

ಖುರ್ಷಿದ್ ವಾನಿ, ಕಾಶ್ಮೀರ
ಕಥುವಾ ಬೀಭತ್ತದ ಹಿಂದೆ ಜನಾಂಗೀಯ `ಶುದ್ಧಿ’ಯ ಉದ್ದೇಶ ವಿದೆ. ಕುರಿಗಾಹಿ ಬಕ್ರೆವಾಲಾ ಮುಸ್ಲಿಮ್ ಅಲೆಮಾರಿ ಸಮುದಾಯವನ್ನು ಜಮ್ಮುವಿಗೆ ಮರಳಿ ಬಾರದಂತೆ ಹೊರಗಟ್ಟುವ ದ್ವೇಷವಿದೆ. ಪಾತಕದ ಮೇಲೆ ಪರದೆ ಎಳೆಯಲು ತ್ರಿವರ್ಣ ಧ್ವಜವನ್ನು ಪಟಪಟಿಸಲಾಯಿತು. `ಭಾರತ ಮಾತಾ ಕೀ ಜೈ’ ಘೋಷಣೆ ಕೂಗಲಾಯಿತು. ದೇಶದ ಪರವಾಗಿ ಮಾಡಲಾದ ಬಲಾತ್ಕಾರವಿದು. ಅರ್ಥಾತ್ `ರಾಷ್ಟ್ರವಾದಿ’ ಬಲಾತ್ಕಾರ. ಎಂಟು ವರ್ಷದ ಹೆಣ್ಣು ಮಗು ಮುಸ್ಲಿಮ್ ಜನಾಂಗ ದಲ್ಲಿ ಹುಟ್ಟಿದ ಕಾರಣಕ್ಕೆ ಆದ ಬಲಾತ್ಕಾರ. ಈ ಬಲಾತ್ಕಾರದಲ್ಲಿ ದೈಹಿಕವಾಗಿ ಭಾಗಿಯಾದವರು ಕೆಲವೇ ಮಂದಿ. ಆದರೆ ಮಾನಸಿಕ ವಾಗಿ ಭಾಗಿಯಾದವರು ಲಕ್ಷಾಂತರ ಮಂದಿ. ಬಲಾತ್ಕಾರಿಗಳನ್ನು ರಕ್ಷಿಸಲು ಧರ್ಮ ಮತ್ತು ದೇಶಭಕ್ತಿಯನ್ನು ಬಳಸುತ್ತಿರುವವರೂ ಈ ಬಲಾತ್ಕಾರದಲ್ಲಿ ಭಾಗಿಗಳು.
ಡಿ. ಉಮಾಪತಿ
ಅಂಕಣಕಾರ ಪ್ರಜಾವಾಣಿ

ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮ್ ಬಹುಸಂಖ್ಯಾತರು ಅಸ್ತಿತ್ವ ಬೆದರಿಕೆ ಎದುರಿಸುತ್ತಿದ್ದಾರೆ. 2015ರಲ್ಲಿ ಪಿಡಿಪಿ ಬಿಜೆಪಿ ಮೈತ್ರಿ ಸರಕಾರ ಅದಿಕಾರಕ್ಕೆ ಬಂದ ಬಳಿಕ ವಿಶೇಷವಾಗಿ ಕಾಶ್ಮೀರ ಕಣಿವೆ ಯಲ್ಲಿ ಸರಕಾರಿ ಸೇನೆ ಸಾಮಾನ್ಯ ಜನರ ವಿರುದ್ಧ ಯುದ್ಧ ಘೋಷಿಸಿದೆ. ಜಮ್ಮುವಿನಲ್ಲಿ ಕಡಿಮೆ ಮುಸ್ಲಿಮರು ಇರುವ ಸ್ಥಳ ಗಳಲ್ಲಿ ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ಜನಾಂಗೀಯ ಹತ್ಯೆಗೆ ಸಿದ್ಧತೆ ನಡೆಯುತ್ತಿದೆ. ಅಲೆಮಾರಿ ಬಕರ್‍ವಾಲ್ ವಿಭಾಗದ ಎಂಟು ವರ್ಷದ ಆಸಿಫಾ ಜಾನ್‍ಳನ್ನು ಅತ್ಯಂತ ಹೀನಾಯ ರೀತಿಯಲ್ಲಿ ಅತ್ಯಾಚಾರ ಮಾಡಿ ಕೊಲೆಗೈದ ಘಟನೆ ಮುಸ್ಲಿಮ ರನ್ನು ಅಲ್ಲಿಂದ ಬಡಿದಟ್ಟುವ ಪೂರ್ವಯೋಜಿತ ಕೃತ್ಯದ ಭಾಗ ವಾಗಿದೆ. ಎನ್ನುವುದನ್ನು ಬಹಿರಂಗಗೊಳಿಸಿದೆ. 1947ರಲ್ಲಿ ನಡೆದಿದ್ದ ಮುಸ್ಲಿಮರ ಸಾಮೂಹಿಕ ಕಗ್ಗೊಲೆಯ ಪುನರಾವರ್ತನೆಗೆ ಕೆಲವರು ಯೋಜನೆ ರೂಪಿಸಿದ್ದಾರೆ.

ಕಥುವಾ ಜಿಲ್ಲಾ ನ್ಯಾಯಾಲಯದ ಕಲಾಪಗಳಿಗೆ ಅಡ್ಡಿಪಡಿಸುವ ವಕೀಲರ ವರ್ತನೆ ಆಘಾತಕಾರಿಯಾದುದು. ಅತ್ಯಾಚಾರಿಗಳಿಗೆ ಬೆಂಬಲವಾಗಿ ನಿಂತ ಪೊಲೀಸರ ವಿರುದ್ಧ ಕ್ರೈಂಬ್ರಾಂಚ್ ಪೊಲೀ ಸರು ಆರೋಪ ಪಟ್ಟಿ ಸಲ್ಲಿಸಿದ್ದು ಎಪ್ರಿಲ್ ಹನ್ನೊಂದರಂದು. ಅಂದರೆ ಅದೇ ದಿನ ದಕ್ಷಿಣ ಕಾಶ್ಮೀರದ ಕುಲ್‍ಗಾಮ್‍ನಲ್ಲಿ ನಾಲ್ವರು ನಿರಾಯುಧ ಸಾಮಾನ್ಯ ನಾಗರಿಕರನ್ನು ಭಯೋತ್ಪಾದನಾ ವಿರೋಧಿ ಸೇನೆಯು ಕೊಂದು ಹಾಕಿತು. ಎಪ್ರಿಲ್ ಒಂದಕ್ಕೆ ಮತ್ತೊಂದು ಕಾರ್ಯಾಚರಣೆಯಲ್ಲಿ ನಾಲ್ವರು ನಾಗರಿಕರನ್ನು ಬೇರೆ
ಬೇರೆಯಾಗಿ ಕೊಲ್ಲಲಾಯಿತು.

ಕತುವಾ ಕೇಸ್: ಬಾರ್ ಅಸೋಸಿಯೇಷನ್ ​​ವಕೀಲರು ಕ್ರೈಂ ಬ್ರಾಂಚ್ ಅಧಿಕಾರಿಗಳನ್ನು ನ್ಯಾಯಾಲಯಕ್ಕೆ ಪ್ರವೇಶಿಸಲು ಗಂಟೆಗಳವರೆಗೆ ನಿರ್ಬಂಧಿಸಿರುವ ಚಿತ್ರ (NDTV)
ಹಿಂದೂ ಏಕತಾ ಮಂಚ್ ಆಯೋಜಿಸಿದ ರ್ಯಾಲಿಯಲ್ಲಿ ಮೆಹಬೂಬ ಮುಫ್ತಿಯ ಸರಕಾರದ ಇಬ್ಬರು ಸಚಿವರು ಭಾಗವಹಿಸಿದ ಚಿತ್ರ

ಆಸಿಫಾ ಅತ್ಯಾಚಾರ ಮತ್ತು ಹತ್ಯೆಯ ಭೀಕರ ವಿವರಗಳು ದೇಶವನ್ನು ಹಿಡಿದು ಅಲುಗಾಡಿಸಿದೆ. ಹಿಂದುತ್ವ ದಂಡಿಗೆ ಹಾಗೇನೂ ಆಗಿಲ್ಲ. ಅವರು ಕೊಲೆಗಡುಕರು ಮತ್ತು ಅತ್ಯಾಚಾರ ವೀರರನ್ನು ಬೆಂಬಲಿಸಿ ರ್ಯಾಲಿ ಮಾಡಿದರು. ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಬೆಂಬಲಿಸಿ ಹಿಂದೂ ಏಕತಾ ಮಂಚ್ ಆಯೋಜಿಸಿದ ರ್ಯಾಲಿಯಲ್ಲಿ ಮೆಹಬೂಬ ಮುಫ್ತಿಯ ಸರಕಾರದ ಇಬ್ಬರು ಸಚಿವರು ಭಾಗವಹಿಸಿದರು.
ಊರಹೊರಗಿನ ಒಂದು ದೇವಸ್ಥಾನದಲ್ಲಿ ಬಾಲಕಿ ಅತ್ಯಾಚಾರಕ್ಕೆ ಬಲಿಯಾದಳು. ಒಮ್ಮೆಯಲ್ಲ ಮತ್ತೆ ಮತ್ತೆ ಮುದ್ದು ಕಂದಮ್ಮನನ್ನು ರಕ್ಕಸರು ಮುಕ್ಕಿದರು. ಬಾಲಕಿಗೆ ಮಾದಕ ವಸ್ತು ನೀಡಿ ಪ್ರಜ್ಞೆ ಕಳಕೊಂಡ ಮೇಲೆ ಅವಳನ್ನು ಅತ್ಯಾಚಾರ ಮಾಡಿ ಕೊಂದರು. ಅದಕ್ಕಿಂತ ಮೊದಲು ಒಬ್ಬ ದುರುಳ ಕೊನೆಯದಾಗಿ ತನ್ನ ತೀಟೆ ತೀರಿಸಿಕೊಂಡ. ಅವಳನ್ನು ಅತ್ಯಾಚಾರ ಮಾಡಿದ ಕ್ರಿಮಿಗಳು ದೇವಸ್ಥಾನದಲ್ಲಿ ಪೂಜೆ ಮಾಡಿದರು. ತಲೆಗೆ ಹೊಡೆದು ಆಕೆಯನ್ನು ಕೊಂದರು. ಕಾಮುಕರು ಬಾಲಕಿಯನ್ನು ಹಿಡಿದ ಬಳಿಕ ಉತ್ತರ ಪ್ರದೇಶದ ಮೀರತ್‍ಗೆ ಕರೆದುಕೊಂಡು ಹೋಗಿದ್ದರು. ಇದೆಲ್ಲ ಕ್ರೈಂಬ್ರಾಂಚ್ ವರದಿಯಲ್ಲಿದೆ. ಏಳು ಪುರುಷರು ಮತ್ತು ಒಬ್ಬ ಅಪ್ರಾಪ್ತ ಬಾಲಕನ ಹೆಸರು ಆರೋಪ ಪಟ್ಟಿಯಲ್ಲಿದೆ. ಎಂಟು ಮಂದಿ ಸೇರಿ ಆಸಿಫಾಳನ್ನು ಅತ್ಯಾಚಾರ ಮಾಡಿ ಕೊಲ್ಲಲು ಕ್ರಿಮಿನಲ್ ಸಂಚು ನಡೆಸಿದರು ಮತ್ತು ಅದುನ್ನು ಜಾರಿಗೆ ತಂದರು. ಮಾಜಿ ಕಂದಾಯಿ ಅಧಿಕಾರಿ ಸಂಜಿರಾಮ್ ಮುಖ್ಯ ಸೂತ್ರಧಾರನಾಗಿದ್ದಾನೆ. ಆತನ ಸಂಬಂಧಿಕ ವಿಶೇಷ ಪೊಲೀಸಧಿಕಾರಿ ವಿಶಾಲ್, ಇನ್ನೊಬ್ಬ ಪೊಲೀಸಧಿಕಾರಿ ದೀಪಕ್ ಖಜೂರಿಯ, ಹೆಡ್ ಕಾನ್ಸ್‍ಟೇಬಲ್ ತಿಲಕ್ ರಾಜ್, ಎಸ್ಸೈ ಅನಂತ್ ಕುಮಾರ್, ಸುರೀಂದರ್ ವರ್ಮ, ರಮೇಶ್ ಕುಮಾರ್ ಹೀಗೆ ಆರೋಪಿಗಳ ಪಟ್ಟಿ ಸಾಗುತ್ತದೆ. ಜೊತೆಗೆ ಅಪ್ರಾಪ್ತ ಹುಡುಗ ಒಬ್ಬನೂ ಇದ್ದಾನೆ. ಹಿರಾನಗರದ ದೇವಿ ದೇವಸ್ಥಾನದಲ್ಲಿ ಆಸಿಫಾ ಬಂದಿಯಾಗಿದ್ದಳು ಎಂದು ಫಾರನ್ಸಿಕ್ ವರದಿಯಲ್ಲಿದೆ. ಸಂಜಿರಾಮ್ ದೇವಸ್ಥಾನದ ಸಂಚಾಲಕ. ಬಾಲಕಿಯನ್ನು ದೇವಸ್ಥಾನದಲ್ಲಿ ಅಡಗಿಸಿಟ್ಟಿದ್ದ ಎಂದು ಆರೋಪಿಗಳಲ್ಲಿ ಒಬ್ಬ ತಿಳಿಸಿದ್ದನು. ಅಲ್ಲಿ ಬಾಲ ಕಿಯ ಕೂದಲಿನ ಅವಶೇಷಗಳು ದೊರಕಿದ್ದವು. ಆಸಿಫಾಳಿಗೆ ಮಾದಕ ವಸ್ತು ನೀಡಿದ್ದೇ ಆತ.
ಅಲೆಮಾರಿ ಸಮುದಾಯದ ಗುಜ್ರಾರ್‍ಗಳನ್ನು ಕಥುವಾದಿಂದ ಹೊರದಬ್ಬುವ ಕ್ರಮದ ಭಾಗವಾಗಿ ಈ ಅನಚಾರ ನಡೆದಿದೆ ಎಂದು ಪೊಲೀ¸ಸರು ಹೇಳುತ್ತಾರೆ. ಹೆಡ್ ಕಾನ್ಸ್‍ಟೇಬಲ್ ತಿಲಕ್‍ರಾಜ್ ಮತ್ತು ಎಸ್ಸೈ ಅನಂತ್‍ಕುಮಾರ್ ಸಾಕ್ಷ್ಯ ನಾಶಕ್ಕೆ ನೇತೃತ್ವ ವಹಿಸಿದರು. ಕುದುರೆಗೆ ಹುಲ್ಲು ತರಲು ಬಾಲಕಿ ಮನೆಯಿಂದ ಹೋಗಿದ್ದಳು. ಬಕರ್‍ವಾಲ ಸಮುದಾಯದಲ್ಲಿ ಹುಟ್ಟಿದ್ದೇ ಆಸಿಫಾಳ ಈ ದಾರುಣ ಅಂತ್ಯಕ್ಕೆ ಕಾರಣವೆಂದು ಆರೋಪಿಗಳಲ್ಲಿ ಒಬ್ಬನಾದ ವಿಶಾಲ್ ಬಹಿರಂಗವಾಗಿ ಹೇಳಿದ. ಹಣದಾಸೆಗಾಗಿ ಪ್ರತಿಯೊಂದು ಹಂತದಲ್ಲಿ ಸಾಕ್ಷ್ಯ ನಾಶಮಾಡಲಾಗಿದೆಯೆಂದು ತಿಲಕ್ ರಾಜ್ ಸಮ್ಮತಿಸಿದ್ದಾನೆ.
ಜಮ್ಮುವಿನಲ್ಲಿ ಎರಡು ವಿಭಾಗಗಳ ನಡುವೆ ಜಮೀನು ತರ್ಕ ಇದೆ. ಆಸಿಫಾಳ ಕೊಲೆಯು ಅದನ್ನು ಆಂಟಿ ಕ್ಲೈಮಾಕ್ಸ್‍ಗೆ ತಂದು ನಿಲ್ಲಿಸಿದೆ. ಕಳೆದ ವರ್ಷ ನವೆಂಬರ್‍ನಿಂದ ಕಥುವಾದ ರಸಾನ ಎಂಬ ಸ್ಥಳದಲ್ಲಿ ಹಿಂದೂಗಳು ಮತ್ತು ಬಕರ್‍ವಾಲ ವಿಭಾಗದವರ ನಡುವೆ ಪರಸ್ಪರ ಗಡಿ ಜಗಳವಾಗಿತ್ತು. ಅಂದೇ ಹಿಂದೂಗಳು ಬಕರ್‍ವಾಲಾಗಳಿಗೆ ಒಂದು ಪಾಠ ಕಲಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ದೇವಸ್ಥಾನದ ¸ ಸಂಚಾಲಕ ರಾದ ಸಂಜಿರಾಮ್ ಈ ಕ್ರೌರ್ಯಕ್ಕೆ ಸಂಚು ಹೆಣೆದ. ಅದಕ್ಕಾಗಿ ಅಪ್ರಾಪ್ತ ಸಂಬಂಧಿಕ ಮತ್ತು ಖಜೂರಿಯನನ್ನು ಕರೆಯಿಸಿಕೊಂಡಿದ್ದಾನೆ. ಅಲೆಮಾರಿ ಬಕರ್‍ವಾಲ ಸಮುದಾಯದ ವಿರುದ್ಧ ಈ ಇಬ್ಬರ ಮನಸ್ಸಿನಲ್ಲಿ ತೀರದ ಹಗೆಯಿತ್ತು.
ಕಥುವಾ ದುರಂತವನ್ನು ವಿವರವಾಗಿ ತಿಳಿದ ಯಾರೂ ಕಂಪಿಸದಿರಲು ಸಾಧ್ಯವಿಲ್ಲ. ಆದರೆ, ಬಿಜೆಪಿ ಬೆಂಬಲಿತ ವಕೀಲರಿಗೆ ಏನೂ ಅನಿಸಿಲ್ಲ. ಅಲ್ಲಿನ ದೊಡ್ಡ ಭಾಗದ ಜನರಿಗೆ ಏನೇನೂ ಅನಿಸಿಯೇ ಇಲ್ಲ. ಅವರು ಒಂದುಗೂಡಿ ಕಥುವಾ ತನಿಖೆ ನ್ಯಾಯಪೂರ್ಣವಾಗಿಲ್ಲ ಎಂದು ಆರೋಪಿಸಿ ಪ್ರತಿ ಭಟನೆ ನಡೆಸಿದರು. ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದರು. ಬಿಜೆಪಿಯ ರಾಜ್ಯ ನಾಯಕರಾದ ಲಾಲ್ ಸಿಂಗ್ ಚೌಧರಿ, ಚಂದ್ರ ಪ್ರಕಾಶ್ ಗಂಗಾ ರ್ಯಾಲಿಯಲ್ಲಿ ಭಾಗವಹಿಸಿದರು. ಆರೋಪಿಯೊಬ್ಬನ ಅಮ್ಮ ಸಹಿತ ನಾಲ್ವರು ಮಹಿಳೆಯರು ಬಂಧನದ ವಿರುದ್ಧ ಅ ನಿರ್ಧಿಷ್ಟಾವಧಿ ಅನ್ನ ಸತ್ಯಾಗ್ರಹ ನಡೆಸಿ ದರು. ಆರೋಪ ಪಟ್ಟಿ ಕೋರ್ಟಿಗೆ ಸಲ್ಲಿಸದಂತೆ ತಡೆಯುವ ಯತ್ನ ನಡೆಯಿತು. ಜಮ್ಮು ಜೊತೆಗೆ ಹೈಕೋರ್ಟಿನ ಬಾರ್ ಅಸೊಸಿಯೇಶನ್ ಪ್ರತಿಭಟನೆ ಯಲ್ಲಿ ಸೇರಿಕೊಂಡಿತು. ಅವರು ಜಮ್ಮು ಬಂದ್ ಕರೆ ನೀಡಿದರು. ಆದರೆ ಅದರಿಂದ ಏನೂ ಪ್ರಯೋ ಜನ ಆಗಲಿಲ್ಲ. ಜಮ್ಮುವಿನ ವ್ಯಾಪಾರಿ ಸಮೂಹ ಅದಕ್ಕೆ ಒಪ್ಪಲಿಲ್ಲ. ದೀಪಿಕಾ ರಜಾವತ್ ಎಂಬ ಯುವ ವಕೀಲೆ ¨ಬೆದರಿಕೆಯನ್ನು ಲೆಕ್ಕಿಸದೆ ಆಸಿಫಾಳ ಕೇಸಿನಲ್ಲಿ ವಾದಿಸಲು ಮುಂದೆ ಬಂದರು. ಈಗ ಜಮ್ಮು ಬಾರ್ ಅಸೋಸಿಯೇಶನ್ ಇನ್ನೊಂದು ವಿವಾದ ಎತ್ತಲು ಮುಂದಾಯಿತು. ಅನಧಿಕೃತವಾಗಿ ಜಮ್ಮು ಮತ್ತು ಪರಿಸರದಲ್ಲಿ ವಲಸೆ ಬಂದಿರುವ ಅಲೆಮಾರಿಗಳನ್ನು ಹೊರದಬ್ಬಬೇಕೆಂದು ಅವರು ಹೇಳಿಕೆ ನೀಡಿದರು. ಜಮ್ಮುವಿನ ಸಣ್ಣದಾದೊಂದು ಭಾಗದಲ್ಲಿ ಕೆಲವು ರೋಹಿಂಗ್ಯನ್ ನಿರಾಶ್ರಿತರು ವಾಸಿಸುತ್ತಿದ್ದಾರೆ. ಅವರು ಈಗಲೂ ಗಡಿಪಾರಿನ ಬೆದರಿಕೆಯಲ್ಲಿ ಬದುಕುತ್ತಿದ್ದಾರೆ.
ಮೆಹಬೂಬ ಮುಫ್ತಿ ಸರಕಾರ ಬಿಜೆಪಿಯ ಅಜೆಂಡಾವನ್ನು ಜಾರಿಗೆ ತರುತ್ತಿದೆ ಎಂದು ರಾಜ ಕೀಯ ವಿಶ್ಲೇಷಕರು ಹೇಳುತ್ತಾರೆ. ಕೇಂದ್ರ ¸ ಸರಕಾರದ ವಿರುದ್ಧ ಅವರಿಗೆ ಒಂದು ನಿಲುವು ತೆಗೆದು ಕೊಳ್ಳಲು ಸಾಧ್ಯವಾಗುತ್ತಿಲ್ಲ. ತನ್ನ ಕ್ಯಾಬಿನೆಟ್‍ನ ಇಬ್ಬರು ಸಚಿವರು ಆಸಿಫಾ ಹತ್ಯೆ ಅತ್ಯಾಚಾರದ ಆರೋಪಿಗಳನ್ನು ಬೆಂಬಲಿಸಿ ರ್ಯಾಲಿ ನಡೆಸಿದ್ದರೂ ಅವರಿಂದ ಯಾವ ಕ್ರಮವೂ ಜರಗಲಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸದೆ ಕ್ರೈಂ ಬ್ರಾಂಚ್‍ಗೆ ಒಪ್ಪಿಸಿದರು ಎನ್ನುವುದು ಮಾತ್ರ ಅವರಿಂದಾದ ಒಂದು ದಿಟ್ಟ ನಿಲುವು ಎನ್ನಬಹುದು. ಬಿಜೆಪಿಯ ಈ ಅತ್ಯಾಚಾರಿಗಳ ಪರ ನಿಲುವಿನಲ್ಲಿ ಹಲವು ಉದ್ದೇಶಗಳಿವೆ ಎಂದು ಅಂದಾಜಿಸಲಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಶ್ಮೀರ ವನ್ನು ಕುದಿಸಿ ಲಾಭಪಡೆಯುವ ಪ್ರಯತ್ನ ಇದು. ದೇಶವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಲು ಮೋದಿ ಸರಕಾರ ವಿಫಲವಾಗಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಇನ್ನು ಅವರಿಗೆ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಆದ್ದರಿಂದ ಕಾಶ್ಮೀರದ ಮುಸ್ಲಿಮರನ್ನು ಕೊಂದು ದಮನಿಸಿ ವಿಜಯಗಳಿಸ ಬಹುದೇ ಎಂದು ನೋಡಲಾಗುತ್ತಿದೆ. ಕುಲ್‍ಗಾಮ್, ಶಾಪಿಯಾನ್ ದುರಂತಗಳು ಮತ್ತು ಆಸಿಫಾಳ ಅತ್ಯಾ ಚಾರಿಗಳಿಗೆಲ್ಲ ¸ ಸಂಬಂಧ ಬರುವುದು ಅಲ್ಲಿಯೇ.
ಕೃಪೆ: ಮಾಧ್ಯಮಂ ದೈನಿಕ