ಜಯಂತ್ ಸಿನ್ಹಾರ ಗಮನಕ್ಕೆ: ಇನ್ನಷ್ಟು ಹಾರಗಳನ್ನು ಸಿದ್ಧಪಡಿಸಿಡಿ

0
338

ಇರ್ಷಾದ್ ಬೆಂಗಳೂರು

ಇತ್ತೀಚಿಗೆ ಕೇಂದ್ರ ಸಚಿವ ಜಯಂತ್ ಸಿನ್ಹಾ ಗೋ ರಕ್ಷಣೆಯ ಹೆಸರಲ್ಲಿ ಕೊಲೆ ಮಾಡಿರುವ ಆರೋಪಿಗಳನ್ನು ಸನ್ಮಾನ ಮಾಡಿರುವುದು ಕೆಲವರಿಗೆ ಆಶ್ಚರ್ಯ ಅನಿಸದಿರಬಹುದು. ಏಕೆಂದರೆ 2014 ರಿಂದ ಇತ್ತೀಚಿನವರೆಗೆ ಗೋ ರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಕೊಲೆಗಳಿಗೆ ಕಡಿವಾಣ ಹಾಕುವುದರಲ್ಲಿ ಸರ್ಕಾರಗಳು ತೋರಿಸಿರುವ ನಿರಾಸಕ್ತಿ ಮತ್ತು ಗೋ ರಕ್ಷಕರ ಸೋಗಿನಲ್ಲಿರುವ ಇಂಥ ರಾಕ್ಷಸರಿಗೆ ಅಧಿಕಾರದಲ್ಲಿರುವ ರಾಜಕಾರಣಿಗಳಿಂದ ಸಿಗುತ್ತಿರುವ ಬೆಂಬಲ ಮತ್ತು ಸನ್ಮಾನ. ಅದೇ ರೀತಿ ಇಂಥ ಸುದ್ದಿಗಳು ಓದಿ ಇದೆಲ್ಲ ಸಾಮಾನ್ಯ ಇದರಿಂದ ನಮಗೇನಾಗಬೇಕಿದೆ ಎನ್ನುವ ಜನ.
ಹೀಗಿರುವಾಗ ಆಖ್ ಲಾಕ್ ನನ್ನು ಕೊಂದ ಆರೋಪಿ ಸತ್ತಾಗ ಅವನನ್ನು ದೇಶಕ್ಕಾಗಿ ಹೋರಾಡಿ ಸತ್ತ ಸೈನಿಕನಂತೆ ರಾಷ್ಟ್ರ ಧ್ವಜ ಹೊದಿಸಿ ಬೀಳ್ಕೊಡುವ ಪಕ್ಷದ ಮುಖಂಡರ ಬಗ್ಗೆ ಇನ್ನೇನು ನಿರೀಕ್ಷಿಸಲು ಸಾಧ್ಯ.

2014 ಕ್ಕಿಂತ ಮುಂಚೆ ಸಹ ಇಂಥ ಘಟನೆಗಳು ನಡೆಯುತ್ತಿದ್ದವು. ಆದರೆ ಆರೋಪಿಗಳಿಗೆ ಕಾನೂನಿನ ಭಯ ಇರುತಿತ್ತು ಮತ್ತು ಈ ರೀತಿಯ ಅಪರಾಧಗಳಿಗೆ ಜನ ಮನ್ನಣೆ ಹಾಗು ಬೆಂಬಲ ಸಿಗುತ್ತಿರಲಿಲ್ಲ.
ಹೆಚ್ಚಾಗಿ ಈ ಹುಚ್ಚಾಟಕ್ಕೆ ಬಲಿಯಾಗುವವರು ಮುಸ್ಲಿಮರು ಮತ್ತು ಕೆಲವು ಸಾರಿ ಉನಾ ದಲ್ಲಿ ಆದ ಹಾಗೆ ದಲಿತರು ಹಾಗೂ ಕೆಲವೊಮ್ಮೆ ಪ್ರವಿಣ್ ಪೂಜಾರಿಯಂಥ ಅಮಾಯಕ ಹಿಂದೂಗಳು.
ಈ ಕೆಳಗೆ ಕಳೆದ ಕೆಲವು ವರ್ಷಗಳಲ್ಲಿ ಮಾಧ್ಯಮಗಳಲ್ಲಿ ವರದಿಯಾದ ಇಂಥ ಕೆಲವು ಘಟನೆಗಳ ಪಟ್ಟಿ ಮಾಡಲು ಯತ್ನಿಸಲಾಗಿದೆ.

1. ರಸ್ತೆಯಲ್ಲಿ ಅಡ್ಡ ಬಂದ ಹಸು ಸರಿಸಲು ಹಾರ್ನ್ ಹೊಡೆದ ವ್ಯಕ್ತಿ ದಾಳಿಗೊಳಗಾಗಿ ಕಣ್ಣು ಕಳೆದುಕೊಂಡ ಘಟನೆ ಬಿಹಾರದಲ್ಲಿ ನಡೆದಿತ್ತು.

LINK
2. ನೋಯ್ಡಾ ದಲ್ಲಿ ಮುಸ್ಲಿಮರೆಂದು ತಿಳಿದು ಜಬರ್ ಸಿಂಗ್ ಮತ್ತು ಭೂಪ್ ಸಿಂಗ್ ಎಂಬವರ ಮೇಲೆ ಗೋರಕ್ಷಕರಿಂದ ಮಾರಣಾಂತಿಕ ಹಲ್ಲೆ
report
3. ಮಧ್ಯಪ್ರದೇಶದಲ್ಲಿ ಗೋ ಸಾಗಣೆ ಮಾಡ್ತಾ ಇದ್ದಾರೆಂದು ಒಬ್ಬ ವ್ಯಕ್ತಿ ಗಣೇಶ್ ಮತ್ತು ಗುಲ್ಲ ಸೋಮ ಎಂಬ ತನ್ನ ಎರಡು ಸ್ನೇಹಿತರನ್ನೇ ಕೊಂದು ಹಾಕಿದ LINK
4. ಉಜ್ಜಯಿನಿಯಲ್ಲಿ ಅಪ್ಪು ಮಾಲ್ವಿಯ ಎಂಬ ವ್ಯಕ್ತಿಯನ್ನು ಗೋ ರಾಕ್ಷಸರು ಸಾರ್ವಜನಿಕವಾಗಿ ಕೊಂದು ಹಾಕ್ತಾರೆ LINK & LINK
5. ಶೇಕ್ ಬಿಸ್ಮಿಲ್ಲಾ (೨೭) ಮತ್ತು ಅವರ ಚಿಕ್ಕಪ್ಪ ಶೇಕ್ ಸಿದ್ದಿಕ್ (೬೫) ಎಂಬುವವರ ಮೇಲೆ ಮಹಾರಾಷ್ಟ್ರದಲ್ಲಿ ಮಾರಣಾಂತಿಕ ಹಲ್ಲೆ ನಡೆಯಿತಲ್ಲದೆ ನಂತರ ಪೊಲೀಸರ ಪ್ರಕರಾಣ ಸಹ ಎದುರಿಸಬೇಕಾಯಿತು.
6. ದೇಶದ ರಾಜಧಾನಿ ದೆಹಲಿಯಲ್ಲಿ ರಿಜ್ವಾನ್ ಮತ್ತು ಅವನ ಇಬ್ಬರು ಸಂಗಡಿಗರ ಮೇಲೆ ಪೀಪಲ್ ಫಾರ್ ಎನಿಮಲ್ ಎಂಬ ಸಂಘಟನೆಯ ಕಾರ್ಯಕರ್ತರು ಹಲ್ಲೆ ಮಾಡಲಾಗುತ್ತೆ

LINK ಮತ್ತು LINK

7. ಗೋ ರಕ್ಷಕರಿಂದ ಆಲಿಘಡ್ ನಲ್ಲಿ ಹಲ್ಲೆ

video
8. 9 ವರ್ಷದ ಮಗು ಸೇರಿದಂತೆ ಜಮ್ಮು ಕಾಶ್ಮೀರಿನ ಒಂದೇ ಕುಟುಂಬದ ಐವರ ಮೇಲೆ ಗೋ ರಕ್ಷಕರ ಹಲ್ಲೆ

LINK
9. ಶಿವಂ ಎಂಬ ವಿದ್ಯಾರ್ಥಿಯನ್ನು ಪತ್ರಕರ್ತನೆಂದು ತಿಳಿದು ಹಲ್ಲೆ

LINK
10. ಜಾರ್ಖಂಡ್ ನಲ್ಲಿ ಐನೂಲ್ ಅನ್ಸರ್ ಎಂಬ ಮೇಲೆ ಹಲ್ಲೆ , ಅದೃಷ್ಟವಶಾತ್ ಪೊಲೀಸರಿಂದ ರಕ್ಷಣೆ

LINK
11. ನೂರಕ್ಕಿಂತ ಹೆಚ್ಚು ಜನರಿಂದ ಜೈಪುರದ ಹೋಟೆಲ್ ಮಾಲೀಕನ ಮೇಲೆ ಯತ್ನ

LINK

12. ರಾಜಸ್ಥಾನದಲ್ಲಿ ಪೆಹಲು ಖಾನ್ ಎಂಬ ವ್ಯಕ್ತಿಯನ್ನು ಸಾರ್ವಜನಿಕವಾಗಿ ಹತ್ಯೆ ಮಾಡಲಾಯಿತು

Pehlu Khan lynching case: Alwar police charge all victims with cow smuggling

13. ತಮಿಳುನಾಡು ಸರ್ಕಾರದ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳ ಮೇಲೆ ಹಲ್ಲೆ. ಸರಿಯಾದ ಸಮಯದಲ್ಲಿ ಪೊಲೀಸರು ಬರದಿದ್ದರೆ ಹಸುಗಳು ಮತ್ತು ಅಧಿಕಾರಿಗಳು ವಾಹನ ಸಮೇತ ಸಜೀವ ದಹನ ಮಾಡಲು ಯತ್ನಿಸಿದ್ದರು

LINK
14. ಹಬ್ಬಕ್ಕಾಗಿ ರೈಲಿನಲ್ಲಿ ಮನೆಯಲ್ಲಿ ತೆರಳುತ್ತಿದ್ದ ೧೬ ವರ್ಷದ ಜುನೈದ್ ನನ್ನು ಕೊಲ್ಲಲಾಯಿತು.

LINK & LINK
15. ಪಶ್ಚಿಮ ಬಂಗಾಳದಲ್ಲಿ ಮೂವರು ಮುಸ್ಲಿಮರ ಮೇಲೆ ಹಲ್ಲೆ ನಡೆಸಲಾಯಿತು.

LINK
16. ಅಸ್ಸಾಮಿನಲ್ಲಿ ಅಣು ಹನೀಫಾ ಮತ್ತು ರಿಯಾಝುದ್ದೀನ್ ಎಂಬವರ ಮೇಲೆ ಹಲ್ಲೆ

READ
17. ಪಶ್ಚಿಮ ಬಂಗಾಳದಲ್ಲಿ ೪೨ ವರ್ಷದ ಮಾನಸಿಕ ಅಸ್ವಸ್ಥೆ ಮಹಿಳೆಯ ಮೇಲೆ ಹಲ್ಲೆ

LINK
18. ಜಾರ್ಖಂಡ್ ನಲ್ಲಿ ಅನ್ಸಾರಿ ಎಂಬವರ ಮೇಲೆ ಹಲ್ಲೆ ನಡೆಸಿ ಅವರ ಮನೆ ಸುಟ್ಟು ಹಾಕಲಾಯಿತು

LINK
19. ಜಾರ್ಖಂಡ್ ನಲ್ಲಿ ಅಲೀಮುದ್ದಿನ್ ಎಂಬವರ ಮೇಲೆ ಹಲ್ಲೆ

LINK & LINK
20. ಬಿಹಾರದಲ್ಲಿ ಬಾಬನ್ ಮತ್ತು ಮುರಾಹು ಎಂಬ ದಲಿತರನ್ನು ಕೊಲ್ಲಲಾಯಿತು

LINK & LINK
21. ಗೋ ರಕ್ಷಕರು ಒತ್ತೆಯಾಳು ಮಾಡಿಕೊಂಡಿದ್ದ ತಮ್ಮ ಸಂಬಂಧಿಕರನ್ನು ಬಿಡಿಸಲು ಹೋದ ಎಂಟು ಹಿಂದುಗಳನ್ನು ಹರ್ಯಾಣದಲ್ಲಿ ಕೊಲ್ಲಲಾಯಿತು.

LINK
22. ನಾಗ್ಪುರದಲ್ಲಿ ಬಿಜೆಪಿಯ ಮೈನಾರಿಟಿ ಘಟಕದ ಕಾರ್ಯದರ್ಶಿ ಸಲೀಮ್ ಎಂಬುವವರ ಮೇಲೆ ಹಲ್ಲೆ

LINK
23. ಉತ್ತರ ಪ್ರದೇಶದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಕುಟುಂಬದ ಮೇಲೆ ಹಲ್ಲೆ , ಘಟನೆಯಲ್ಲಿ ಮಹಿಳೆ ಸೇರಿದಂತೆ ಅಂಗ ವಿಕಲ ಮಗನನ್ನು ರಾಡ್ಗಳಿಂದ ಥಳಿಸಿದ ರಾಕ್ಷಸರು. “ಕೊಲ್ಲಿ ಇವರನ್ನು ಇವರೆಲ್ಲ ಮುಸ್ಲಿಮರು ” ಎಂದು ಕೊಗುತ್ತಿದ್ದ ಗುಂಪು

LINK
24. ಗುಜರಾತಿನಲ್ಲಿ ಸತ್ತ ದನದ ಚರ್ಮ ಸುಲಿದರೆಂದು ಶೈಲೇಶ್ ಮತ್ತು ಅವರ ತಾಯಿಯ ಮೇಲೆ ನೂರು ಜನರ ಉದ್ರಿಕ್ತ ಗುಂಪಿನಿಂದ ಮಾರಣಾಂತಿಕ ಹಲ್ಲೆ

LINK & LINK & LINK
25. ಜಮ್ಮು ಕಾಶ್ಮೀರದಲ್ಲಿ ೭೦ ವರ್ಷದ ಮುದುಕನ ಮೇಲೆ ಹಲ್ಲೆ

LINK
26. ಪಶ್ಚಿಮ ಬಂಗಾಳದಲ್ಲಿ ದನ ಕಳ್ಳರೆಂಬ ಆರೋಪ ಮಾಡಿ ಇಬ್ಬರು ಮುಸ್ಲಿಂ ಯುವಕರ ಕೊಲೆ

LINK
27. ರಾಜಸ್ಥಾನದಲ್ಲಿ ಮುಹಮ್ಮದ್ ಉಮರ್ ಎಂಬ ಯುವಕನನ್ನು ಕೊಂದು ರೈಲ್ವೆ ಹಳಿ ಮೇಲೆ ಎಸೆದರು

LINK
28. ಗೋ ಹತ್ಯೆ ಆರೋಪದಡಿ ಮೂರುವರೆ ತಿಂಗಳು ಜೈಲು ವಾಸ ಅನುಭವಿಸಿದ ನಾಲ್ವರು ಅಪ್ರಾಪ್ತರು . ವಿಪರ್ಯಾಸವೆಂದರೆ ಅದರಲ್ಲಿ ೯ ತಿಂಗಳು ಮಗು ಸಹ ಇತ್ತು
https://www.thequint.com/news/india/muzaffarnagar-khatauli-cow-slaughter-2017

29. ಉತ್ತರ ಪ್ರದೇಶದಲ್ಲಿ ಗೋ ಹತ್ಯೆ ಆರೋಪದಡಿ ಸೆರೆಯಲ್ಲಿದ್ದ ೩೪ ವರ್ಷದ ಕುಮಾರ್ ಜೈಲಿನಲ್ಲಿ ಸಾವು

LINK
30. ಮಧ್ಯ ಪ್ರದೇಶದಲ್ಲಿ ೪೫ ವರ್ಷದ ರಿಯಾಜ್ ಎಂಬವರ ಕೊಲೆ

LINK
31. ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ಪೋಲೀಸರ ಮುಂದೆಯೇ ಯಾವುದೇ ಭಯವಿಲ್ಲದೆ ನಡೆದ ಕಾಸಿಂ ಎಂಬ ವ್ಯಕ್ತಿಯ ಕೊಲೆ

LINK

32. ಇತ್ತೀಚೆಗೆ ಕರ್ನಾಟಕದಲ್ಲಿ ಹಸನಬ್ಬ ಎಂಬುವವರ ಕೊಲೆ

ಅಂಕಿ ಅಂಶ ಸಂಗ್ರಹ : http://www.anindianmuslim.com/

ಮೇಲೆ ನೀಡಲಾಗಿರುವ ಪಟ್ಟಿಯಲ್ಲಿರುವುದು ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ಕುರಿತು ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ವರದಿಯಾದ ಕೆಲವು ಘಟನೆಗಳು ಮಾತ್ರ. ಆದರೆ ಈ ಭಯೋತ್ಪಾದಕರಿಗೆ ಹಿಂಸೆ ನಡೆಸಲು ಕಾರಣಗಳ ಅವಶ್ಯಕತೆಯಿಲ್ಲ. ಯಾಕಂದರೆ ಕೆಲವೊಮ್ಮೆ ಲವ್ ಜಿಹಾದ್ ಹೆಸರಲ್ಲಿ ಮತ್ತೆ ಕೆಲವೊಮ್ಮೆ ಗಡ್ಡವಿದೆಯೆಂದು ಅಥವಾ ದಲಿತನಾಗಿ ಮೀಸೆ ಬೆಳಿಸಿದ್ದಾನೆಂಬುದು ಸಹ ಕಾರಣವಾಗಬಹುದು. ಅಷ್ಟೇ ಯಾಕೆ ಕೇವಲ ಮುಸ್ಲಿಂ ಅಥವಾ ದಲಿತನೆಂಬ ಕಾರಣವೂ ಸಾಕಾಗಬಹುದು.