ಜಿಗ್ನೇಶ್: ಹೊಸ ಸಾಧ್ಯತೆಯ ಪ್ರತೀಕ

0
590

ಬಾನುಜ್ಯೋತ್ಸ್ನ ಲಾಹಿರಿ
ಜಿಗ್ನೇಶ್ ಮೇವಾನಿ ಆ ತೀರ್ಮಾನ ಮಾಡು ವಾಗ ಬಹಳ ತಡವಾಗಿತ್ತು. ಅಂದರೆ ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸುವ ವಿಷಯವನ್ನು ನವೆಂಬರ್ ಇಪ್ಪತ್ತೇಳಕ್ಕೆ ಬಹಿರಂಗಪಡಿಸಿದ್ದರು. ವಡ್ಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಯಕೆಯನ್ನು ಫೇಸ್ ಬುಕ್ ಪೋಸ್ಟ್ ಮೂಲಕ ಅವರು ಘೋಷಿಸಿದರು. ಮೆಹ್ಸನಾದಲ್ಲಿ ಹುಟ್ಟಿ ಅಹ್ಮದಾಬಾದ್‍ನಲ್ಲಿ ವಾಸ ವಿರುವ ಜಿಗ್ನೇಶ್ ಉತ್ತರ ಗುಜರಾತ್‍ನ ವಡ್‍ಗಾಂವ್ ನಿವಾಸಿಗಳಿಗೆ ತೀರಾ ಹೊರಗಿನ ಮನುಷ್ಯ. ಆದರೆ, ಅವರು ಜಿಗ್ನೇಶ್ ಎನ್ನುವ ಹೆಸರನ್ನು ಕೇಳಿದ್ದರು. ವ್ಯವಸ್ಧೆಯ ವಿರುದ್ಧ ಕೋಪಿಸಿಕೊಂಡ ಭಿನ್ನಮತೀಯ ಯುವಕನಾಗಿ ವಡ್‍ಗಾಂವ್ ನಿವಾಸಿಗಳು ಕೂಡಾ ಅಂದಾಜಿಸಿದರು. ಜಿಗ್ನೇಶ್‍ರು ಉನಾದ ಜನಪರ ಹೋರಾಟದಲ್ಲಿ ಪ್ರಸಿದ್ಧ ರಾದರು. ಸತ್ತದನದ ಚರ್ಮ ಸುಲಿದು ಜೀವನದಾರಿ ಕಂಡುಕೊಂಡಿದ್ದ ನಾಲ್ವರು ದಲಿತರನ್ನು ಸವರ್ಣೀಯರು ಕ್ರೂರವಾಗಿ ಹೊಡೆದ ಘಟನೆಯು ಉನಾದಲ್ಲಿ ನಡೆದಿತ್ತು. ಅದು ದಲಿತ ಪ್ರತಿಭಟನೆಗೆ ಕಾರಣವಾಯಿತು. ಭಾರತದಾದ್ಯಂತ ಅದರ ಅಲೆ ಸೃಷ್ಟಿಯಾದವು. ಇದರಿಂದ ವಕೀಲ, ಪತ್ರಕರ್ತ ಜಿಗ್ನೇಶ್ ದಲಿತರ ಪ್ರತಿಭಟನೆಯ ಮುಖ್ಯ ನಾಯಕ ಎನಿಸಿಕೊಳ್ಳಲು ಸಾಧ್ಯವಾಯಿತು. ದಲಿತರ ವಿವಿಧ ಅಗತ್ಯಗಳನ್ನು ಎತ್ತಿಹಿಡಿಯುವಲ್ಲಿ ಅವರು ಯಶಸ್ವಿಯಾದರು.
ಗುಜರಾತ್‍ನ ದಲಿತರನ್ನು ಯಾವ ವಿಧದಲ್ಲಿ ಮುಖ್ಯಧಾರೆಯಿಂದ ದೂರವಿರಿಸಲಾಗಿದೆ ಎನ್ನುವು ದನ್ನು ಗ್ರಹಿಸಲು ಜಿಗ್ನೇಶ್‍ರ ಪ್ರಚಾರ ಉಪಯೋಗ ವಾಯಿತು. ಉನಾ ಘಟನೆಯ ನಂತರ ಅವರು ವಿಶ್ರಮಿಸಲಿಲ್ಲ. ನರೇಂದ್ರ ಮೋದಿಯವರ ಗುಜರಾತ್ ಅಭಿಯಾನದ ವಿರುದ್ಧ ಅವರು ಗಲಭೆಯ ಧ್ವಜವನ್ನು ಎತ್ತಿಹಿಡಿದರು. ಜಮೀನುರಹಿತ ದಲಿತ ರಿಗೆ ಜಮೀನು ಕೇಳಿ ಅವರು ರ್ಯಾಲಿ ಹಮ್ಮಿ ಕೊಂಡರು. ಆ ಅಝಾದಿ ಮಾರ್ಚ್ ವಡ್ನಗಾಂವ್ ಸಮೀಪದ ಬನಸ್ಕಾಂತ ಗ್ರಾಮದಲ್ಲಿ ಸಮಾಪನ ಗೊಂಡಿತು. ಇದರ ನಂತರ ಹಲವಾರು ದಲಿತರಿಗೆ ಜಮೀನು ಕೊಡಲು ಸರಕಾರ ನಿರ್ಬಂಧಿತವಾದವು. ವಾಸ್ತವದಲ್ಲಿ ಅರ್ಧ ಶತಮಾನ ಹಿಂದೆಯೇ ಸರಕಾರ ಅನುಮತಿಸಿದ ಜಮೀನು ಈಗ ವಿತರಣೆಯಾದದ್ದು. ಬಿಜೆಪಿಯ ಕೋಮು ರಾಜಕೀಯ, ಅಲ್ಪಸಂಖ್ಯಾತರ ಬೇಟೆಯ ವಿರುದ್ಧ ಜಿಗ್ನೇಶ್ ಭಯವರಿಯದೆ ಧ್ವನಿಯೆತ್ತಿ ದರು. ಗುಜರಾತ್ ಅಭಿವೃದ್ಧಿ ಮಾದರಿ ಎನ್ನುವ ತಲೆಕೆಟ್ಟ ಮಾದರಿಯ ವಿರುದ್ಧ
ಅವರು ನಿರಂತರ ಗದ್ದಲವೆಬ್ಬಿಸಿದರು. ಸಾಮಾ ಜಿಕ ಮಾಧ್ಯಮಗಳ ಮೂಲಕ ಅವರ ಮಾತು ಗಳು ಕೆಲಸಗಳು ದೂರ ದೂರ ದಿಕ್ಕಿಗೆ ಹರಡಿ ಕೊಂಡಿತು. ಚುನಾವಣೆಯ ಅಂಗಣಕ್ಕೆ ಕಾಲಿಡುವಾಗ ಜಿಗ್ನೇಶ್ ಅಷ್ಟೇನೂ ಅಪರಿಚಿತ
ನಾಗಿರಲಿಲ್ಲ ಎಂದೇ ಹೇಳಬೇಕು.
ಹೊಲಿಗೆ ಮೆಷಿನ್:
ವಡ್ಗಾಂವ್‍ನಲ್ಲಿ ಜಿಗ್ನೇಶ್ ಸ್ವತಂತ್ರ ಅಭ್ಯರ್ಥಿ. ತಾವರೆ, ಕೈ ಪರಿಚಿತ ಮತದಾರರ ನಡುವೆ ಅವರ ಹೊಲಿಗೆಯಂತ್ರ ನೆಲೆಯೂರುವುದು ¸ ಸಂದೇಹಾಸ್ಪದವಾಗಿತ್ತು. ಒಂದು ವೇಳೆ ಅವರು ಈ ಚಿಹ್ನೆಯನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಂಡಿರಬಹುದು. ಅಭಿವೃದ್ದಿಯ ಉದ್ದೇಶದ ಹಿಂದುಳಿಯುವಿಕೆಯನ್ನು ಮುಂದೆ ಕರೆದೊಯ್ಯ ಬೇಕು ಎನ್ನುವ ಮನಸ್ಸು ಅವರಿಗಿತ್ತು. ಕಾಂಗ್ರೆಸ್‍ನ ಪರಂಪರಾಗತ ಸೀಟು ಗೆಲ್ಲುವ ಚಿನ್ನದಂತಹ ಅವಕಾಶವನ್ನು ಅವರು ಲೆಕ್ಕ ಹಾಕಿದರು. ಬಿಜೆಪಿಯು ಯಾವ ನೆಲೆಯಲ್ಲಿಯೂ ಸೀಟು ಗೆಲ್ಲಬೇಕೆನ್ನುವ ಹಟದಲ್ಲಿ ಗರಿಷ್ಠ ಸಂಪನ್ಮೂಲಗಳನ್ನು ಸಂಗ್ರಹಿಸಿತ್ತು. ಮಾಜಿ ಶಾಸಕ ಅಶ್ವಿನ್ ಪರಮಾರ್ ಕಾಂಗ್ರೆಸ್ಸಿನ ನೈಜ ಬೆಂಬಲ ತನಗಿದೆ ಎನ್ನುವ ಪ್ರಚಾರವನ್ನೂ ಮಾಡಿದರು. ಜಿಗ್ನೇಶ್‍ರೊಂದಿಗೆ ಸಹಕರಿಸಲು ನಿರಾಕರಿಸಿದರು. ಬಿಎಸ್‍ಪಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿತು.
ಸರಿಯಾಗಿ ಹೇಳುವುದಾದರೆ ಪಾರ್ಟಿಯೆನ್ನುವ ಸಂಘಟನಾ ಬಲ, ಅದಕ್ಕೆ ಸಾಧ್ಯವಿರುವಷ್ಟು ಸಂಪನ್ಮೂಲ ಗಳು ಇಲ್ಲದೇ ಜಿಗ್ನೇಶ್ ರಂಗಪ್ರವೇಶ ನಡೆಸಿದರು. ಬೆಂಬಲ ಹುಡುಕಿ ಅವರು ಅಭಿಮಾನಿಗಳು, ಗೆಳೆಯರು, ಹಿತೈಷಿಗಳ ಸಹಾಯ ಕೇಳಿದರು. ಜಿಗ್ನೇಶ್ ಚುನಾ ವಣಾ ಪ್ರಚಾರವು ರಾಜ್ಯ, ಕೇಂದ್ರ ಬಿಜೆಪಿ ಸರಕಾರಗಳ ವಿರುದ್ಧ ರಾಜ ಕೀಯ ಹೋರಾಟವಾಗಿ ಪರಿಣಮಿಸಿತು. ಹೀಗೆ ಅದು ಫ್ಯಾಶಿಸಂ ವಿರುದ್ಧ ರಾಜಕೀಯ ಅಭಿಯಾನ ಆಗಿ ಬದಲಾಯಿತು. ಭಾರತದ ಹಲವು ಕಡೆಗಳಿಂದ ಹೋರಾಟಗಾರರು ಬೆಂಬಲ ಸೂಚಿಸಿ ಕ್ಷೇತ್ರಕ್ಕೆ ಬಂದರು. ದಿಲ್ಲಿ ಮುಂಬೈಯ ಮಾಧ್ಯಮ ಪ್ರಚಾರಕರು ಪ್ರಚಾರದ ಹೊಣೆಯನ್ನು ವಹಿಸಿಕೊಂಡರು.
ಜನರ ಭಾಗಿತ್ವ:
ಜಿಗ್ನೇಶ್‍ರ ಪ್ರಚಾರವು ಜನರ ಸಹಭಾಗಿತ್ವದಲ್ಲಿ ಇತಿಹಾಸದಲ್ಲಿಯೇ ಅಪೂರ್ವವಾದುದು. ಜನರ ಭಾಗಿ ದಾರಿಕೆ, ಧನಸಂಗ್ರಹ, ಜನಪರವಾದ ವ್ಯತ್ಯಸ್ತ ಸಿದ್ಧತೆಗಳು ವಿಜಯದ ಅಡಿ ಗಲ್ಲು ಆಗಿದೆ. ಜನತಾ ಕೀ ಲಡಾಯಿ ಜನತಾಕಿ ಪೈಸಾಸೆ (ಜನರ ಹೋರಾಟ ಜನರ ಹಣದಿಂದ) ಎನ್ನುವ ಘೋಷಣೆ ಕ್ಷೇತ್ರದಲ್ಲಿ ಸಂಪೂರ್ಣ ನಿಜವಾಯಿತು. ಬೇರೆಬೇರೆ ಸ್ಥಾನದಲ್ಲಿರುವವರು ನೆರವಿನ ಭರವಸೆ ನೀಡಿದರು. ಕಾನ್‍ಪುರದ ಪುಟ್ಟ ವಿದ್ಯಾರ್ಥಿ ಕೊಟ್ಟ ಇಪ್ಪತ್ತು ರೂಪಾಯಿ, ಬರಹಗಾರ್ತಿ ಆರುಂಧತಿ ರಾಯ್ ನೀಡಿದ ಮೂರು ಲಕ್ಷ ರೂಪಾಯಿವರೆಗೆ ಅವರಿಗೆ ಪ್ರಚಾರಕ್ಕೆ ಹಣ ಸಿಕ್ಕಿತು. ಒಂದು ವಾರದಲ್ಲಿ 18 ಲಕ್ಷ ರೂ. ಹಣ ಸಂಗ್ರಹಿಸಲು ಸಾಧ್ಯ ವಾಯಿತು. ಇಂತಹ ವ್ಯಕ್ತಿ ಪ್ರಭಾವ ಜಿಗ್ನೇಶ್‍ರನ್ನು ಬೇರೆಯದೇ ವ್ಯಕ್ತಿಯಾಗಿ ಗುರುತಿಸಿತು. ಕಪ್ಪು ಹಣವನ್ನು ಬಿಳಿಮಾಡುವ ಪ್ರಚಾರ ಯುಗದಲ್ಲಿ ಇದು ದೊಡ್ಡ ಮೊತ್ತ ಅಲ್ಲ ಎಂದು ವಾದಿಸಬಹುದು. ಹಣಕೊಟ್ಟು ವೋಟು ಖರೀದಿಸುವ ತಂತ್ರವನ್ನು ಅವರು ಅನುಸರಿಸಲಿಲ್ಲ. ಅದರೆ, ಪ್ರತಿಯೊಂದು ಮನೆಗೂ ಅವರು ಓಡಾಡಿದರು. ಜನರ ದೂರುಗಳಿಗೆ ಕಿವಿಯಾದರು. ಗ್ರಾಮ ಗ್ರಾಮಗಳಿಗೆ ಸಂಚರಿಸಿದರು. ರೋಡ್ ಶೋ, ಸಮುದಾಯದ ಮುಖ್ಯಸ್ಥರಿಂದ ಮತ ಕೇಳುವ ವ್ಯವಸ್ಥೆ ಯನ್ನು ಅವರು ಬುಡಮೇಲು ಮಾಡಿ ದರು. ಮುಂಬೈ, ದಿಲ್ಲಿ, ಬೆಂಗಳೂರು, ಪಂಜಾಬ್, ಕೇರಳ, ಮುಂತಾದ ದಿಕ್ಕು ಗಳಿಂದ ದ ಆಕ್ಟವಿಸ್ಟ್‍ಗಳು ಪ್ರಚಾರಕ್ಕೆ ರಂಗು ಮೂಡಿಸಿದರು. ಮುಂಬೈ ದಿಲ್ಲಿ, ಬೆಂಗಳೂರು, ಪಂಜಾಬ್, ಕೇರಳ ಮುಂತಾದ ದಿಕ್ಕುಗಳಿಂದ ಹೋರಾಟಗಾರರು ಪ್ರಚಾರ ದಲ್ಲಿ ಮುಂದೆ ನಿಂತರು. ನಕುಲ್ ಸಿಂಗ್ ಸಾಹ್ನಿ ನೇತೃತ್ವದಲ್ಲಿ ಚಲನಚಿತ್ರ ಪ್ರತಿಭೆಗಳು ಜಿಗ್ನೇಶ್ ಪರ ಪ್ರಚಾರ ಮಾಡಿದರು.
ಪ್ರಚಾರದುದ್ದುಕ್ಕೂ ಸೃಜನಾತ್ಮಕ ದೃಶ್ಯಗಳು. ಜಿಗ್ನೇಶ್‍ರ ಚಿತ್ರಗಳನ್ನು ಮತದಾರರು ಸ್ವಯಂ ಮೊಬೈಲ್‍ಗಳಲ್ಲಿ ಕ್ಲಿಕ್ಕಿಸಿಕೊಂಡರು. ಸ್ಟಿಕ್ಕರ್‍ಗಳು ಮನೆ ಗೋಡೆ, ಅಂಗಡಿಗಳಲ್ಲಿ ಅಂಟಿದವು. ಮುಗಳ್ನಕ್ಕ ಮುಖದ ಜಿಗ್ನೇಶ್‍ರ ಮಾತುಗಳು ಅಗ್ನಿ ಹರಡಿದಂತಿತ್ತು. ಅವು ಜನರ ಹೃದಯಗಳಿಗೆ ಮುಟ್ಟಿತು. ತಟ್ಟಿತು. ಜನರ ಒಗ್ಗಟ್ಟು ಬಹಳ ಪ್ರಧಾನ ಎಂದು ಅವರು ನೆನಪಿಸಿದರು. ಬಿಜೆಪಿ ಜನರನ್ನು ಒಡೆಯುತ್ತಿದೆ. ದಮನಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಜಾಗ ಇಲ್ಲ. ಸಂವಿಧಾನದ ಮೌಲ್ಯ ಗಳನ್ನು ಅಪಮೌಲ್ಯ ಗೊಳಿಸುತ್ತಿದೆ. ಈ ದುಃಸ್ಥಿತಿಗೆ ಕೊನೆ ಆಗುವುದು ಬೇಡವೇ? ಇದು ಅವರು ಜನರ
ಮುಂದೆ ಎತ್ತಿದ ಪ್ರಶ್ನೆಯಾಗಿತ್ತು.
ವಾಡ್ನಗರದ ವಿರುದ್ಧ (ಮೋದಿಯ ಕ್ಷೇತ್ರ) ವಾಡ್‍ಗಾಂವ್ ಹೋರಾಡುತ್ತಿದೆ ಎಂಬುದು ಜಿಗ್ನೇಶ್ ಮಾತು. ಅವರ ರ್ಯಾಲಿಗೆ ಸೇರಲು ಬರುವವರ ಸಂಖ್ಯೆ ದಿನಂದಿನಕ್ಕೆ ಹೆಚ್ಚಿತು. ಜಿಗ್ನೇಶ್ ವಿರುದ್ಧ ಬಿಜೆಪಿ ಕಟು ವಿರೋಧ ಎತ್ತಿಹಿಡಿಯಿತು. ಜಿಗ್ನೇಶ್ ಎದುರಿಸಲು ಅಮಿತ್ ಶಾ, ವಿಜಯ್ ರೂಪಾನಿ, ಯೋಗಿ ಆದಿತ್ಯನಾಥ್ ಮತ್ತು ನರೇಂದ್ರ ಮೋದಿಯ ವರೆಗೆ ಬಂದರು. ಡಿಸೆಂಬ ರ್‍ನಲ್ಲಿ ಅವರ ವಾಹನ ಜಾಥಾದ ವಿರುದ್ಧ ದಾಳಿ ನಡೆಯಿತು. ಒಂದು ಸಲ ಅಲ್ಲ. ನಾಲ್ಕು ಸಲ. ಜಿಗ್ನೇಶ್‍ಗೆ ಜಿಹಾದಿ ಗಳು, ಭಯೋ ತ್ಪಾದಕರೊಂದಿಗೆ ನಿಕಟ ಸಂಬಂಧ ಇದೆ ಎನ್ನುತ್ತಾ ಅಮಿತ್ ಶಾ ರಂಗಪ್ರವೇಶಿಸಿದರು.
ಗುಜರಾತ್ ಸಂದರ್ಶನದ ಬಳಿಕ ಪಾಲನ್ ಪುರಿಗೆ ರೈಲಿನಲ್ಲಿ ಹೋಗುವ ಬದಲು ನಾನು ಕಾರಿನಲ್ಲಿ ಹೊರಟೆ. ಇರ್ಫಾನ್ ಭಾಯಿ ಚಾಲಕ. ಹಲವಾರು ಚುನಾವಣೆಗಳಿಗೆ ಸಾಕ್ಷಿಯಾದ ವ್ಯಕ್ತಿ. ಆತ ಹೇಳಿದರು- ಇಂತಹ ಒಂದು ಚುನಾವಣೆ ನಾನು ಕಂಡೇ ಇಲ್ಲ. ಹೌದು ಬಿಜೆಪಿ ಗೆದ್ದಿರಬಹುದು. ಆದರೆ, ಜಿಗ್ನೇಶ್‍ರ ವಿಜಯ ನಿರೀಕ್ಷೆಯ ಬೆಳಕಾಗಿ ಎದ್ದಿದೆ. ಭಾರೀ ಸಾಧ್ಯತೆಗಳ ನಿರೀಕ್ಷೆ. ಒಂದು ವೇಳೆ ಅದು ಬಿಜೆಪಿಯ ಹೊಳಪು ಕಳಕೊಳ್ಳಲು ಕಾರಣವಾಗಿರಬಹುದು.