ಜೇಟ್ಲಿ ನೋಡದ ಪುಟಗಳು…

  0
  555

  ಗುಜರಾತ್ ಚುನಾವಣೆ ನಿಕಟವಾಗುತ್ತಿರು ವಂತೆ ಕೇಂದ್ರ ಸರಕಾರಕ್ಕೆ ವಿಶ್ವಬ್ಯಾಂಕ್‍ನ ಒಂದು ವರದಿ ಚೇತೋಹಾರಿಯಾಗಿದೆ. ವ್ಯಾಪಾರದಲ್ಲಿ ಭಾರತ ಬಹುದೊಡ್ಡ ಮುನ್ನಡೆ ಗಳಿಸಿದೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸು ತ್ತಿದೆ. ಉದ್ಯಮ ಪ್ರಾರಂಭಿಸಲು ಮತ್ತು ಮುಂದು ವರಿಸಲು ಮತ್ತು ಅಗತ್ಯ ಬಿದ್ದರೆ ಕೊನೆಗೊಳಿಸಲು ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳಲ್ಲಿ ಎದುರಾಗುವ ಬಳಲಿಕೆ ಕಡಿಮೆಯಾಗಿದೆ. 190 ದೇಶಗಳಲ್ಲಿ ಭಾರತ 2014ರಲ್ಲಿ 142ನೆ ಸ್ಥಾನ ದಲ್ಲಿದ್ದುದು, ಈಗ ನೂರನೆ ಸ್ಥಾನಕ್ಕೆ ತಲುಪಿದೆ ಎಂದು ವರದಿ ತಿಳಿಸುತ್ತಿದೆ. ನಿಯಮಗಳಲ್ಲಿ ನಡೆಸಲಾದ ಕೆಲವು ಸುಧಾರಣೆಗಳಿಂದ ಭಾರತ
  ಉದ್ಯಮ ಸ್ನೇಹಿಯಾಗಿದೆ.
  ಭಾರತ ದೇಶ ಈಗ ಆರ್ಥಿಕವಾಗಿ ಹಿನ್ನಡೆ ಅನುಭವಿಸುತ್ತಿದೆ. ಹೀಗಿದ್ದರೂ ವಿಶ್ವಬ್ಯಾಂಕ್‍ನ ವರದಿಯ ಕುರಿತು ತಿಳಿಸಲು ಕೇಂದ್ರ ವಿತ್ತ ಸಚಿವ ಅರುಣ್ ಜೈಟ್ಲಿ ವಿಶೇಷ ಪತ್ರಿಕಾಗೋಷ್ಠಿ ಕರೆದಿದ್ದರು. ಸುಮ್ಮನೆ ಅಲ್ಲ ಇದರ ಪ್ರಚಾರ ಸಾಧ್ಯತೆಯನ್ನು ಲೆಕ್ಕ ಮಾಡಿ ಅವರು ಪತ್ರಿಕಾಗೋಷ್ಠಿ ಕರೆದಿದ್ದರು ಎನ್ನಬಹುದು. ಆದರೆ, ಈ ವರದಿಯಲ್ಲಿ ಕೆಲವು ಬೇರೆ ಮಗ್ಗುಲುಗಳು ಕೂಡಾ ಇವೆ. ಅದನ್ನು ಜೇಟ್ಲಿ ನೋಡಿಲ್ಲ ಅಥವಾ ನೋಡಲು ಅವರು ಬಯಸಿಲ್ಲ ಎಂದು ಅನಿಸುತ್ತದೆ. ವರದಿಗೆ ಆಧಾರವಾದ ಲೆಕ್ಕಗಳನ್ನು ದೇಶದ ಎಲ್ಲ ಕಡೆಗಳಿಂದ ಸಂಗ್ರಹಿಸಿಲ್ಲ ಎನ್ನುವುದು ಕಡೆಗಣಿಸುವಂತಹ ವಿಷಯವಲ್ಲ. ವಿಶ್ವಬ್ಯಾಂಕ್ ವರದಿಗೆ ಕೇವಲ ದಿಲ್ಲಿ, ಮುಂಬೈ ಮಹಾನಗರಗಳÀ ಉದ್ದಿಮೆ ಸ್ಥಿತಿ ಗತಿ ಆಧಾರ. ಅಂದರೆ ಈ ಎರಡು ಮಹಾ ನಗರಗಳ ಲೆಕ್ಕ ಇಡೀ ಭಾರತದ ಲೆಕ್ಕ ಹೇಗಾಗು ವುದು ಎಂದು ವಿಶ್ವಬ್ಯಾಂಕಷ್ಟೇ ವಿವರಿಸಬೇಕು. ವಿಶ್ವಬ್ಯಾಂಕ್ ಲೆಕ್ಕದಲ್ಲಿ ಅವರೆಡು ಮಹಾನಗರಗಳಲ್ಲಿ ವ್ಯಾಪಾರೋದ್ಯಮ ಸುಲಭ ಎಂದಷ್ಟೇ ಈ ವಿಶ್ವÀಬ್ಯಾಂಕ್ ವರದಿಯ ಅರ್ಥವಾಗಿದೆ. ದೇಶದ ಇತರ ಕಡೆಗಳಿಗೆ ಹೋಲಿಸಿ ನೋಡುವಾಗ ಈ ಲೆಕ್ಕ ಸರಿಯಾದ ಲೆಕ್ಕವಾಗದು..
  ಡಿಜಿಟಲೈಸೇಶನ್ ಬಂದ ಮೇಲೆಗೆ ತೆರಿಗೆ ಭರ್ತಿ ಮಾಡಲು ಸುಲಭವಾಯಿತು ಎನ್ನುವು ದೇನೋ ನಿಜ. ಅದರೆ ಅದೊಂದು ಪ್ರಗತಿಯಲ್ಲ. ಇಲ್ಲಿ ವಿದ್ಯುತ್ ಲಭ್ಯತೆ ನಿರಾತಂಕವಾಗಿಲ್ಲ. ದಿಲ್ಲಿ, ಮುಂಬೈಗಳಲ್ಲಿ ವಿದ್ಯುತ್ ಸಂಪರ್ಕ ಪಡೆಯುವುದು ಕಷ್ಟವಿಲ್ಲ. ಆದರೆ ದೇಶದ ಬೇರೆ ಕಡೆಯ ಪರಿಸ್ಥಿತಿ ಹೀಗಿಲ್ಲ ಎಂದು ದೇಶದ ಪ್ರಮುಖ ಉದ್ಯಮಿ ಸುನೀಲ್ ಭಾರತಿ ಮಿತ್ತಲ್ ಇತ್ತೀಚೆಗೆ ಹೇಳಿದ್ದರು. ಅಂದರೆ ಸರಕಾರ ಈ ವಿಷಯದಲ್ಲಿ ಪ್ರಾಮಾಣಿಕವಾಗಿ ದ್ದರೂ ಭಾರತದಲ್ಲಿ ಉದ್ಯಮ ಸ್ನೇಹಿ ಸ್ಥಿತಿ ಈಗಲೂ ಸಂದೇಹದ ಮೊನೆಯಲ್ಲಿದೆ ಎನ್ನುವು ದನ್ನು ಒಪ್ಪಬೇಕಾಗುತ್ತದೆ..
  ವಿಶ್ವಬ್ಯಾಂಕ್ ವರದಿಯ ಲೆಕ್ಕ ಈ ತಿಂಗಳು ಜೂನ್ 30ರ ವರೆಗೆ ಇದೆ. ಸರಕು ಸೇವಾ ತೆರಿಗೆ(ಜಿಎಸ್ಟಿ) ಸೃಷ್ಟಿಸಿದ ಸಂಕೀರ್ಣತೆಗಳು ಈ ವರದಿಯಲ್ಲಿ ಪರಿಗಣನೆಗೊಳಗಾಗಿಲ್ಲ. ಉದ್ಯಮ ಗಳಲ್ಲಿ ಜಿಎಸ್‍ಟಿ (ತಾತ್ಕಾಲಿಕವೇ ಆದರೂ) ಹುಟ್ಟು ಹಾಕಿದ ಮುಗ್ಗಟ್ಟುಗಳು ಸಣ್ಣವೇನಲ್ಲ. ಇವೆಲ್ಲ ವಿಶ್ವಬ್ಯಾಂಕ್ ರ್ಯಾಂಕಿಂಗನ್ನೂ ದುರಸ್ತಿಪಡಿಸ ಬಹುದು. ಇನ್ನು, ಸಂಘಟಿತ ವ್ಯವಸ್ಥಿತ ವ್ಯಾಪಾರ ಕ್ಷೇತ್ರದ ವ್ಯಾಪ್ತಿಗೆ ಸೇರಿಲ್ಲದ ಅಸಂಘಟಿತ ವ್ಯಾಪಾರ ಕ್ಷೇತ್ರವೂ ಇದೆ. ಅರ್ಥ ವ್ಯವಸ್ಥೆಯಲ್ಲಿ ಅನೌಪಚಾರಿಕ ಭಾಗವಾದ ಈ ಕ್ಷೇತ ನೋಟು ಅಮಾನ್ಯ ಮತ್ತು ಜಿಎಸ್‍ಟಿಯ ನಂತರ ಹೆಚ್ಚು ಕಡಿಮೆ ಸಂಪೂರ್ಣ ನಾಶದ ಅಂಚಿನಲ್ಲಿದೆ. ತನ್ನ ಲೆಕ್ಕದಲ್ಲಿ ವಿಶ್ವ ಬ್ಯಾಂಕ್ ಇದನ್ನು ಪರಿಗಣಿಸಿಲ್ಲ.
  ವಿಶ್ವಬ್ಯಾಂಕ್‍ನ ಈಸ್ ಆಫ್ ಬಿಸಿನೆಸ್ ಮಾನದಂಡಗಳಿಗೆ ಸೇರದ ಈ ಎಲ್ಲ ಕ್ಷೇತ್ರಗಳು ಅಸ್ತಿತ್ವದಲ್ಲಿವೆ ಎನ್ನುವುದನ್ನು ಯಾರಿಗೂ ನಿರಾಕರಿಸಲು ಸಾಧ್ಯ ವಿಲ್ಲ. ನಾಲ್ಕನೆಯದಾಗಿ ವಿಶ್ವಬ್ಯಾಂಕಿನ ಮಾನಂದಡಗಳಿಗೆ ನೇರಾನೇರ ಒಳಗೊಳ್ಳದ ಇನ್ನೊಂದು ಕ್ಷೇತ್ರ ಕಾರ್ಮಿಕ ಕ್ಷೇತ್ರವಾಗಿದೆ. ಇದು ನಿಜವಾಗಿಯೂ ಉದ್ಯಮಗಳ ಆರೋಗ್ಯವನ್ನು ನಿರ್ಣಯಿಸುತ್ತದೆ. ಲಕ್ಷಾಂತರ ಮಂದಿ ಹೊಸದಾಗಿ ನಿರುದ್ಯೋಗಿ ಗಳಾಗಿದ್ದಾರೆ. ಇವೆಲ್ಲ ಸಲೀಸು ವ್ಯಾಪಾರ ಉದ್ಯಮವನ್ನು ಬಾಧಿಸುವಂತಹ ವಿಷಯವಾಗಿದೆ. ಇನ್ನು ಉದ್ಯಮವನ್ನು ಬಾಧಿಸುವುದಿಲ್ಲ ಎಂದು ವಾದಿಸಿದರೂ ಅದು ಖಂಡಿತ ದೇಶದ ಆರ್ಥಿಕ ರಂಗವನ್ನು ಚೆನ್ನಾಗಿ ಬಾಧಿಸುವುದಂತೂ ಸ್ಪಷ್ಟ. ಹೀಗಿರುವಾಗ ಇದನ್ನು ಆರ್ಥಿಕ ಅಭಿವೃದ್ಧಿಯ ಮಾನದಂಡದಂತೆ ಸರ ಕಾರ ಪ್ರಚಾರಪಡಿಸುವುದು ಸರಿಯಲ್ಲ. ಇಂದು ಭಾರತದಲ್ಲಿ ಸಕಲ ವ್ಯಾಪಾರ ಉದ್ದಿಮೆಗಳಲ್ಲಿ ಉದ್ಯೋಗವಕಾಶಗಳು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿವೆ ಎನ್ನುವ ಲೆಕ್ಕಗಳೂ ಇವೆ. ಇತ್ತೀಚೆಗೆ ಇನ್ನೊಂದು ಲೆಕ್ಕವನ್ನು ಅಂತಾರಾಷ್ಟ್ರೀಯ ಆಹಾರ ನೀತಿ-ಸಂಶೋಧನಾ ಇನ್ಸ್‍ಟಿಟ್ಯೂಟ್ ಬಹಿರಂಗಪಡಿಸಿತ್ತು. ಜಾಗತಿಕವಾಗಿ ಭಾರತ ಹಸಿದವರಿರುವ 117 ದೇಶಗಳಲ್ಲಿ 100ನೇ ಸ್ಥಾನದಲ್ಲಿದೆ. ಪೋಷಾಕಾಹಾರ ಕೊರತೆ, ಶುದ್ಧ ನೀರು, ಶುಚಿತ್ವ- ವಸತಿ ಮುಂತಾದ ಮಾನದಂಡಗಳನ್ನು ಪರಿಶೀಲಿಸಿದರೆ ನಾವು ಹೆಮ್ಮೆ ಪಡುವಂತಿಲ್ಲ. ಅಂತಾರಾಷ್ಟ್ರೀಯ ಉದ್ಯೋಗ ಸಂಘಟನೆ(ಐಎಲ್‍ಒ) ಜೀತ ಕೆಲಸದ ವರದಿಯಲ್ಲಿ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. 1 ಕೊಟಿ 80 ಲಕ್ಷ ಮಂದಿ (ಜಸಂಖ್ಯೆಯ ಶೇ. 1.4ರಷ್ಟು) ದೇಶದಲ್ಲಿ ಜೀತಕ್ಕೊಳಗಾಗಿದ್ದಾರೆ. ಬಡವರು ಇನ್ನಷ್ಟು ಬಡವರಾಗುವ ಕುರಿತ ಲೆಕ್ಕಗಳನ್ನು ಪ್ಯಾರಿಸ್ ಸ್ಕೂಲ್ ಆಫ್ ಇಕಾನಮಿಕ್ಸ್‍ನ ತಜ್ಞರು ತಿಳಿಸುತ್ತಾರೆ. ಇವರ ಪ್ರಕಾರ ಆರ್ಥಿಕ ಅಸಮಾನತೆ ಭಾರತದಲ್ಲಿ ಅತಿ ರೂಕ್ಷವಾಗಿದೆ. ಕೇವಲ ಎರಡು ಮಹಾನಗರಗಳಲ್ಲಿರುವ ಉದ್ಯಮ ಸ್ನೇಹಿತ್ವವನ್ನು ಇಡೀ ದೇಶದ ಆರ್ಥಿಕಾರೋಗ್ಯಕ್ಕೆ ಹೋಲಿಸುವುದು ಸರಿಯಲ್ಲ.