ಜೈಶ್ರೀರಾಮ್ ಹೇಳುವಂತೆ ಬಂದಿತ ಸಿಮಿ ಕಾರ್ಯಕರ್ತರ ಮೇಲೆ ಜೈಲಧಿಕಾರಿಗಳ ಬಲವಂತ

0
1387

ಇಂದೋರ್: 2016 ರಲ್ಲಿ ಭೋಪಾಲ್ ಸೆಂಟ್ರಲ್‌ ಜೈಲಿನಿಂದ ಸಿಮಿ ಕಾರ್ಯಕರ್ತರು ಪರಾರಿಯಾಗಿದ್ದರಲ್ಲದೇ ಅವರನ್ನು ಎನ್ ಕೌಂಟರ್ ನಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು‌. ಆದರೆ ಜೈಲಿನಲ್ಲಿರುವ 21 ಸಿಮಿ ಕಾರ್ಯಕರ್ತರ ಮೇಲೆ ಜೈಲಾಧಿಕಾರಿಗಳು ನಿರಂತರ ಚಿತ್ರಹಿಂಸೆ ನೀಡುತ್ತಿರುವುದನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ತನ್ನ ವರದಿಗಳಲ್ಲಿ ಬಿಚ್ಚಿಟ್ಟಿದೆ.

2016 ರ ಅಕ್ಟೋಬರ್ 31 ರಂದು ನಡೆದ ಎನ್ ಕೌಂಟರ್ ನ ನಂತರ ಸಿಮಿ ಕಾರ್ಯಕರ್ತರಲ್ಲಿ ಪ್ರತಿಯೊಬ್ಬರನ್ನೂ ಪ್ರತ್ಯೇಕ ಸೆಲ್ಗಳಲ್ಲಿ ಇರಿಸಲಾಗಿದ್ದು ಅವರಿಗೆ ” ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುವಂತೆಯೂ ಕುರ್ ಆನನ್ನು ಎಸೆಯುವಂತೆಯೂ ಬಲವಂತಪಡಿಸಲಾಗಿದೆ. ಮೂಲಭೂತ ಅವಶ್ಯಕತೆಗಳಾದ ಆಹಾರ ಹಾಗೂ ನಿದ್ದೆಯನ್ನೂ ಮಾಡಲು ಬಿಡದೇ ನಿರಂತರ ಚಿತ್ರಹಿಂಸೆ ನೀಡಲಾಗುತ್ತಿದೆ. 21 ಸಿಮಿ ಕಾರ್ಯಕರ್ತರ ಪೈಕಿ ಒಬ್ಬಾತ ಆರೋಪಿಯಾಗಿದ್ದು ಮಿಕ್ಕಳಿದವರು ವಿಚಾರಣಾಧೀನ ಕೈದಿಗಳಾಗಿದ್ದಾರೆ. ಪೋಲಿಸರು ಅವರ ಕುಟುಂಬಗಳ ತಪಾಸಣೆಯ ನೆಪದಲ್ಲಿ ಭೇಟಿ ನೀಡಿದಾಗಲೆಲ್ಲ ಅವರ ಮೇಲೆಯೂ ಕಿರುಕುಳ ನೀಡುತ್ತಿರುವುದು ಬೆಳಕಿಗೆ ಬಂದಿದೆ.

ಇವರ ಪ್ರಕರಣವನ್ನು ರಾಷ್ಟೀಯ ಮಾನವ ಹಕ್ಕುಗಳ ಆಯೋಗವು ವಹಿಸಿಕೊಂಡ ಬಳಿಕ 2017 ಜೂನ್ ತಿಂಗಳಿನಲ್ಲಿ ಭೋಪಾಲ್ ಸೆಂಟ್ರಲ್ ಜೈಲಿನಲ್ಲಿ ಸಿಮಿ ಕಾರ್ಯಕರ್ತರ ಕುರಿತು ಮಾಹಿತಿ ಕಲೆ ಹಾಕಲು ನಿಯೋಗವನ್ನು ಕಳುಹಿಸಿತ್ತು. ತದನಂತರ 2017 ರ ಡಿಸೆಂಬರ್ ತಿಂಗಳಿನಲ್ಲಿ ಎರಡನೆಯ ನಿಯೋಗವನ್ನು ಕಳುಹಿಸಿತ್ತಲ್ಲದೇ ಈ ಎರಡೂ ನಿಯೋಗಗಳ ವರದಿಗಳ ಪ್ರಕಾರ ಸಿಮಿ ಕಾರ್ಯಕರ್ತರಿಗೆ ಸಿಮಿತ ಅವಧಿಗಳ ನಂತರ ಪುನಃ ಮಾನಸಿಕ ಕಿರುಕುಳ ಹಾಗೂ ದೈಹಿಕ ಚಿತ್ರಹಿಂಸೆ ನೀಡಲಾಗುತ್ತಿರುವುದನ್ನು ಆಯೋಗವು ವರದಿಯಲ್ಲಿ ಬಹಿರಂಗ ಪಡಿಸಿದೆ‌.

ಪ್ರತ್ಯೇಕ ಸೆಲ್ ಗಳಲ್ಲಿ ಇಡಲಾದ ಕೈದಿಗಳಿಗೆ ಫ್ಯಾನ್ ವ್ಯವಸ್ಥೆ ಇಲ್ಲದಿರುವುದು ಹಾಗೂ ಮಧ್ಯರಾತ್ರಿ ಆರೋಗ್ಯ ವಿಚಾರಿಸುವ ನೆಪದಲ್ಲಿ ಅವರನ್ನು ಸರಿಯಾಗಿ ಮಲಗಲು ಬಿಡದೇ ಇರುವುದು , ಕೆಲವೇ ಕೆಲವು ನಿಮುಷಗಳಿಗೆ ಹೊರಗಿನ ವಾತಾವರಣಕ್ಕೆ ತೆರಳಲು ಮತ್ತು ಅಲ್ಲಿಂದ ಕೂಡಲೇ ಸೆಲ್ ಗಳಿಗೆ ರವಾನಿಸುವುದು ಅವರಲ್ಲಿ ಖಿನ್ನತೆ ಹಾಗೂ ಒತ್ತಡ ಹಾಗೂ ಆತಂಕದೊಂದಿಗೆ ಉದ್ರೇಕಗೊಳ್ಳುವಂತೆ ಮಾಡುತ್ತಿರುವುದನ್ನು ಆಯೋಗಕ್ಕೆ ಸಿಮಿ ಕಾರ್ಯಕರ್ತರು ತಿಳಿಸಿದ್ದಾರೆ. ಸರಿಯಾದ ಚಿಕಿತ್ಸೆ ನೀಡದಿರುವ ಕುರಿತು ಮತ್ತು ಧಾರ್ಮಿಕವಾಗಿ ನಿಂದಿಸುವ ಇತರೆ ಘೋಷಣೆಗಳನ್ನು ಕೂಗಲು ಚಿತ್ರಹಿಂಸೆ ನೀಡುವ ನಡವಳಿಕೆಯ ಕುರಿತು ಆಯೋಗವು ಡಿಜಿ(ಜೈಲು) ಸಂಜಯ್ ಚೌದರಿಯವರ ಬಳಿ ಪ್ರಶ್ನಿಸಿತ್ತಾದರೂ ಜೈಲಾಧಿಕಾರಿಗಳು ಈ ಎಲ್ಲ ಆರೋಪಗಳನ್ನು ತಿರಸ್ಕರಿಸಿರುವುದಾಗಿ ಅವರು ತಿಳಿಸಿದ್ದಾರೆ. ಜೈಲಿನ ವೈದ್ಯಾಧಿಕಾರಿಯಾದ ಪ್ರೇಮೇಂದ್ರರವರ ಬಳಿ ಸಿಮಿ ಕೈದಿಗಳ ಮೈ ಮೇಲಿರುವ ಗಾಯದ ಕಾರಣಗಳ ಕುರಿತು ಸರಿಯಾದ ಉತ್ತರವಿಲ್ಲ.
ಜೈಲಿನ ಭದ್ರತಾ ದೃಷ್ಟಿಯಿಂದ ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಪೂರೈಸಲಾಗದು ಎಂದು ಜೈಲಾಧಿಕಾರಿಗಳು ಹೇಳುತ್ತಾರೆ.