ಝಾರ್ಖಂಡ್:  ಗೋಮಾಂಸದ ಹೆಸರಲ್ಲಿ ಮುಸ್ಲಿಂ ವಿವಾಹ ಸಮಾರಂಭಕ್ಕೆ ದಾಳಿಮಾಡಿ ಹಲ್ಲೆಗೈದ ಪ್ರಕರಣ; ನಿಜ ಏನು?

0
717

ತನಿಖಾ ಬರಹ
ಮೂಲ: ಟು ಸರ್ಕಲ್ ಡಾಟ್ ಕಾಮ್ 
ಕನ್ನಡಕ್ಕೆ: ಆಯಿಷತುಲ್ ಅಫೀಫಾ ಕತಾರ್ 

ಸೋಮವಾರ, ಏಪ್ರಿಲ್ 16, ಜಾರ್ಖಂಡ್ ನ  ಕೊಡೆರ್ಮ ಜಿಲ್ಲೆಯ ಡೊಮ್ಚಾಂಚ್ ಪೋಲಿಸ್ ಠಾಣಾ ವ್ಯಾಪ್ತಿಯಡಿಯಲ್ಲಿ ಬರುವ ನವದಿ ಹಳ್ಳಿಯಲ್ಲಿ ಸಂತೋಷದಾಯಕ ಘಟನೆಯಾಗಬೆಕಾದ ವಿವಾಹವು ದು:ಖದಲ್ಲಿ ಅಂತ್ಯಗೊಂಡಿದೆ  . ಕೇವಲ 60 ಕುಟುಂಬಗಳ ಅತಿಥಿಗಳಿಗೆ, ಗ್ರಾಮವು ವಿವಾಹ  ಭೋಜನವನ್ನು ಏರ್ಪಡಿಸಿತ್ತು. ಅದಕ್ಕಾಗಿ, ಒಟ್ಟು 50 ಕೆಜಿ ಕೋಳಿ ಮತ್ತು 15 ಕೆ.ಜಿ. ಮೀನನ್ನು (ವಿಶೇಷ ಅತಿಥಿಗಳಿಗೆ ಮೀಸಲಾಗಿರುವ) ಸಿದ್ಧಪಡಿಸಲಾಗಿತ್ತು ಮತ್ತು ಮಧ್ಯರಾತ್ರಿಯ ಹೊತ್ತಿಗೆ ಬಹುತೇಕ ಎಲ್ಲವನ್ನೂ ಸೇವಿಸಲಾಗಿತ್ತು. ಸೋಮವಾರದವರೆಗೆ, ಇದು ಕೇವಲ  ಸ್ನೇಹಿತರು ಮತ್ತು ಸಂಬಂಧಿಕರಿಗೆ ಎರಡು ಮುಸ್ಲಿಂ ಕುಟುಂಬಗಳು ಆಯೋಜಿಸಿದ ಸಾಮಾನ್ಯ ವಿವಾಹವಾಗಿತ್ತು.
ಮುಂದಿನ ದಿನಗಳಲ್ಲಿ ಈ ವಿವಾಹವು  ಭಯಭೀತಗೊಳಿಸುವ ವದಂತಿಯಾಗಿ ಹಬ್ಬಿತು. ಮಂಗಳವಾರ ಬೆಳಗ್ಗೆ, ವಿವಾಹ ಭೋಜನದಲ್ಲಿ ಗೋಮಾಂಸ ಸೇವಿಸಲಾಗಿದೆಯೆಂದು ಆರೋಪಿಸಿ ವಾಟ್ಸಾಪ್  ಸಂದೇಶಗಳು ರವಾನೆಯಾಗಲು  ಪ್ರಾರಂಭಿಸಿದವು. ವರನ ಮನೆಯ ಹಿಂದೆ ಕಂಡುಬಂದ ಮೂಳೆಗಳು ಈ ಸಂದೇಶಗಳಿಗೆ ಉತ್ತೇಜನ ನೀಡಿದವು. ಸ್ಥಳೀಯ ಮುಸ್ಲಿಮರ ಪ್ರಕಾರ, ಮಧ್ಯಾಹ್ನ ಹೊತ್ತಿಗೆ ಸುಮಾರು 100 ಜನರ ಗುಂಪೊಂದು ವರನ ಮನೆಯನ್ನು ಲೂಟಿ ಮಾಡಿ, ಕಾರುಗಳು, ದ್ವಿಚಕ್ರ ವಾಹನಗಳು ಮತ್ತು ಆಟೋರಿಕ್ಷಾಗಳನ್ನು ದ್ವಂಸಗೈದು ಹಲವಾರು ಮಂದಿಯನ್ನು ಥಳಿಸಿದರು. ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ವಿಧ್ವಂಸಕತೆಯನ್ನು ಸಮರ್ಥಿಸುವಂತೆ, ನಿಜವಾಗಿಯೂ  ಗೋಮಾಂಸ ಬಡಿಸಲಾಗಿಯೆದೆಯೇ ಎಂದು ಪೊಲೀಸರು ತನಿಖೆ ನಡೆಸಿರುವುದು ಇನ್ನಷ್ಟು ಆಘಾತಕಾರಿಯಾಗಿದೆ.


ಎರಡು ದಿನಗಳ ನಂತರ ಏಳು ಜನರನ್ನು ವಿಧ್ವಂಸಕ ಕೃತ್ಯಕ್ಕಾಗಿ  ಮತ್ತು ಇಬ್ಬರು ಮುಸ್ಲಿಮರನ್ನು ಮದುವೆಯಲ್ಲಿ ಗೋಮಾಂಸ ನೀಡಲಾಗಿದೆ ಎಂಬ ವದಂತಿಯನ್ನು ಹರಡಿದ್ದಕ್ಕಾಗಿ ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ ಆತಿಫ್ ಅನ್ಸಾರಿ (ಕೋರಿಕೆಯ ಮೇರೆಗೆ ಹೆಸರು ಬದಲಾಯಿಸಲಾಗಿದೆ) ಮತ್ತು ಅವರ ಕುಟುಂಬ ಮತ್ತು ಅವರ ನವದಿ ಗ್ರಾಮದ ನಿವಾಸಿಗಳು ತಮ್ಮ ಜೀವಕ್ಕಾಗಿ ಭಯಪಡುವಂತಾಗಿದೆ.
ಟು ಸರ್ಕಲ್ ಡಾಟ್ ನೆಟ್ ಜೊತೆ ಮಾತನಾಡುತ್ತಾ ಅನ್ಸಾರಿ ಹೇಳಿದರು, “ನಾನು ದಿನಗೂಲಿ ಕಾರ್ಮಿಕನಾಗಿದ್ದೇನೆ. ನನ್ನ ಕುಟುಂಬವು ಮದುವೆಗೆ ಹಾಜರಿದ್ದರು … ವಿವಾಹದಲ್ಲಿ ಬಡಿಸಲಾದ  ಏಕೈಕ ಮಾಂಸ  ಕೋಳಿಯಾಗಿತ್ತು. ಜನರು ಗೋಮಾಂಸ ಅಕ್ರಮವೆಂದು ತಿಳಿದಿರುವಾಗ ಮದುವೆಯಲ್ಲಿ ಅಷ್ಟು ಪ್ರಮಾಣದಲ್ಲಿ ಗೋಮಾಂಸವು ಹೇಗೆ ಇರುತ್ತದೆ? ಅಲ್ಲದೆ, ಯಾರಾದರೂ ಇದನ್ನು ಪೋಲಿಸರಿಗೆ  ತಿಳಿಸಬಲ್ಲರು ಮತ್ತು ತೊಂದರೆಗೊಳಗಾಗುವ ಸಂಭವವಿರುವಾಗ ಗೋಮಾಂಸವನ್ನು ಏಕೆ ಅಡುಗೆ ಮಾಡುತ್ತಾರೆ?”
ವಿವಾಹದ ನಂತರ ಬೆಳಿಗ್ಗೆ, ವರನ ಮನೆಯ ಸಮೀಪ ಹೂಳಲಾದ ಹಸುವಿನ ಗೊರಸು ಈ ವದಂತಿಯನ್ನು ಹುಟ್ಟುಹಾಕಲು ಕಾರಣವಾಯಿತು ಎಂದು ಅನ್ಸಾರಿ ಹೇಳಿದ್ದಾರೆ. “ನಾನು ಗೊರಸು ನೋಡಿದ್ದೇನೆ … ಅದು ಇತ್ತೀಚಿನ ದಿನಗಳಲ್ಲಿ ಹೂತಿರುವಂತಹದ್ದಲ್ಲ ..ಅದು ಹಳೆಯದು ಮತ್ತು ಅಲ್ಲಿ ಚೆನ್ನಾಗಿ ಕಾಣುವಂತೆ  ಹೂಳಲಾಗಿತ್ತು. ತುಂಬಾ ಗೋಮಾಂಸ ಇದ್ದರೆ, ಅವರು ಮನೆಯ ಬಳಿ ಹಸುವನ್ನು ಕತ್ತರಿಸಿ ನಂತರ ಅಡುಗೆ ಮಾಡಲು  ಯೋಚಿಸುತ್ತಾರಾ? ಮತ್ತು ಏಕೆ ಅವರು ಗೊರಸು ಮಾತ್ರ ಹೂಳುತ್ತಿದ್ದರು? ಉಳಿದಿರುವ ಮೃತ ದೇಹ ಎಲ್ಲಿದೆ? “ಎಂದು ಅವರು ಕೇಳಿದರು.
ಗೋಮಾಂಸ ಸೇವಿಸಲಾಗಿದೆ ಎಂಬ ವಾದವು ವಿವಾದಾಸ್ಪದವಾಗಿದೆ. ಆದರೂ  ಹಿಂದೂ ಬಲಪಂಥೀಯ ಸಂಘಟನೆಗಳ ಸದಸ್ಯರು, ಅವರು ಬಯಸಿದ ಎಲ್ಲವನ್ನೂ ಹಾನಿಗೊಳಿಸದಂತೆ ತಡೆಯಲು ಸಾದ್ಯವಾಗಿಲ್ಲ”. ಅವರು ಮನೆಯ ಕಿಟಕಿಯನ್ನು ಮುರಿದರು, ಬೈಕುಗಳನ್ನು ಸುಟ್ಟು, ಕಾರುಗಳನ್ನು ನಾಶಪಡಿಸಿದರು, ಸ್ಥಳೀಯ ಮಸೀದಿಯಲ್ಲಿ ಮಕ್ಕಳಿಗಾಗಿರುವ  ಪುಸ್ತಕಗಳನ್ನು ಹರಿದರು  … ಮುಸ್ಲಿಂ ಸಮುದಾಯವನ್ನು ಹೆದರಿಸಲು ಇದನ್ನು ಮಾಡಲಾಯಿತು. ಆ ದಿನದಿಂದ, ಈ ಗೂಂಡಾಗಳು ಇಲ್ಲಿಂದ ಓಡಿಹೋಗಲು ನಮಗೆ ಹೇಳುತ್ತಿದ್ದಾರೆ” ಎಂದು  ಅವರು ಹೇಳಿದರು ಮತ್ತು ಸತ್ಯವೇನೆಂದರೆ  ಅವರ ಬೆದರಿಕೆಗಳು ಕೆಲಸ ಮಾಡುತ್ತಿವೆ, ಸುರಕ್ಷತೆಯ ಭಯದಿಂದ ಹೆಚ್ಚಿನ ಕುಟುಂಬಗಳು, ಮಹಿಳೆಯರು ಹೆಣ್ಣು ಮಕ್ಕಳು ಮತ್ತು ಮಕ್ಕಳನ್ನು   ಬೇರೆ ಕಡೆ ಕಳುಹಿಸಲಾಗಿದೆ. ”
ಹೆಸರಿಸಲು ಹೇಳಲು ನಿರಾಕರಿಸಿದ ಇನ್ನೋರ್ವರು,  ಪೊಲೀಸರು ಎಂದಿನಂತೆ ತನಿಖೆಯನ್ನು ತಿರುಗಿಸಲು ಪ್ರಯತ್ನಿಸುತ್ತಿದ್ದಾರೆಂದು ಹೇಳಿದರು.  “ಅವರು ಏಳು ಜನರನ್ನು ಬಂಧಿಸಿರುವುದು ನಿಜ.  ಆದರೆ ಸತ್ಯವೆಂದರೆ, ಪೊಲೀಸರು ಗೋಮಾಂಸವೇ  ಅಥವಾ ಅಲ್ಲವೇ ಎಂದು ತನಿಖೆ ಮಾಡಲು ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಅವರು ಹೇಳಿದರು.
ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಿವಾನಿ ತಿವಾರಿ ಹೇಳಿದ್ದಾರೆ. ಆದರೆ, ಮುಂದೇನಾಗುವುದೆಂದು ಸ್ಥಳೀಯರು  ಭಯಗೊಂಡಿದ್ದಾರೆ.
ಹಿಂದೂ ಬಲಪಂಥೀಯ ಸಂಘಟನೆಗಳು ಬಹಳ ಹಿಂದೆಯೇ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ ಅನ್ಸಾರಿ, ಪರಿಸ್ಥಿತಿಯು ಇನ್ನೂ ಕೆಟ್ಟದಾಗಬಹುದೆಂದು ಭಯಪಡುತ್ತಾರೆ.’ಬೇರೆ ಸ್ಥಳಕ್ಕೆ ವಲಸೆ ಹೋಗುವುದು ನಾನು ಈಗಲೂ ಕಲ್ಪಿಸಿಕೊಂಡಿಲ್ಲ . ಏನೋ ಈಗ ನಾನು ಅದರ ಬಗ್ಗೆ ಯೋಚಿಸಬೇಕು. ಮುಂದೇನಾಗುವುದೆಂದು ಯಾರಿಗೂ ತಿಳಿದಿಲ್ಲ” ಎಂದು ಅವರು ಹೇಳಿದರು. ಕೋಳಿ ತಿನ್ನುವುದು ಸಹ ನಮ್ಮ ಮನೆಗಳನ್ನು ನಾಶಮಾಡಲು ಕಾರಣವಾಗುವುದಾದರೆ ನಾವು ಬೇರೇನು ಮಾಡಲು ಸಾಧ್ಯ” ಎಂದು ವಿಷಾದ ವ್ಯಕ್ತಪಡಿಸುತ್ತಾರೆ.