ಡಿ. 16: ಶೌರ್ಯ ಪ್ರಶಸ್ತಿ ಪುರಸ್ಕ್ರತ ನಿತಿನ್ ರಿಂದ ಕ್ರತಿ ಬಿಡುಗಡೆ

0
495

ಮಂಗಳೂರು.ಬಿಡುಗಡೆಯಾದ ಎರಡೇ ತಿಂಗಳಲ್ಲಿ ದ್ವಿತೀಯ ಆವೃತ್ತಿಯನ್ನು ಕಂಡ ಸನ್ಮಾರ್ಗ ಸಂಪಾದಕ ಏ ಕೆ ಕುಕ್ಕಿಲ ಅವರ ಎಣ್ಣೆ ಬತ್ತಿದ ಲಾಟೀನು ಕ್ರತಿಯ ದ್ವಿತೀಯ ಆವ್ರತಿಯನ್ನು ಈ ಬಾರಿಯ ರಾಜ್ಯ ಶೌರ್ಯ ಪ್ರಶಸ್ತಿ ಪುರಸ್ಕ್ರತರಾದ ನೆಲ್ಯಾಡಿಯ ಸಂತ ಜಾರ್ಜ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ ಪುತ್ತೂರು ಕೌಕ್ರಾಡಿಯ ನಿತಿನ್ ಬಿಡುಗಡೆಗೊಳಿಸಲಿದ್ದಾರೆ. ಡಿ. 16 ರಂದು ಕಲ್ಲಡ್ಕ ದ ಅನುಗ್ರಹ ಮಹಿಳಾ ಕಾಲೇಜ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕಾಲೇಜಿನ ಉಪನ್ಯಾಸಕರಾದ ಆಯಿಷಾ ನಸೀಬಾ ಕೃತಿಯ ಬಗ್ಗೆ ಒಳನೋಟ ಹರಿಸಲಿದ್ದಾರೆ. ವಿದ್ಯಾರ್ಥಿ ಅಫ್ರೀನಾ ಕೃತಿ ವಿಮರ್ಶೆ ಮಾಡಲಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಸೀಮಿತವಾದ ಈ ಕಾರ್ಯಕ್ರಮ ಬೆಳಗ್ಗೆ 9: 15 ಕ್ಕೆ ನಡೆಯಲಿದೆಯೆಂದು ಪ್ರಕಟಣೆ ತಿಳಿಸಿದೆ.