ತೆಲಂಗಾಣದಲ್ಲಿ ಅಂತಾರಾಷ್ಟ್ರೀಯ ಉರ್ದು ಸಮ್ಮೇಳನ

0
611

 ಹೈದರಾಬಾದ್ ಡಿ.22 ಇತ್ತೀಚೆಗಷ್ಟೇ ವಿಶ್ವ ತೆಲುಗು ಸಮ್ಮೇಳನವನ್ನು ಆಯೋಜಿಸಿದ ತೆಲಂಗಾಣ ಸರಕಾರವು, ಮುಂದಿನ ವರ್ಷದ ಫೆಬ್ರವರಿಯಲ್ಲಿ ಅಂತಾರಾಷ್ಟ್ರೀಯ ಉರ್ದು ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಿದೆ. ಪ್ರಸಿದ್ಧ ಕವಿಗಳು, ಕಾದಂಬರಿಕಾರರು, ಸಾಹಿತಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಪ್ರಯತ್ನ ಇದೆಂದು ಸರಕಾರದ ಮೂಲಗಳು ತಿಳಿಸಿವೆ.