ತೆಲಂಗಾಣ: ಅಲ್ಪಸಂಖ್ಯಾತರಿಗೆ 80 ಶೇಕಡಾ ಸಬ್ಸಿಡಿಯೊಂದಿಗೆ ಸಾಲ

0
945

 

ಹೈದರಾಬಾದ್:    ರಾಜ್ಯದಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ಎಸ್ಸಿ, ಎಸ್ಟಿ ಸೇರಿದಂತೆ ಅಲ್ಪಸಂಖ್ಯಾತರಿಗೆ 80 ಶೇಕಡಾ ಸಬ್ಸಿಡಿಯೊಂದಿಗೆ ರಾಜ್ಯ ಸರ್ಕಾರವು ಸಾಲ ಮಂಜೂರು ಮಾಡಲಿದೆ ಎಂದು ತೆಲಂಗಾಣ ರಾಜ್ಯ ಹಣಕಾಸು ಸಚಿವ ಎತಲಾ ರಾಜೇಂದರ್ ಇಂದಿಲ್ಲಿ ತಿಳಿಸಿದರು.
ಬುಧವಾರ ಕರೀಮ್ ನಗರ್ ಪಟ್ಟಣದಲ್ಲಿನ ಉಜ್ವಲ ಉದ್ಯಾನವನದಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ಒಂಬತ್ತು ಸಮುದಾಯಗಳಿಗೆ ಸಮಗ್ರ ಹಾಸ್ಟೆಲ್ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು
ಎಸ್ಸಿ ಎಸ್ಟಿ ಹಾಗೂ ಅಲ್ಪಸಂಖ್ಯಾತ ಅಭಿವೃದ್ದಿ ಬ್ಯಾಂಕ್ ಗಳು ​​ತಮ್ಮ ಒಪ್ಪಿಗೆಯನ್ನು ನೀಡಲು ಮುಂದಕ್ಕೆ ಬರುತ್ತಿಲ್ಲ ಎಂಬ ಆರೋಪಗಳನ್ನು ಅನುಸರಿಸಿ ಬ್ಯಾಂಕ್‌ಗಳ ಸಂಪರ್ಕವಿಲ್ಲದೆ ಫಲಾನುಭವಿಗಳಿಗೆ ನೇರವಾಗಿ ಸಬ್ಸಿಡಿ ಸಾಲ ನೀಡುವ ಯೋಜನೆಯನ್ನು ರಾಜ್ಯ ಸರಕಾರವು ಮೊದಲ ಬಾರಿಗೆ ಕೈಗೊಳ್ಳಲಿದೆ.
ಹೈದರಾಬಾದ್‌ನ ಐದು ಎಕರೆ ಭೂಮಿಯಲ್ಲಿ ರಾಜ್ಯದ ಎಲ್ಲಾ ಸಮುದಾಯಗಳಿಗೆ 2 ಕೋಟಿ ರೂ.ನಿಂದ ಸುಮಾರು 5 ಕೋ.ರೂ. ವೆಚ್ಚದಲ್ಲಿ ರಾಜ್ಯ ಸರಕಾರವು “ಸ್ವ-ಗೌರವ ಸಮುದಾಯ ಭವನಗಳನ್ನು” ರಚಿಸಲಿದೆ ಎಂದು ಇದೇ ಸಮಯ ಅವರು ತಿಳಿಸಿದ್ದಾರೆ.
ಬಳಿಕ ಮಾತಾನಾಡಿದ ಶ್ರೀ ರಾಜೇಂದರ್, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.