ತೌರಾತ್‍ನ ಪ್ರಕಾರ ತೀರ್ಮಾನ?

0
214

ತೌರಾತ್‍ನ ಪ್ರಕಾರ ತೀರ್ಮಾನ?
ಮುಹಮ್ಮದ್ ಕಾರವಾರ
? ಅಲ್‍ಮಾಇದದ 44ನೇ ವಚನದಲ್ಲಿ, `ನಾವು ತೌರಾತನ್ನು ಅವತೀರ್ಣ ಗೊಳಿಸಿದ್ದೆವು… ಮುಸ್ಲಿಮರಾಗಿದ್ದ ಎಲ್ಲ ಪ್ರವಾದಿಗಳೂ ಅದರ ಪ್ರಕಾರವೇ ಈ ಯಹೂದಿಗಳ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸುತ್ತಿದ್ದರು…’ ಎಂದಿದೆ. ಹಾಗಾದರೆ ಮೂಸಾರ ಬಳಿಕ ಎಷ್ಟು ಪ್ರವಾದಿಗಳು ಬಂದಿದ್ದಾರೆ? ಆ ಪ್ರವಾದಿಗಳಿಗೆಲ್ಲ ಅಲ್ಲಾಹನ ವಾಣಿ ಅವತೀರ್ಣವಾಗುತ್ತಿರಲಿಲ್ಲವೇ? ಅವರೆಲ್ಲ ತೌರಾತನ್ನೇ ಅನುಸರಿಸುತ್ತಿದ್ದರೇ? ಅಥವಾ ಯಹೂದಿಗಳ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸುವಾಗ ಮಾತ್ರ ತೌರಾತನ್ನು ಅವಲಂಬಿಸುತ್ತಿದ್ದರೇ? ಅಲ್ಲಾಹನು ಆ ಪ್ರವಾದಿಗಳಿಗೆ ಅವತೀರ್ಣಗೊಳಿಸಿರಬಹುದಾದ ವಹ್ಯ್‍ನ ಅನುಸಾರವಲ್ಲದೇ ತೌರಾತ್‍ನ ಆಧಾರದಲ್ಲಿ ಯಹೂದಿಯರ ವ್ಯಾಜ್ಯ ಇತ್ಯರ್ಥಗೊ ಳಿಸಲು ಕಾರಣವೇನು?
ಇಸ್ಲಾಮ್ ಎಂಬುದು ಪ್ರವಾದಿ ಮುಹಮ್ಮದ್(ಸ) ಅವರು ತಂದ ಧರ್ಮ ವಲ್ಲ. ಅದು ಲೋಕಾರಂಭದಿಂದಲೇ ಈ ಲೋಕಕ್ಕೆ ಬಂದ ಧರ್ಮವಾಗಿದೆ. ಇಸ್ಲಾಮ್ ಎಂಬುದು ಒಂದು ಧರ್ಮದ ಹೆಸರಲ್ಲ. ಅದು ಒಂದು ತತ್ವ ಸಿದ್ಧಾಂತದ ಹೆಸರಾಗಿದೆ. ಇಸ್ಲಾಮ್ ಪದಕ್ಕೆ ದೇವ ನಿಗೆ ಶರಣಾಗುವುದು, ಶಾಂತಿ, ದೇವನ ಆದೇಶ ನಿರ್ದೇಶಗಳನ್ನು ಪಾಲಿಸಿ ಜೀವಿಸುವುದು ಎಂಬ ಅರ್ಥಗಳಿವೆ. ಈ ಲೋಕಕ್ಕೆ ಬಂದಿರುವ ಲಕ್ಷಕ್ಕೂ ಮಿಕ್ಕಿ ಪ್ರವಾದಿಗಳು ಮತ್ತು ಸಂದೇಶ ವಾಹಕರು ಅದೇ ಧರ್ಮದ ಪ್ರತಿಪಾದ ಕರೂ ಕರೆ ನೀಡುವವರೂ ಆಗಿದ್ದರು. ಪ್ರವಾದಿ ಮುಹಮ್ಮದ್(ಸ) ಅವರ ಪೈಕಿ ಅತ್ಯಂತ ಕೊನೆಯವರಾಗಿದ್ದಾರೆ. ಆ ಎಲ್ಲ ಪ್ರವಾದಿಗಳೂ, ಅವರನ್ನು ಅನು ಸರಿಸಿ ಜೀವಿಸಿದವರೂ ಮುಸ್ಲಿಮರೇ ಆಗಿದ್ದರು. ಅವರ ಮಧ್ಯೆ ಯಾವುದೇ ತಾರತಮ್ಯ ಮಾಡುವಂತಿಲ್ಲ. ಅದನ್ನೇ ಪವಿತ್ರ ಕುರ್‍ಆನ್ ಹೀಗೆ ಹೇಳಿದೆ.
ಮುಸ್ಲಿಮರೇ ಹೇಳಿರಿ- ನಾವು ಅಲ್ಲಾಹನ ಮೇಲೆ ಮತ್ತು ನಮ್ಮ ಕಡೆ ಅವತೀರ್ಣವಾಗಿರುವುದರ ಮೇಲೆ ಮತ್ತು ಇಬ್ರಾಹೀಮ್, ಇಸ್ಮಾಈಲ್, ಇಸ್ಹಾಕ್, ಯಅïಕೂಬ್ ಮತ್ತು ಯಅïಕೂಬರ ಸಂತತಿಗಳಿಗೆ ಅವ ತೀರ್ಣವಾಗಿರುವುದರ ಮೇಲೆ ಹಾಗೂ ಮೂಸಾ, ಈಸಾ ಮತ್ತು ಇತರ ಎಲ್ಲ ಪ್ರವಾದಿಗಳಿಗೆ ಅವರ ಪ್ರಭುವಿನಿಂದ ದೊರೆತಿರುವುದರ ಮೇಲೆ ವಿಶ್ವಾಸವಿಟ್ಟಿ ದ್ದೇವೆ. ನಾವು ಅವರೊಳಗೆ ತಾರತಮ್ಯ ವಿರಿಸುವುದಿಲ್ಲ. ನಾವು ಕೇವಲ ಅಲ್ಲಾಹ್‍ನ ಮುಸ್ಲಿಮರಾಗಿದ್ದೇವೆ.