ದೀಪಕ್ ಹತ್ಯೆ ಹಾಗೂ ಮಾರಣಾಂತಿಕ ಹಲ್ಲೆ ಖಂಡನೀಯ, ಸಮಗ್ರ ತನಿಖೆಗೆ ಅಥರುಲ್ಲಾಹ್ ಶರೀಫ್ ಆಗ್ರಹ

0
339

ಬೆಂಗಳೂರು: ಮಂಗಳೂರಿನ ಹೊರವಲಯದ ಸುರತ್ಕಲ್’ನಲ್ಲಿ ನಡೆದ ಯುವಕನ ಕೊಲೆ ಮತ್ತು ಆ ಬಳಿಕದ ಇರಿತ ಪ್ರಕರಣಗಳನ್ನು  ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಅಥರುಲ್ಲಾಹ್ ಶರೀಫ್ ಕಟುವಾಗಿ ಖಂಡಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆಥರುಲ್ಲಾ ಶರೀಫ್, ದೀಪಕ್ ಕೊಲೆಯ

ಸಮಗ್ರ ತನಿಖೆಯಾಗಬೇಕು, ಜೊತೆಗೆ ಇರಿತಕ್ಕೊಳಗಾದ ಇಬ್ಬರಿಗೂ ನ್ಯಾಯ ಸಿಗಬೇಕು.   ಅಪರಾಧಿಗಳಿಗೆ ಸೂಕ್ತ ಶಿಕ್ಷೆಯಾಗುವಂತೆ ಪೊಲೀಸ್ ಇಲಾಖೆ ಮತ್ತು ಸರ್ಕಾರ ಖಾತ್ರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಇದೇ ವೇಳೆ, ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅವರು, ಇಡೀ ಸಮುದಾಯವವು ಅವರ ಕುಟುಂಬದ ಜತೆಗಿದೆ ಎಂದು ಹೇಳಿದ್ದಾರೆ.

ಈ ಪ್ರಕರಣದಲ್ಲಿ ನ್ಯಾಯಕ್ಕೆ ಆಗ್ರಹ ಮಾಡುವುದು ಒಂದು ರಾಜಕೀಯ ಅಸ್ತ್ರವಾಗಬಾರದು ಎಂದು ಅವರು ಹೇಳಿದ್ದಾರೆ. ಯಾರೂ ಈ ಸಂದರ್ಭದಲ್ಲಿ ಪ್ರಚೋದನೆಗೊಳಾಗಬಾರದು, ರಾಜಕೀಯ ಷಡ್ಯಂತ್ರಗಳಿಗೆ ಬಲಿಯಾಗಬಾರದು, ನೆಲದ ಕಾನೂನಿಗೆ ಗೌರವ ಕೊಟ್ಟು ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಜನತೆಗೆ ಕರೆಕೊಟ್ಟಿದ್ದಾರೆ.