ದೇಶಪ್ರೇಮ ಮತ್ತು ಮೊಲಗಳು

0
33

ಪ್ರವಾಹ ಪೀಡಿತ ನ್ಯೂಝಿಲ್ಯಾಂಡಿನಿಂದ ಕಳೆದವಾರ ವರದಿಯಾದ ಸಚಿತ್ರ ಸುದ್ದಿಯೊಂದು ಜಾಗತಿಕ ಅಚ್ಚರಿಗೆ ಕಾರಣವಾಯಿತು. ಕುರಿಗಾಹಿಯಾಗಿರುವ 65 ವರ್ಷದ ಹಾರ್ನೆ ಎಂಬವರು ನೀರು ತುಂಬಿದ ಜಮೀನಿನಿಂದ ಕುರಿಗಳ ಹಿಂಡನ್ನು ಸುರಕ್ಷಿತ ಪ್ರದೇಶಕ್ಕೆ ತಲುಪಿಸಲು ತೀರ್ಮಾನಿಸಿ ದರು. ಆಗ ಅವರಿಗೆ ಕುರಿಗಳ ಮೇಲೆ 3 ಕಾಡು ಮೊಲಗಳು ಕುಳಿತಿರುವುದು ಕಾಣಿಸಿತು. ಎರಡು ಮೊಲಗಳು ಒಂದೇ ಕುರಿಯ ಬೆನ್ನಿನ ಮೇಲೆ ಕುಳಿತಿದ್ದರೆ, ಮತ್ತೊಂದು ಮತ್ತೊಂದರ ಮೇಲೆ ಕುಳಿತಿತ್ತು. ಸುರಕ್ಷಿತ ಸ್ಥಳಕ್ಕೆ ತಲುಪುವ ವರೆಗೆ ಆ ಮೊಲಗಳು ಕುರಿಯ ಮೇಲಿಂದ ಕದಲಿರಲಿಲ್ಲ. ಹೆರ್ನೆ ಆ ದೃಶ್ಯವನ್ನು ಕ್ಲಿಕ್ಕಿಸಿ ಹಂಚಿಕೊಂಡರು. ನಿಜವಾಗಿ ಆ ಮೊಲಗಳ ಸಾವು ಮತ್ತು ಬದುಕು ಹೆರ್ನೆ ಮತ್ತು ಕುರಿಗಳನ್ನು ಅವಲಂಬಿಸಿತ್ತು. ಒಂದು ವೇಳೆ ಮೊಲಗಳು ತನ್ನ ಬೆನ್ನನ್ನು ಅಲುಗಾಡಿಸಿ ಮೊಲಗಳನ್ನು ಕೆಳಗೆ ಬೀಳಿಸುತ್ತಿದ್ದರೆ ಅಥವಾ ಹೆರ್ನೆ ಅವುಗಳನ್ನು ಓಡಿಸುತ್ತಿದ್ದರೆ ಅವು ನೀರಿಗೆ ಬಿದ್ದು ಅಪಾಯಕ್ಕೆ ಸಿಲುಕಿಕೊಳ್ಳುತ್ತಿತ್ತು. ಬಹುಶಃ ಪ್ರಧಾನಿ ನರೇಂದ್ರ ಮೋದಿ ಸರಕಾರದ ಹೊಸ ಯೋಜನೆಯೊಂದು ಕೋಟ್ಯಾಂತರ ಮಂದಿ ಭಾರತೀಯರ ಪಾಲಿಗೆ ಈ ಮೊಲದ ಸ್ಥಿತಿಯನ್ನು ತಂದೊಡ್ಡಬಹುದೇ ಅನ್ನುವ ಅನುಮಾನ ಕಾಡತೊಡಗಿದೆ. ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಚಲೇಜಾವ್ ಚಳವಳಿಗೆ 75 ವರ್ಷಗಳು ತುಂಬು ಹಿನ್ನೆಲೆಯಲ್ಲಿ ಮತ್ತು ಬ್ರಿಟಿಷರಿಂದ ಸ್ವತಂತ್ರಗೊಂಡ ಭಾರತಕ್ಕೆ 70 ವರ್ಷಗಳಾಗುವ ಆಧಾರದಲ್ಲಿ ‘ನಾನು ನನ್ನ ದೇಶವನ್ನು ಬೆಂಬಲಿಸುತ್ತೇನೆ’ ಎಂಬ ಘೋಷವಾಕ್ಯದೊಡನೆ ಪ್ರಜಾ ಆಂದೋಲನವನ್ನು ಕೈಗೊಳ್ಳಲು ಸರಕಾರ ಉದ್ದೇಶಿಸಿದೆ. ಯುವ ಸಮೂಹದಲ್ಲಿ ದೇಶಪ್ರೇಮವನ್ನು ಉತ್ತೇಜವುದು ಇದರ ಗುರಿ.