ನಾನು ಓದಿದ ಶ್ರೀರಾಮ ಅವನಲ್ಲ

0
776

ಶ್ರೀರಾಮ ಮುಸ್ಲಿಮರ ವಿರೋಧಿಯೂ ಅಲ್ಲ, ಕ್ರೈಸ್ತರ ವಿರೋಧಿಯೂ ಅಲ್ಲ. ಆತ ಒಳ್ಳೆಯವ. ಮನುಷ್ಯ ಸಹಜವಾದ ಗುಣಗಳೆಲ್ಲವನ್ನೂ ಹೊಂದಿದ ಒಳ್ಳೆಯ ಮನುಷ್ಯ. ಮಾರ್ಚ್ 29 ರ ಪ್ರಜಾವಾಣಿ ಪತ್ರಿಕೆಯಲ್ಲಿ  “ಸ್ತ್ರೀವಾದ ಮತ್ತು ಶ್ರೀ ರಾಮ” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಪ್ರಸನ್ನ ಅವರ ಲೇಖನವನ್ನು ಓದುತ್ತಾ ಓದುತ್ತಾ ರಾಮ ನನ್ನನ್ನು ತೀವ್ರವಾಗಿ ಆಕರ್ಷಿಸಿದ. ಆಪ್ತವಾದ. ಆತನನ್ನು ಯಾಕೆ ಮುಸ್ಲಿಂ ವಿರೋಧಿಯಂತೆ ಮತ್ತು ಮುಸ್ಲಿಮರನ್ನು ಹಣಿಯಲು ಇರುವ ಆಯುಧದಂತೆ ಬಿಂಬಿಸುತ್ತಿದ್ದಾರೋ ಅನ್ನುವ ಪ್ರಶ್ನೆ ಕಥುವಾದ ವೀಡಿಯೊವನ್ನು ವೀಕ್ಷಿಸಿದ ಬಳಿಕ ನನ್ನನ್ನು ತೀವ್ರವಾಗಿಯೇ ಕಾಡತೊಡಗಿದೆ. ಆಸಿಫಾಳನ್ನು ಹುರಿದು ಮುಕ್ಕಿದ ಆರೋಪಿಗಳ ಪರ ಕಥುವಾದಲ್ಲಿ ನಡೆಸಲಾದ ರಾಲಿಯಲ್ಲಿ ಜೈ ಶ್ರೀ ರಾಮ್ ಎಂದು ಘೋಷಿಸಿರುವುದನ್ನು ನನಗೀಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಸನ್ನ ಅವರು ಕಟ್ಟಿಕೊಟ್ಟ ರಾಮ ಹೀಗಲ್ಲ. ಆ ರಾಮ ಮುಸ್ಲಿಂ ವಿರೋಧಿಯಲ್ಲ.

ಏ. ಕೆ. ಕುಕ್ಕಿಲ

http://m.prajavani.net/article/2018_03_29/562408

http://m.prajavani.net/article/2018_03_29/562408