ನಾನು ಗಂಡಾಗಬೇಕು… ನಿಮ್ಮನ್ನು ಭಾವುಕಗೊಳಿಸಬಲ್ಲ ಪುಟ್ಟ ಹೆಣ್ಣುಮಗುವಿನ ವೀಡಿಯೋ ವೈರಲ್

0
1143

ಆರೋ ಏಳೋ ವರ್ಷದ ಪುಟ್ಟ ಹೆಣ್ಣು ಮಗು ತನ್ನ ಉದ್ದ ಕೂದಲನ್ನು ಕತ್ತರಿಸುತ್ತಿರುತ್ತದೆ. ಯಾಕೆ ಹಾಗೆ ಕೂದಲು ಕತ್ತರಿಸುತ್ತೀ ಎಂದು ಗೆಳತಿ ಪ್ರಶ್ನಿಸುತ್ತಾಳೆ ಆದರೆ ಆ ಮಗು ನೀಡುವ ಉತ್ತರ ಶಾಲೆಗೆ ಹೋಗುವ ಮತ್ತು ಹೋಗದ ಎಲ್ಲ ಹೆಣ್ಣು ಮಕ್ಕಳದ್ದಾಗಿರುವಂತೆ ಅನಿಸುತ್ತದೆ. ಆ ಉತ್ತರದಲ್ಲಿ ಕಥುವಾದ ಆಸಿಫಾ ನಮ್ಮೆದುರು ಬರುತ್ತಾಳೆ. ಉನ್ನಾವದ ತರುಣಿಯೂ ಬರುತ್ತಾಳೆ. ಸಮಾಜದಲ್ಲಿ ಗಂಡಾಗಿ ಬದುಕಿದರಷ್ಟೇ ಸುರಕ್ಷಿತ ಎಂಬ ಭಾವವೊಂದು ಆ ಮಗುವಿನ ಉತ್ತರದಲ್ಲಿ, ದೇಹಭಾಷೆಯಲ್ಲಿ ವ್ಯಕ್ತವಾಗುತ್ತದೆ. ಶಿಕ್ಷಣ ಒಂದೇ ಅಲ್ಲ, ಹೆಣ್ಣನ್ನು ಕಾಡುವ ಸರ್ವ ಸಮಸ್ಯೆಗಳಿಗೂ ಆ ಮಗುವಿನ ಗಂಡಾಗುವ ಬಯಕೆಯು ಒಂದು ರೂಪಕದಂತಿದೆ. 50 ಸೆಕೆಂಡುಗಳಷ್ಟು ಪುಟ್ಟ ಅವಧಿಯ ಈ ವೀಡಿಯೋವನ್ನು ವೀಕ್ಷಿಸಿ.