ನಾನೂ ಅತ್ಯಾಚಾರ ಅಥವಾ ಕೊಲೆಗೀಡಾಗುವ ಸಾದ್ಯತೆಯಿದೆ : ಕಥ್‍ವಾದ ಅತ್ಯಾಚಾರ ಪೀಡಿತೆ ಬಾಲಕಿಯ ಪರ ವಾದಿಸುತ್ತಿರುವ ನ್ಯಾಯವಾದಿಯ ಆತಂಕ

0
391

ನವದೆಹಲಿ: ನಾನು ಕೂಡಾ ಅತ್ಯಾಚಾರಕ್ಕೋ, ಕೊಲೆಗೋ ಈಡಾಗುವ ಸಾಧ್ಯತೆಯಿದೆ ಎಂದು ಕಥ್‍ವಾದಲ್ಲಿ ಅತ್ಯಾಚಾರಕ್ಕೊಳಗಾಗಿ ದುಷ್ಟರಿಂದ ಹತ್ಯೆಗೈಯಲ್ಪಟ್ಟ ಎಂಟರ ಹರೆಯದ ಬಾಲಕಿಯ ಪರ ವಾದಿಸುತ್ತಿರುವ ನ್ಯಾಯವಾದಿ ದೀಪಿಕ ಸಿಂಗ್ ರಾವತ್ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅವರು ನ್ಯಾಯಾಲಯಕ್ಕೆ ಹಾಜರಾಗದಂತೆ ನನ್ನನ್ನು ತಡೆಯುವ ಸಾಧ್ಯತೆಯಿದೆ. ಇದನ್ನು ಮೀರಿ ಹೇಗೆ ಜೀವಿಸಬಹುದೆಂಬುದು ನನಗೆ ತಿಳಿಯುತ್ತಿಲ್ಲ ಎಂದು ವಾರ್ತಾ ಮಾದ್ಯಮಗಳ ಮುಂದೆ ವಿವರಿಸಿದ್ದಾರೆ. ಕಳೆದ ದಿನವೂ ನನಗೆ ಬೆದರಿಕೆಗಳು ಬಂದಿವೆ. ನಿನ್ನನ್ನು ನಾವು ಮರೆಯಲಾರೆವು ಎಂದು ಅವರು ಬೆದರಿಕೆ ಹಾಕಿದ್ದಾರೆ. ಅವರು ನನ್ನ ಮೇಲೆ ಹಿಂದುತ್ವ ವಿರೋಧಿ ಎಂಬ ಲೇಬಲ್ ಹಚ್ಚಿ ಸಮಾಜದಿಂದ ಪ್ರತ್ಯೇಕಿಸಲು ಹವಣಿಸುತ್ತಿದ್ದಾರೆ. ನನಗೂ ನನ್ನ ಕುಟುಂಬಕ್ಕೂ ಭದ್ರತೆಯ ಅಗತ್ಯವಿದೆಯೆಂದು ಸುಪ್ರೀಮ್ ಕೋರ್ಟಿನ ಮೊರೆ ಹೋಗುತ್ತೇನೆ. ನ್ಯಾಯ ಲಭಿಸಬೇಕು. ಆ ಎಂಟರ ಬಾಲಕಿಗೆ ನ್ಯಾಯ ಒದಗಿಸಲು ನಾನು ಕಟಿಬದ್ಧಳಾಗಿದ್ದೇನೆ. ಆ ನಿರ್ಧಾರದಲ್ಲಿ ನಾನು ಅಚಲಳಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಆರೋಪಿಗಳ ವಿರುದ್ದ ಆರೋಪಪಟ್ಟಿ ದಾಖಲಿಸುವುದರಿಂದ ಪೋಲೀಸರನ್ನು ತಡೆಯಲು ಶ್ರಮಿಸಿದ ಜಮ್ಮು ಕಾಶ್ಮೀರ್ ಬಾರ್ ಎಸೋಸೊಯೇಶನ್ ನ ಅಧೀನದ ವಕೀಲರ ಗುಂಪೊಂದರ ವರ್ತನೆಯ ವಿರುದ್ದ ತನಿಖೆ ನಡೆಸಲು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸಮಿತಿಯೊಂದನ್ನು ನೇಮಿಸಿದೆ.