ನಾರಿಯನ್ನು ಪೂಜಿಸುವ ದೇಶದಲ್ಲಿ ಯುವತಿಯರು ಹೇಗಿದ್ದಾರೆ? ದಂಗು ಬಡಿಸುವ ಸಮೀಕ್ಷೆಯನ್ನು ಓದಿ

0
356

ಆಂಗ್ಲ ಮೂಲ: ಕವೀಶ ಕೊಹ್ಲಿ
ಕನ್ನಡಕ್ಕೆ: ಆಯಿಷತುಲ್ ಅಫೀಫಾ

ದೇಶದ ನಾಲ್ಕು ಹದಿಹರೆಯದ ಹುಡುಗಿಯರಲ್ಲಿ ಒಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಅಪಹರಣಕ್ಕೊಳಗಾಗುವ, ದೈಹಿಕವಾಗಿ ಹಲ್ಲೆಗೀಡಾಗುವ ಅಥವಾ ಅತ್ಯಾಚಾರಕ್ಕೊಳಗಾಗುವ ಬಗ್ಗೆ ಭಯಭೀತರಾಗಿದ್ದಾರೆ ಎಂದು ಹೊಸ ವರದಿಯು ಬಹಿರಂಗಪಡಿಸಿದೆ.
ನಗರ ಪ್ರದೇಶಗಳ ಹುಡುಗಿಯರಲ್ಲಿ ಈ ಭೀತಿ ಹೆಚ್ಚಾಗಿದೆ. ನಗರ ಪ್ರದೇಶಗಳಲ್ಲಿ ಸುಮಾರು 20%ದಷ್ಟು ಹುಡುಗಿಯರು ದೈಹಿಕವಾಗಿ ಆಕ್ರಮಣಕ್ಕೊಳಗಾಗುವ ಬಗ್ಗೆ ಭೀತರಾಗಿದ್ದರೆ . 11 %ದಷ್ಟು ಜನರು ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಾಚಾರಕ್ಕೆ ಹೆದರಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ 17 ಶೇಕಡಾ ಜನರು ದೈಹಿಕ ಹಲ್ಲೆ ಮತ್ತು 9% ಜನರು ಅತ್ಯಾಚಾರಕ್ಕೆ ಭಯಪಡುತ್ತಾರೆ .
ದೈಹಿಕ ಹಾನಿಯ ಬಗೆಗಿನ ಆತಂಕವು ಅಪಹರಣಕ್ಕೊಳಗಾಗುವ ಭೀತಿಯಿರುವ ಯುವತಿಯರಲ್ಲಿ ತುಂಬಾ ಹೆಚ್ಚಾಗಿದೆ.
ನಗರ ಪ್ರದೇಶಗಳಲ್ಲಿ ಸಂದರ್ಶಿಸಲಾದ ಸುಮಾರು 30% ಹುಡುಗಿಯರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೇ. 21 ರಷ್ಟುಹುಡುಗಿಯರು ಅಪಹರಣಕ್ಕೊಳಗಾಗುವ ಬಗ್ಗೆ ಭಯಬೀತರಾಗಿದ್ದಾರೆ. ಹದಿಹರೆಯದ ಹುಡುಗಿಯರ ಮನಸ್ಸಿನಲ್ಲಿ ದೈಹಿಕ ಹಾನಿಯ ಭಯ ವಾಸ್ತವವಾಗಿ ತುಂಬಾ ಹೆಚ್ಚಾಗಿದೆ ಎಂದು ವರದಿಯು ಹೇಳುತ್ತದೆ.
ನಗರ ಪ್ರದೇಶಗಳಲ್ಲಿ 27 ಶೇ. ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೇ 20 ರಷ್ಟು ಯುವತಿಯರು ಚಲನವಲನಗಳ ಮೇಲಿನ ನಿರ್ಬಂಧಗಳ ಭಯದಿಂದ ಕುಟುಂಬದ ಸದಸ್ಯರಲ್ಲಿ ಕೂಡಾ ಈ ಬಗ್ಗೆ ದೂರಲು ಭಯಪಡುತ್ತಾರೆ
ವಿಂಗ್ಸ್ 2018: ವರ್ಲ್ಡ್ ಆಫ್ ಇಂಡಿಯಾ ಗರ್ಲ್ಸ್, ಸೇವ್ ದಿ ಚಿಲ್ಡ್ರನ್ ಇನ್ ಇಂಡಿಯಾಎಂಬ ಹೆಸರಲ್ಲಿ ಸರಕಾರೇತರ ಸಂಸ್ಥೆಯು ವರದಿಯನ್ನು ಪ್ರಕಟಿಸಿದೆ. ಇದು ಹದಿಹರೆಯದ ಹುಡುಗಿಯರ (11-18 ವರ್ಷಗಳು) ಮತ್ತು ಹುಡುಗರ (15-18 ವರ್ಷಗಳು), ಯುವ ವಿವಾಹಿತ ಮಹಿಳೆಯರ ಮತ್ತು ಹದಿಹರೆಯದ ಹುಡುಗಿಯರ ಪೋಷಕರ ಸಮೀಕ್ಷೆಯನ್ನು ಆಧರಿಸಿದೆ. ಅಸ್ಸಾಂನ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ .ದೆಹಲಿ-ಎನ್ಸಿಆರ್, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ..
ಬಾಲಕಿಯರ ಸುರಕ್ಷತೆಯ ಬಗ್ಗೆ ಹುಡುಗರ ಗ್ರಹಿಕೆಯನ್ನೂ ಸಹ ಗಣನೆಗೆ ತೆಗೆದುಕೊಂಡ ಅಧ್ಯಯನದ ಪ್ರಕಾರ, ಮಹಿಳೆಯರು ತಾವು ಕಿರುಕುಳಕ್ಕೊಳಗಾದ ಅಥವಾ ಅತ್ಯಾಚಾರಕ್ಕೊಳಗಾದ ಸಂದರ್ಭಗಳಲ್ಲಿ ಸ್ವತಃ ತೊಂದರೆಗಳನ್ನು ಆಹ್ವಾನಿಸುತ್ತಾರೆ ಎಂದು ಗಣನೀಯ ಸಂಖ್ಯೆಯ ಹರೆಯದ ಹುಡುಗರು ಭಾವಿಸುತ್ತಿದ್ದಾರೆ.
ಮನೆಯಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಅಂತಿಮ ತೀರ್ಮಾನವನ್ನು ಪುರುಷರು ಹೊಂದಿರಬೇಕೆಂದು ಅರ್ಧದಷ್ಟು ಹುಡುಗರು ಅಭಿಪ್ರಾಯಪಡುತ್ತಾರೆ.
ಮೂರು ಹದಿಹರೆಯದ ಹುಡುಗರಲ್ಲಿ ಒಬ್ಬರು, ಸಾರ್ವಜನಿಕ ಸ್ಥಳಗಳಲ್ಲಿ ಹೋಗುವ ಸಂದರ್ಭದಲ್ಲಿ ಯುವತಿಯರು ಕೆಲವು ವಿಧದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕೆಂದು ಮತ್ತು ಮಹಿಳೆಗೆ ಹೊಡೆಯುವುದು ನಿಜವಾಗಿಯೂ ಹಿಂಸಾಚಾರವಲ್ಲವೆಂದು ಭಾವಿಸುತ್ತಾರೆ.
ಕಿರುಕುಳದ ಕೆಲವು ಸಂದರ್ಭಗಳಲ್ಲಿ ಪ್ರಚೋದನೆ ಮೂಡಿಸಿದ್ದಕ್ಕಾಗಿ ಮೂವರು ಹುಡುಗರಲ್ಲಿ ಒಬ್ಬನು ಮಹಿಳೆಯನ್ನೇ ದೂಷಿಸಿದ್ದಾನೆ. ಅತ್ಯಾಚಾರಕ್ಕೊಳಗಾಗುವ ಪರಿಸ್ಥಿತಿಗೆ ಮಹಿಳೆ ತಾನೇ ಹೊಣೆಗಾರಳಾಗಿದ್ದಾಳೆ ಎಂದು ನಗರ ಮತ್ತು ಗ್ರಾಮೀಣ ಪ್ರದೇಶದ ಮೂವರು ಹುಡುಗರಲ್ಲಿ ಒಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿ ಹೇಳುತ್ತದೆ.
ಸಾರ್ವಜನಿಕ ಸಾರಿಗೆ ಕೆಟ್ಟದಾಗಿದೆ:
ವರದಿಯ ಪ್ರಕಾರ, ಸಾರ್ವಜನಿಕ ಸಾರಿಗೆ ಅಸುರಕ್ಷಿತವಾಗಿದೆ ಎಂದು ಯುವತಿಯರು ಭಾವಿಸುತ್ತಾರೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಗ್ರಾಮೀಣ ಪ್ರದೇಶಗಳ ಸುಮಾರು 40 ಪ್ರತಿಶತ ಹುಡುಗಿಯರು ಮತ್ತು ನಗರ ಪ್ರದೇಶಗಳ 47 ಪ್ರತಿಶತದಷ್ಟು ಹುಡುಗಿಯರು ಅನುಚಿತ ವರ್ತನೆ ,ಲೈಂಗಿಕ ಕಿರುಕುಳಕ್ಕೊಳಗಾಗಬಹುದೆಂದು ಭಯಪಟ್ಟಿದ್ದಾರೆ.
ಉನ್ನತ ಮತ್ತು ಮಧ್ಮ ವರ್ಗದಿಂದ ಬಂದ ಯುವತಿಯರಲ್ಲಿರುವ ಅಭಿಪ್ರಾಯ ಇದು ಎಂದು ವರದಿ ಹೇಳುತ್ತದೆ. ಅವರು ಸಾರ್ವಜನಿಕ ಸಾರಿಗೆಯನ್ನು ಭಯಪಡುತ್ತಾರೆ.
ಸಾರ್ವಜನಿಕ ಸಾರಿಗೆಯ ನಂತರ, ಹುಡುಗಿಯರು ಸ್ಥಳೀಯ ಮಾರುಕಟ್ಟೆ ಮತ್ತು ತಮ್ಮ ನೆರೆಹೊರೆಯ ಅಥವಾ ಶಾಲೆಗಳ ‘ಕಿರಿದಾದ ಓಣಿ ‘ಗಳಿಗೆ ಭಯಪಡುತ್ತಾರೆ. ಈ ಅಧ್ಯಯನವು ಗಮನಿಸಿದಂತೆ, ಮಹಿಳೆಯರು ನಿರಂತರವಾಗಿ ಬಳಸುವ ಜನಸಂದಣಿಯಿರುವ ಬೀದಿಗಳನ್ನು ಸಹ ಅಹಿತಕರ’ ಎಂದು ಹೇಳುತ್ತಾರೆ.

ನಗರ ಪ್ರದೇಶಗಳಲ್ಲಿ ವಿಶೇಷವಾಗಿ ದುರ್ಬಲ ವಿಭಾಗಳಿಂದ ಬಂದ ಯುವತಿಯರು ಸಿನೆಮಾ ಕೋಣೆಗಳು ಮತ್ತು ಮಾಲ್ಗಳನ್ನು ಭಯಪಡುತ್ತಾರೆ ಎಂದು ವರದಿ ಹೇಳುತ್ತದೆ. ಕೊಳೆಗೇರಿ ಅಥವಾ ಆರ್ಥಿಕವಾಗಿ ದುರ್ಬಲ ವರ್ಗಗಳಿಂದ ಬಂದ ಈ ಹುಡುಗಿಯರ ದೂರುಗಳನ್ನು ತುಲನಾತ್ಮಕವಾಗಿ ಮೇಲ್ವರ್ಗದ ಅಧಿಕಾರಿಗಳಿರುವ ಜಾಗಗಳಲ್ಲಿ ಕೇಳುವುದಿಲ್ಲ ಎಂದು ಹೆದರುತ್ತಾರೆ ಎಂದು ವರದಿ ಹೇಳಿದೆ.
ಇದೇ ಕಾರಣಗಳಿಗಾಗಿ, ಇತರ ಹಿನ್ನೆಲೆಯಿಂದ ಬಂದ ಹುಡುಗಿಯರಿಗಿಂತ ಎಸ್ಸಿ / ಎಸ್ಟಿ ಹುಡುಗಿಯರು ಶಾಲೆಗೆ ಹೋಗುವ ದಾರಿಯನ್ನು ಹೆಚ್ಚು ಸುರಕ್ಷಿತವಲ್ಲವೆಂದು ಭಾವಿಸುತ್ತಾರೆ ಎಂದು ವರದಿಯು ಹೇಳುತ್ತದೆ
ಕಾನೂನು ಜಾರಿಯಲ್ಲಿರುವ ಅಪನಂಬಿಕೆ;
ಹುಡುಗಿಯರಲ್ಲಿ ಶೇ 40 ರಷ್ಟು ಮತ್ತು ಅವರ ಪೋಷಕರಲ್ಲಿ ಶೇ. 50 ಕ್ಕಿಂತ ಹೆಚ್ಚಿನವರು ಅಪರಾಧವನ್ನು ವರದಿ ಮಾಡಲು ಪೋಲಿಸರ ಬಳಿ ಹೋಗುವುದು ಸಕಾರಾತ್ಮಕ ಪರಿಹಾರವನ್ನು ನೀಡುತ್ತದೆ ಎಂದು ಯೋಚಿಸುವುದಿಲ್ಲ.
ಪೊಲೀಸರು “ಬಲಿಯಾದವರನ್ನು ದೂಷಿಸಬಹುದು ಅಥವಾ ಈ ಘಟನೆಯನ್ನು ಕ್ಷುಲ್ಲಕಗೊಳಿಸಬಹುದು, ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಇರಬಹುದು ಅಥವಾ ದಾಖಲಾದ ದೂರಿನನ್ವಯ ಕಾರ್ಯನಿರ್ವಹಿಸದೇ ಇರಬಹುದು ಎಂದು ಅಂದುಕೊಳ್ಳಲಾಗುತ್ತಿದೆ.