ನೆರೆ ಮನೆಯ ಮಹಿಳೆಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಕಾಶಿ

0
1000

ಮಡಿಕೇರಿ : ಕ್ಷುಲಕ್ಕ ವಿಚಾರಕ್ಕಾಗಿ ಮಡಿಕೇರಿ ಸಮೀಪ ಕಾಲೂರು ಗ್ರಾಮದಲ್ಲಿ ಚೆನ್ನಪ್ಪಂಡ ಲಲಿತ ಯಾನೆ ಚೊಂದಮ್ಮ ಎಂಬ ಮಹಿಳೆಯನ್ನು ಕೋವಿಯಿಂದ ಗುಂಡಿಟ್ಟು ಕೊಂದು ಬಳಿಕ ಆದೇ ಕೋವಿಯಿಂದ ತನ್ನ ಮುಖದ ಭಾಗಕ್ಕೆ ಗುಂಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಕಾಶಿ ಯಾನೆ ಧರ್ಮರಾಯ.
ಘಟನೆಗೆ ಏನು ಕಾರಣ ಎಂಬುದನ್ನು ಮುಂದಿನ ತನಿಖೆಯಿಂದ ತಿಳಿಯ ಬೇಕಿದೆ. ಗ್ರಾಮಾಂತರ ಪೋಲಿಸರು ಪ್ರಕರಣವನ್ನು ದಾಖಲಿಸಿ ಕ್ರಮಕ್ಯೆಗೊಂಡಿದ್ದಾರೆ.
‌ಇತ್ತೀಚಿಗೆ ಅಣ್ಣ ಮತ್ತು ಅತ್ತಿಗೆಯನ್ನು ಗುಂಡು ಹೊಡೆದು ಕೊಂದು ತಾನು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡದಿದ್ದು ಜಿಲ್ಲೆಯ ಜನತೆಯನ್ನು ಕೆಂಗಡಿಸಿದೆ.ಆಸ್ತಿ ಅಂತಸ್ತಿನ ವಿಚಾರದಲ್ಲಿ ಪರಸ್ಪರ ಕಚ್ಚಾಟ,ಹತ್ಯೆಗಳು ಕೊಡಗಿನಲ್ಲಿ ಸಾಮಾನ್ಯ ಎಂಬ ರೀತಿಯಲ್ಲಿ ನಡೆಯುತ್ತಿದೆ. ಕೆಲವೊಮ್ಮೆ ಸಣ್ಣಪುಟ್ಟ ವಿಚಾರಗಳು ಬೀಕರ ಹತ್ಯೆಗಳಿಗೆ ಕಾರಣ ವಾಗಿದೆ. ಇಂತಹ ಘಟನೆಗಳು ಇನ್ನೊಂದು ನಡೆಯದಂತೆ ತಡೆಯಲು.ಸಂಭಂದ ಪಟ್ಟ ಇಲಾಖೆ,ಹಾಗೂ ಕುಟುಂಬಸ್ತರುಗಳು ಇತ್ಯರ್ಥ ಗಳನ್ನು ಮಾಡಲು ತಯಾರಾಗಬೇಕು.