ನ್ಯಾ. ಲೋಯಾ ಪ್ರಕರಣ: ಸುಪ್ರೀಂ ನಲ್ಲಿ ಒಂದು ಹಾಜರಾತಿಗೆ ನ್ಯಾಯವಾದಿ ಮುಕುಲ್ ರೋಹಟಗಿ ಪಡೆದ ಮೊತ್ತವೆಷ್ಟು ಗೊತ್ತೇ?

0
208

ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ನ್ಯಾಯಾಧೀಶ ಬಿ.ಎಚ್.ಲೋಯಾ ಪ್ರಕರಣ ವಿಚಾರಣೆಗೆ ಸಂಬಂಧಿಸಿ ಮಹಾರಾಷ್ಟ್ರ ಸರಕಾರವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೊಹ್ಟಗಿ ಗೆ ಮಹಾರಾಷ್ಟ್ರ ಸರಕಾರ 1.21 ಕೋಟಿ ರೂ. ಪಾವತಿಸಲು ನಿರ್ಧರಿಸಿದೆ ಎಂದು ಆರ್ ಟಿ ಐ ಬಹಿರಂಗಪಡಿಸಿದೆ.
ಮಹಾರಾಷ್ಟ್ರ ಸರಕಾರವು ಭಾರತದ ಮಾಜಿ ಸಾಲಿಸಿಟರ್ ಜನರಲ್ ಮತ್ತು ಹಿರಿಯ ವಕೀಲ ಹರೀಶ್ ಸಾಲ್ವೆ ಅವರೊಂದಿಗೆ ವಿಶೇಷ ಪ್ರಾಸಿಕ್ಯೂಟರ್ ಆಗಿ ಭಾರತದ ಮಾಜಿ ಅಟಾರ್ನಿ ಜನರಲ್ ರೊಹ್ಟಗಿ ಅವರನ್ನು ನೇಮಕ ಮಾಡಿತ್ತು ಎಂದು ಆರ್ ಟಿ ಐ ಕಾರ್ಯಕರ್ತ ಜತಿನ್ ದೇಸಾಯಿ ಹೇಳಿದ್ದಾರೆ
ಮಹಾರಾಷ್ಟ್ರದ ಪ್ರತಿನಿಧಿಯಾಗಿ ರೋಹಟಗಿ ಸುಪ್ರೀಂ ಕೋರ್ಟ್ ಗೆ 11 ಬಾರಿ ಹಾಜರಾಗಿದ್ದರು. ರಾಜ್ಯ ಸರ್ಕಾರವು ಒಂದು ಹಾಜರಾತಿಗೆ 11 ಲಕ್ಷ ರೂ. ವೃತ್ತಿಪರ ಶುಲ್ಕವಾಗಿ ಅನುಮೋದಿಸಿದೆ ಎಂದು ಅವರು ಹೇಳಿದರು.
ಸಾಲ್ವೆಗೆ ಪಾವತಿಸಿದ ವೃತ್ತಿಪರ ಶುಲ್ಕದ ಬಗ್ಗೆ ಮಾಹಿತಿಯನ್ನು ಆರ್ ಟಿ ಐ ಅಡಿಯಲ್ಲಿ ಇನ್ನೂ ರಾಜ್ಯ ಸರಕಾರ ಒದಗಿಸಿಲ್ಲ ಎಂದು ದೇಸಾಯಿ ಹೇಳಿದರು.
ರೋಹಟಗಿಗೆ ಅನುಮೋದಿತ ಸಂಭಾವನೆಯ ಬಗ್ಗೆ ಮಾತ್ರ ಮೊದಲ ಮನವಿಯಲ್ಲಿ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಸಾಲ್ವೆಗೆ ಪಾವತಿಸಲಾದ ಮೊತ್ತದ ಬಗ್ಗೆ ವಿವರವನ್ನು ಕೋರಿ ಮನವಿ ಸಲ್ಲಿಸಲು ನಾನು ಯೋಚಿಸುತ್ತಿದ್ದೇನೆ ” ಎಂದು ದೇಸಾಯಿ ಹೇಳಿದರು.

LEAVE A REPLY

Please enter your comment!
Please enter your name here