ಪಾಯಲ್ ರಿಂದ ವಿಚ್ಛೇದನ ಕೋರಿದ ಉಮರ್ ಅಬ್ದುಲ್ಲ

0
897

ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ಅವರ ವಿಚ್ಛೇದನ ಅರ್ಜಿಯ ಬಗ್ಗೆ ಏಪ್ರಿಲ್ 23 ರ ಒಳಗೆ ಉತ್ತರಿಸುವಂತೆ ದೆಹಲಿ ಹೈಕೋರ್ಟು ಅವರ ಪತ್ನಿ ಪಾಯಲ್ ನಾಥ್ ರಿಗೆ ಸೂಚಿಸಿದೆ. ಅಲ್ಲದೆ ಶೀಘ್ರ ಈ ಅರ್ಜಿಯನ್ನು ಇತ್ಯರ್ಥಪಡಿಸಬೇಕೆಂಬ ಉಮರ್ ಅಬ್ದುಲ್ಲ ಅವರ ಮನವಿಯ ಕುರಿತೂ ಪಾಯಲ್ ರಿಂದ ಅಭಿಪ್ರಾಯವನ್ನು ಅಪೇಕ್ಷಿಸಿದೆ. ಈ ಮೊದಲು 2016 ಆಗಸ್ಟ್ 30 ರಂದು ಕೆಳನ್ಯಾಯಾಲಯ ಉಮರ್ ಅಬ್ದುಲ್ಲ ಅವರ ವಿಚ್ಚೇದನಾ ಅರ್ಜಿಯನ್ನು ತಿರಸ್ಕರಿಸಿತ್ತು. ಮರು ಜೋಡಿಸಲಾಗದ ಹಂತಕ್ಕೆ ತಮ್ಮ ಸಂಬಂಧ ತಲುಪಿದೆ ಎಂದವರು ಹೇಳಿರುವುದನ್ನು ರುಜುವಾತು ಪಡಿಸುವಂತೆ ಕೋರ್ಟು ಸೂಚಿಸಿತ್ತು. ಉಮರ್ ಮತ್ತು ಪಾಯಲ್ ಅವರು 2009 ರಿಂದ ಪ್ರತ್ಯೇಕವಾಗಿಯೇ ಬದುಕುತ್ತಿದ್ದಾರೆ.
ಭಾರತೀಯ ಮಿಲಿಟರಿಯ ನಿವೃತ್ತ ಮೇಜರ್ ಜನರಲ್ ರಾಮನಾಥ್ ಮಗಳಾದ ಪಾಯಲ್ ಜೊತೆಗೆ 1994 ರಲ್ಲಿ ಉಮರ್ ಅಬ್ದುಲ್ಲ ವಿವಾಹವಾಗಿದ್ದರು. ಝಮೀರ್ ಮತ್ತು ಜಾಹಿರ್ ಎಂಬಿಬ್ಬರು ಗಂಡು ಮಕ್ಕಳು ಅವರಿಗಿವೆ. ದೆಹಲಿಯ ಒಬೆರಾಯ್ ಹೋಟೆಲ್ ನಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿದ್ದ ವೇಳೆ ಅವರಿಬ್ಬರ ನಡುವೆ ಬಾಂಧವ್ಯ ಬೆಳೆದು ಬಳಿಕ ವಿವಾಹ ನಡೆದಿತ್ತು. ಇದೀಗ ಉಮರ್ ಅಬ್ದುಲ್ಲ ಅವರು NDTV ಪತ್ರಕರ್ತೆ, ನಿರೂಪಕಿ ನಿಧಿ ರಾಜ್ ದಾನ್ ಅವರೊಂದಿಗೆ ಗೆಳೆತನದಲ್ಲಿದ್ದು ,ಮದುವೆಯಾಗಲಿದ್ದಾರೆ ಎಂಬ ವದಂತಿ ಇದೆ. ನಿಧಿ ಕೂಡ ವಿಚ್ಛೇದಿತೆ.