ಪಿ ಎಚ್ ಡಿ ಪ್ರಬಂಧದಲ್ಲಿ ಸಯ್ಯದ್ ಕುತುಬ್ ಉಲ್ಲೇಖ: ಈಜಿಪ್ಟ್ ನ ಅಲ್ ಅಝರ್ ಗ್ರಾಂಡ್ ಮುಫ್ತಿಯಿಂದ ಟೀಕೆ

0
304
Image processed by CodeCarvings Piczard ### FREE Community Edition ### on 2018-06-25 12:42:28Z | http://piczard.com | http://codecarvings.com¯ÿâšù‹U

ಪಿ ಎಚ್ ಡಿ ಸಂಶೋಧನೆಯ ಉಲ್ಲೇಖವಾಗಿ, ಮುಸ್ಲಿಂ ಬ್ರದರ್ ಹುಡ್ ನ ಸ್ಥಾಪಕ ಸಯ್ಯದ್ ಕುತುಬ್ ಅವರ ಬರಹಗಳನ್ನು ಬಳಸಿದ್ದಕ್ಕಾಗಿ ಈಜಿಪ್ಟ್ ನ ಅಲ್ ಅಝರ್ ಗ್ರಾಂಡ್ ಮುಫ್ತಿ, ಶೌಕಿ ಅಲಮ್ ಅವರು ಅಲ್-ಅಝರ್ ಸಂಶೋಧಕನನ್ನು ಟೀಕಿಸಿದ್ದಾರೆ.
ಪಿ ಎಚ್ ಡಿ ಸಂಶೋಧನೆಯ ಕುರಿಯು ಔಪಚಾರಿಕವಾಗಿ ಪರೀಕ್ಷೆ ನಡೆಸುತ್ತಿದ್ದಾಗ, ಕೆಲವು ಅಲ್-ಅಝರ್ ವಿದ್ವಾಂಸರು ಕೆಲವು ಉಗ್ರಗಾಮಿಗಳ ಬರಹಗಳ ಮೇಲೆ ಅವಲಂಬಿತರಾಗಿದ್ದಾರೆ ಮತ್ತು ಅವರ ಸಂಶೋಧನೆಗಳಲ್ಲಿ ಅವುಗಳನ್ನು ಉಲ್ಲೇಖಿಸುತ್ತಾರೆ ಎಂದು ಅಲಮ್ ಟೀಕಿಸಿದರು. ಅಂತಹ ಕ್ರಮವು ಇಸ್ಲಾಂನ ಚಿತ್ರವನ್ನು ವಿರೂಪಗೊಳಿಸುತ್ತದೆ ಮತ್ತು ಬೌದ್ಧಿಕ ಉಗ್ರಗಾಮಿತ್ವಕ್ಕೆ ದಾರಿ ಮಾಡಿಕೊಡುತ್ತದೆ ಎಂದವರು ಹರಿಹಾಯ್ದಿದ್ದಾರೆ.
ಧಾರ್ಮಿಕ ಸಮಿತಿಯ ಶೌಕ್ರಿ ಅಲ್ ಜಿಂದಿ ಅವರು ಅಲ್ ಅಝರ್ ಅಲ್ ಶರೀಫ್ ,ಈಜಿಪ್ಟ್ ನ ಪ್ರಮುಖ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಮತ್ತು ಧಾರ್ಮಿಕ ವ್ಯವಹಾರಗಳ ಸಚಿವಾಲಯಗಳ ಸಭೆ ಕರೆದು ಉಗ್ರಗಾಮಿತ್ವದ ವಿರುದ್ಧ ಇಸ್ಲಾಮಿನ ಉನ್ನತ ತತ್ವಗಳಾದ ಸಮಾನತೆ, ದಯೆ ಮತ್ತು ನ್ಯಾಯಗಳೊಂದಿಗೆ ಹೋರಾಡಬೇಕಾಗಿದೆ ಎಂದು ಕರೆ ನೀಡಿದರೆಂದು ಮಾಧ್ಯಮಗಳು ವರದಿ ಮಾಡಿವೆ.
2014 ರಲ್ಲಿ ತನ್ನ ಪುಸ್ತಕಗಳಿಂದ ಉಗ್ರಗಾಮಿ ಆಲೋಚನೆಗಳನ್ನು ತೆಗೆದುಹಾಕುವ ಕೆಲಸ ಮಾಡಿದ ನಂತರ ಅಲ್-ಅಝರ್ ಪುಸ್ತಕಗಳು ಉಗ್ರಗಾಮಿ ಪರಿಕಲ್ಪನೆಗಳನ್ನು ಹೊಂದಿಲ್ಲವೆಂದು ಅಲ್-ಅಝರ್ ನೇಮಿಸಿದ ಸಮಿತಿಯು ಖಾತ್ರಿಪಡಿಸಿದೆ ಎಂದು ಸಂಸತ್ತಿನ ಧಾರ್ಮಿಕ ವ್ಯವಹಾರಗಳ ಮತ್ತು ದತ್ತಿ ಸಮಿತಿಯ ಕಾರ್ಯದರ್ಶಿ ಒಮರ್ ಹಮ್ರೌಶ್ ದೃಢಪಡಿಸಿದರು.
ಅಧ್ಯಕ್ಷ ಅಬ್ದುಲ್ ಫತಾಹ್ ಅಲ್ ಸಿಸ್ಸಿ ತಮ್ಮ ಭಾಷಣಗಳಲ್ಲಿ ಧಾರ್ಮಿಕ ಪ್ರವಚನವನ್ನು ಸುಧಾರಿಸುವ ಪ್ರಾಮುಖ್ಯತೆಯನ್ನು ಪುನರಾವರ್ತಿತವಾಗಿ ದ್ರಢ ಪಡಿಸಿದ್ದಾರೆ. ಜುಲೈ 2013 ರಲ್ಲಿ ಮುಸ್ಲಿಂ ಬ್ರದರ್ಹುಡ್ ಸಂಘಟನೆಯನ್ನು ಭಯೋತ್ಪಾದಕ ಗುಂಪು ಎಂದು ಸಿಸಿ ಗುರುತಿಸಿದ್ದಾರೆ. ಮುರ್ಸಿ ಅವರ ಪದಚ್ಯುತಿಯ ನಂತರ ಅಲ್-ನಹ್ದಾ ಮತ್ತು ರಬಾ ಅಲ್-ಅದಾವೇಯ ಚೌಕಗಳಲ್ಲಿನ ಮುರ್ಸಿ-ಪರ ಪ್ರತಿಭಟನೆಯ ಸಮಯದಲ್ಲಿ ನೂರಾರು ಮುರ್ಸಿ ಬೆಂಬಲಿಗರು ತಮ್ಮ ಪ್ರಾಣ ಕಳೆದುಕೊಂಡಿದ್ದರು.