ಪ್ರಕರಣಗಳ ಹಿಂತೆಗೆತ: ಮುಖ್ಯಮಂತ್ರಿ ಸೂಚನೆ

0
434

ಬೆಂಗಳೂರು; ಕೋಮು ಗಲಭೆ ಹಾಗೂ ಇತರೆ ಪ್ರಕರಣಗಳಲ್ಲಿ ಅಲ್ಪ ಸಂಖ್ಯಾತರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಮಾತ್ರವಲ್ಲ. ಕನ್ನಡಪರ ಸಂಘಟನೆಗಳ ಹೋರಾಟಗಾರರು, ರೈತರು ಹಾಗೂ ಇತರರ ವಿರುದ್ಧ ದಾಖಲಾಗಿರುವ ಕೇಸುಗಳನ್ನೂ ಕೈ ಬಿಡುವ ಬಗ್ಗೆ ಆಲೋಚಿಸಲಾಗುತ್ತಿದೆ.

ಆದರೆ, ಈ ವಿಷಯದಲ್ಲಿ ಗೃಹ ಇಲಾಖೆಯ ಅಭಿಪ್ರಾಯ ಪಡೆದು ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.