ಪ್ರಧಾನಿಯ ಪ್ರಯಾಣದ ವಿವರಗಳನ್ನು ಮುಚ್ಚಿಡುವಂತಿಲ್ಲ – ಮಾಹಿತಿ ಹಕ್ಕು ಆಯೋಗ 

0
385

ನವದೆಹಲಿ: ಪ್ರಧಾನಮಂತ್ರಿಯವರ ವಿದೇಶ ಪ್ರಯಾಣದ ಖರ್ಚುವೆಚ್ಚದ ಕುರಿತ ವಿವರಗಳನ್ನು ಬಹಿರಂಗ ಪಡಿಸಬೇಕೆಂದು ಮಾಹಿತಿ ಹಕ್ಕು ಆಯೋಗ ಆಗ್ರಹಿಸಿದೆ. ಪ್ರಧಾನಿಗಳ ಪ್ರಯಾಣಕ್ಕೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸಲು ಸಾದ್ಯವಿಲ್ಲ ಎಂದು ಏರ್ ಇಂಡಿಯಾದ ಸಾರ್ವಜನಿಕ  ಮಾಹಿತಿ ಅಧಿಕಾರಿಗಳು ತಿಳಿಸಿದ್ದರು.  ಅದನ್ನು ತಳ್ಳಿ ಹಾಕಿದ ಮಾಹಿತಿ ಹಕ್ಕು ಆಯೋಗ ಈ ವಿಚಾರವನ್ನು ಸ್ಪಷ್ಟ ಪಡಿಸಿದೆ.
ಸಾರ್ವಜನಿಕರ ಖಜಾನೆಯಿಂದ ಹಣವನ್ನು ಪ್ರಧಾನಮಂತ್ರಿಗಳು ವಿದೇಶ ಪ್ರಯಾಣಕ್ಕೆ ಬಳಸುತ್ತಿದ್ದಾರೆ. ಆದ್ದರಿಂದ ಅವರ ಪ್ರಯಾಣದ ವೆಚ್ಚದ ಲೆಕ್ಕಾಚಾರವನ್ನು ಸಾರ್ವಜನಿಕರಿಗೆ ಕೇಳುವ ಹಕ್ಕು ಇದೆ.
ಆದರೆ ಪ್ರಧಾನ ಮಂತ್ರಿಗಳು ಸಂದರ್ಶಿಸಿದ ಸ್ಥಳಗಳು, ಪ್ರಯಾಣಿಸಿದ ತಾರೀಕುಗಳು, ವ್ಯಯಿಸಿದ ಸಮಯ ಬಹಿರಂಗ ಪಡಿಸಲು ಸಾದ್ಯವಿಲ್ಲ ಎಂದು ಮಾಹಿತಿ ಹಕ್ಕು ಆಯೋಗದ ಸದಸ್ಯ ಅಮಿತಾವ್ ಭಟ್ಟಾಚಾರ್ಯ ತಿಳಿಸಿದ್ದಾರೆ.  ಆದರೂ ಪ್ರದಾನಮಂತ್ರಿಗಳು ಪ್ರಯಾಣಿಸಿದ ಸ್ಥಳಗಳ ಸಮಯಗಳ ಕುರಿತು ಮಾದ್ಯಮಗಳು ಬಿಡುಗಡೆಗೊಳಿಸಿದ ವಿವರಗಳನ್ನು ಬಹಿರಂಗಪಡಿಸಬಹುದು ಎಂದೂ ಅವರು ಹೇಳಿದರು.
ಲೊಕೇಶ್ ಭಾತ್ರಾ ಎಂಬವರು ಮಾಹಿತಿ ಹಕ್ಕು ಆಯೋಗದ ಕಾನೂನಿನನ್ವಯ 2016-2017 ವರ್ಷಗಳಲ್ಲಿ ಪ್ರದಾನಿಗಳು ನಡೆಸಿದ ವಿದೇಶ ಪ್ರಯಾಣದ ವಿವರಗಳು, ಸ್ಥಳಗಳು, ದಿನಗಳು, ವ್ಯಯವಾದ ಸಮಯಗಳು, ಖರ್ಚುವೆಚ್ಚಗಳು ಮುಂತಾದ ವಿವರಗಳ ಮಾಹಿತಿಯನ್ನು ಕೇಳಲಾಗಿತ್ತು.
ಲೋಕೇಶ್ ಬಾತ್ರಾ ರವರು ಪ್ರಯಾಣದ ವೆಚ್ಚಗಳ ವಿವರಗಳನ್ನು ಕೇಳಿದ್ದಕ್ಕೆ ಏರ್ ಇಂಡಿಯಾ ಹೇಳುತ್ತಿರುವ  ಕಾರಣ ನ್ಯಾಯಯುತವಾಗಿಲ್ಲವೆಂದು ಭಟ್ಟಾಚಾರ್ಯ ಹೇಳಿದರು. ಪ್ರಧಾನಮಂತ್ರಿಗಳ ಪ್ರಯಾಣಕ್ಕೆ ಸಂಬಂಧಿಸಿದ ವಿವರಗಳ ರಹಸ್ಯವನ್ನು ಕಾಪಾಡುವುದು ಕಂಪೆನಿಯ ಕರ್ತವ್ಯವೆಂದು ಏರ್ ಇಂಡಿಯಾ ಹೇಳಿದೆ.