ಪ್ರಧಾನಿ ಮೋದಿಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡ ನೀಡಿದ ಉಡುಗೊರೆ ಏನು ಗೊತ್ತೇ?

0
109

ನ್ಯೂಸ್ ಕನ್ನಡ ವರದಿ-(27.07.17): ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಲಂಡನ್ ನಲ್ಲಿ ನಡೆದ ಮಹಿಳಾ ಕ್ರಿಕೆಟ್ ವಿಶ್ವಕಪ್ ಪಂದ್ಯಾಟದಲ್ಲಿ ಫೈನಲ್ ಹಂತಕ್ಕೆ ತೆರಳಿ ಉತ್ತಮ ಸಾಧನೆಗೈದಿತ್ತು. ಇವರ ಈ ಸಾಧನೆಗೆ ಹಲವು ಪ್ರಶಸ್ತಿಗಳು, ಬಹುಮಾನಗಳು ಸಂದಿತ್ತು. ಇದೀಗ ದೆಹಲಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಮಾಲೋಚನೆಯಲ್ಲಿ ಭಾಗಿಯಾದರು. ಈ ವೇಳೆ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಪ್ರಧಾನಿಗೆ ತಮ್ಮ ಹಸ್ತಾಕ್ಷರವಿರುವ ಕ್ರಿಕೆಟ್ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಮಹಿಳೆಯರು ಕ್ರಿಕೆಟ್ ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅವರು ಫೈನಲ್ ನಲ್ಲಿ ಸೋತಿಲ್ಲ. ಅವರ ಸೋಲನ್ನೆಲ್ಲಾ ಭಾರತದ 125ಕೋಟಿ ನಾಗರಿಕರು ತಮ್ಮ ಹೆಗಲಲ್ಲಿ ಹೊತ್ತುಕೊಂಡು ಸಮಾಧಾನಪಡಿಸಿದ್ದಾರೆ. ಇವರ ಸಾಧನೆಯು ನಮಗೆಲ್ಲಾ ಹೆಮ್ಮೆ ಎಂದರು. ಫೈನಲ್ ನಲ್ಲಿ ಸಂದರ್ಭದಲ್ಲಿ ನರೇಂದ್ರ ಮೋದಿ ಪ್ರತಿಯೊಬ್ಬ ಆಟಗಾರ್ತಿಯ ಹೆಸರೆತ್ತಿ ಶುಭಾಷಯ ಸಲ್ಲಿಸಿದ್ದರು.