ಫಾ. ಅಂಬ್ರೋಸ್ ಪಿಂಟೋ ವಿಧಿವಶ

0
495

ಬೆಂಗಳೂರು: ಬೆಂಗಳೂರಿನ ಖ್ಯಾತ ಕ್ರೈಸ್ತ ಧರ್ಮಗುರು ಹಾಗೂ ಸಾಮಾಜಿಕ ಕಾರ್ಯಕರ್ತ ಫಾ. ಆಂಬ್ರೋಸ್ ಪಿಂಟೋ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.

ಕೆಲಕಾಲದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಫಾ. ಪಿಂಟೋ ಇಂದು ಬೆಳಗ್ಗೆ ನಗರದ ಮಲ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್ ದೆಹಲಿಯ ನಿರ್ದೇಶಕರಾಗಿ, ಬೆಂಗಳೂರಿನ ಸೈಂಟ್ ಜೋಸೆಫ್ ಹಾಗೂ ಸೈಂಟ್ ಅಲೋಶಿಯಸ್ ಕಾಲೇಜುಗಳ ಪ್ರಾಂಶುಪಾಲರಾಗಿ ಅವರು ಸೇವೆ ಸಲ್ಲಿಸಿದ್ದರು.

ಜೊತೆಗೆ ಹಲವಾರು ಸಾಮಾಜಿಕ ಸಂಘ ಸಂಸ್ಥೆಗಳೊಂದಿಗೆ ಸೇರಿ ಬಡವರ ಹಾಗೂ ಹಿಂದುಳಿದವ ಏಳಿಗೆಗಾಗಿ ಶ್ರಮಿಸಿದ್ದಾರೆ.

ಸಮಾಜದಲ್ಲಿ ಧಾರ್ಮಿಕ ಸೌಹಾರ್ದ ಬಲಪಡಿಸುವ ನಿಟ್ಟಿನಲ್ಲೂ ಫಾ. ಪಿಂಟೋ ಬಹಳವಾಗಿ ಶ್ರಮಿಸಿದ್ದಾರೆ.

ನಾಳೆ ಜ.4 ಕ್ಕೆ ಬೆಂಗಳೂರಿನ ಮ್ಯೂಸಿಯಮ್ ರಸ್ತೆಯಲ್ಲಿರುವ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಬೆಳಗ್ಗೆ 10.30 ಕ್ಕೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಬನ್ನೇರುಘಟ್ಟ ರಸ್ತೆಯ ಮೌಂಟ್ ಸೈಂಟ್ ಜೋಸೆಫ್ ನಲ್ಲಿ ಅಂತ್ಯಕ್ರಿಯೆ‌ ನೆರವೇರಲಿದೆ.