ಫೆಲೆಸ್ತೀನಿಯರಿಗೆ ಗಾಂಧಿ ಬೇಕಂತೆ

0
464

ನ್ಯೂಸ್ ಡೆಸ್ಕ್
ಇಸ್ರೇಲಿನ ಅತಿಕ್ರಮಣ ಯೋಜನೆಯೊಂದಿಗೆ ಝಿಯೋನಿಸ್ಟರು ಫೆಲಸ್ತೀನಿನಲ್ಲಿ ಸಕ್ರಿಯವಾಗಿ ಎಷ್ಟು ಕಾಲವಾಯಿತು? ಜಾಗತಿಕವಾಗಿ ಎಷ್ಟೆಲ್ಲ  ನಾಯಕರು ಆಗಿ ಹೋದರು? ಆದರೆ ಫೆಲಸ್ತೀನಿ ಯರ ಕಣ್ಣೀರ ಕತೆ ಮುಗಿಯಿತೇ? ಬಾಲ್ಫರ್ ಘೋಷಿಸಿದ್ದು ಅಕ್ರಮರಹಿತ ಇಸ್ರೇಲಿನ ರಚನೆ.  ಒಬ್ಬನೇ ಒಬ್ಬ ಮುಸ್ಲಿಮನಿಗೆ ಏನೇನೂ ಹಾನಿ ಯಾಗದಂತೆ ಪ್ರಪಂಚಾದ್ಯಂತ ಚದುರಿ ಹೋದ ಯಹೂದಿಯರಿಗೆ ಇಸ್ರೇಲ್ ರಾಷ್ಟ್ರ ಸ್ಥಾಪನೆ.  ಇಂಗ್ಲೆಂಡಿನಲ್ಲಿ ಕೂತ ಬಾಲ್ಫರ್‍ಗೆ ಯಹೂದಿಗಳಿ ಗೊಂದು ರಾಷ್ಟ್ರವಾಗಿ ವೇಲ್ಸೊ, ಹತ್ತಿರದ ಸ್ಕಾಟ್‍ಲೆಂಡೊ ಕಣ್ಣಿಗೆ ಬೀಳಲಿಲ್ಲ. ಇಸ್ಲಾಮೀ  ಇತಿಹಾಸದ ಮಹತ್ವದ ಭೂಮಿ ಅಥವಾ ಸೆಮೆಟಿಕ್ ಘಟನೆಗಳ ಪವಿತ್ರ ಭೂಮಿ ಫೆಲಸ್ತೀನ್, ಜೆರುಸಲೇಂಗಳೇ ಕಂಡಿತು. ಇನ್ನೊಬ್ಬರ ಭೂಮಿ  ಹೋದರೆ ತನಗೇನು ಎಂದು ಬಾಲ್ಫರನಿಗೆ ಅನಿ ಸಿರಬೇಕು

ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಆರ್ಥರ್ ಜೇಮ್ಸ್ ಬಾಲ್ಫೋರ್

ಇಂದು ಇಂಗ್ಲೆಂಡಿನಲ್ಲಿ ಯಹೂದಿಯ ರಿಗೆ ಒಂದು ನಾಡು ಕೊಡುತ್ತೇವೆ  ಎಂದರೆ ಅಲ್ಲಿನ ನಿವಾಸಿಗಳು ಏನು ಮಾಡಿಯಾರು? ಇಂಗ್ಲೆಂಡಿನ ಇಂದಿನ ಪ್ರಧಾನಿ ತೆರೆಸಾ ಮೇ ನಿರಾಶ್ರಿತರಿಗೆ ಒಂದಿಷ್ಟು ಜಾಗ ಕೊಟ್ಟರೂ  ಜಾಗ್ರತೆ ಎಂದು ಉರಿದೇಳುವವರು ಇಂಗ್ಲೆಡಿಗರು. ಅಂಥಾದ್ದರಲ್ಲಿ ಬ್ರಿಟನ್‍ನಲ್ಲಿ ಫೆಲೆಸ್ತೀನ್ ಅಥವಾ ಯಹೂದಿಯರಿಗೆ ದೇಶ  ಕೊಡುತ್ತೇನೆಂದರೆ ಬ್ರಿಟನ್ ಉರಿದು ಬಿಡಬಹುದು.
ಆದರೆ, ಅಂದು ಇಂಗ್ಲೆಂಡ್‍ನಲ್ಲಿ ಕೂತು ಫೆಲೆಸ್ತೀನ್‍ನಲ್ಲಿ ಇಸ್ರೇಲನ್ನು ಹುಟ್ಟು ಹಾಕಿದ್ದಾಗ ಫೆಲೆಸ್ತೀನ್‍ನಲ್ಲಿ ಇದೇ ಆಗಿದ್ದು. ಫೆಲಸ್ತೀನಿಯರಿಗೆ  ತಮ್ಮ ಭೂಮಿಯನ್ನು ಯಾರೋ ಕಸಿದುಕೊಳ್ಳು ತ್ತಿದ್ದಾರೆ ಎಂದು ಅನಿಸತೊಡಗಿದೆ. ಅವರು ಹೋರಾಟಕ್ಕಿಳಿದರು. ಬಾಲ್ಫರ್ ಘೋಷಣೆಗೆ  ನೂರೊಂದು ವರ್ಷವಾಯಿತು. ಎ ನ್ಯಾಶನಲ್ ಹೋಮ್ ಫಾರ್‍ದ ಜೆವಿಶ್ ಪೀಪಲ್ ಇನ್ ಫೆಲಸ್ಟೈನ್ ಎಂದು ಬಾಲ್ಫರ್ ಘೋಷಿಸಿದ.  ಅಲ್ಲಿಂದ ಶುರವಾಗಿದೆ ಫೆಲೆಸ್ತೀನಿಯರ ದಮನ ಕತೆ. ಇದರಿಂದ ಇಂಗ್ಲೆಂಡಿನಲ್ಲಿದ್ದ ಬಾಲ್ಫರ್‍ಗಾಗಲಿ ಇಂಗ್ಲೆಂಡಿಗರಿಗಾಗಲಿ ಏನೂ ಹಾನಿ ಯಾಗಲಿಲ್ಲ. ಬಾಲ್ಫರ್ ಸತ್ತು ಮಣ್ಣಾದ. ಯಾವುದೋ ಗುಂಡೇಟು ತಿಂದು ಸತ್ತದ್ದಲ್ಲ. ಸಹಜ ಸಾವು. ಆದರೆ ಫೆಲಸ್ತೀನಿನಲ್ಲಿ ಬಾಲ್ಫರ್  ಪ್ರಚೋದಿತ ಝಿಯೊನಿಸ್ಟ್ ಸೈನಿಕರು ಪ್ರತಿದಿನ ಬಂದೂಕನ್ನು ಆಟಿಕೆಯಂತೆ ಬಳಸಿ ಫೆಲಸ್ತೀನಿಯರನ್ನು ಕೊಲ್ಲುತ್ತಿ ದ್ದಾರೆ. ಫೆಲೆಸ್ತೀನ್  ವಿರುದ್ಧದ ಝಿಯೋನಿಸ್ಟ್ ಪೋಲೀಸರ ಒಂದೊಂದು ಗುಂಡು ಮಿತ್ರರಾದ ಅಮೆರಿಕಾದಿಗಳ ಶವ ಕುಟೀರಕ್ಕೆ ಬಡಿಯುತ್ತಲೇ ಇರಬಹುದು.  ಆದ್ದರಿಂದ ಸತ್ತ ಮೇಲೆಯೂ ನೋವು ಅನುಭವಿಸಬೇಕಾದ ದುರ್ದೈವಿಗಳೆಂದು ಇವರನ್ನು ಕರೆಯಬಹುದು.

ಪ್ಯಾಲೇಸ್ಟಿನಿಯನ್ ಹದಿಹರೆಯದವರನ್ನು ಇಸ್ರೇಲಿ ಭದ್ರತಾ ಪಡೆಗಳು ಗುಂಡಿಕ್ಕಿ ಕೊಲ್ಲುವ ದೃಶ್ಯ

ವಿಷಯಕ್ಕೆ ಬರೋಣ. ಇಸ್ರೇಲಿನ  ಕೆಲವರು ಇಸ್ರೇಲಿನಲ್ಲೇ ಕೂತು ಫೆಲಸ್ತೀನಿಯರಿಗೆ ಒಬ್ಬ ಮಹಾತ್ಮಗಾಂಧಿ ಇದ್ದಿದ್ದರೆ ಸಮಸ್ಯೆ ಪರಿಹಾರ  ಆಗುತ್ತಿತ್ತು ಎಂದು ಹೇಳುತ್ತಿದ್ದಾರೆ. ಅಂದರೆ ಇಸ್ರೇಲಿಗರಿಗೆ ಝಿಯೋನಿಸ್ಟ್ ಪೊಲೀಸರ ದೌರ್ಜನ್ಯ ಅಸಹನೀಯ ಎಂದನಿಸುತ್ತಿರಬಹುದು.  ಅಂಥ ಹಿಂಸೆ ಒದೆತ ಗುಂಡೇಟಿಗೆ ಫೆಲಸ್ತೀನಿಯರು ಎದೆಯೊಡ್ಡುತ್ತಾ ಬಂದಿದ್ದಾರೆ. ಕಳೆದ ಈಸ್ಟರ್ ಡೇಯಲ್ಲಿ ಮೂವತ್ತು ಸಾವಿರ ಮಂದಿ  ಶಾಂತವಾಗಿ ಪ್ರತಿಭಟನೆ ನಡೆಸಿದರು. ಫೆಲಸ್ತೀನಿಯರ ದಮನ, ಜೆರುಸಲೇಮ್‍ನ ಅತಿಕ್ರಮಣ, ಮಸ್ಚಿದುಲ್ ಅಕ್ಸಾ ವನ್ನು ಒಳಗೆ ಹಾಕುವ ಇಸ್ರೇಲಿನ ಯತ್ನಗಳನ್ನೆಲ್ಲ ಇವರು ಮೌನವಾಗಿ ಪ್ರತಿಭಟಿಸಿದರು. ಗಾಝಾ ಪಟ್ಟಿಯಲ್ಲಿ ಸೈನಿಕರು ಬೇಲಿಹಾಕಿ ನಿಂತಿರುವಲ್ಲಿ ಟೆಂಟ್ ಹಾಕುವುದು  ಇವರ ಉದ್ದೇಶವಾಗಿತ್ತು.
ಫೆಲಸ್ತೀನಿನ ಗಾಝಪಟ್ಟಿ ಜಗತ್ತಿನ ಅತಿದೊಡ್ಡ ತೆರೆದಿರಿಸಿದ ಜೈಲು. ಅಲ್ಲಿನವರ ಸ್ವಾತಂತ್ರ್ಯಕ್ಕಾಗಿ ಅವರು ರ್ಯಾಲಿ ನಡೆಸಿದರು. ಅವರ ಹಿರಿಯರು  ಕಳಕೊಂಡ ಅವರ ಭೂಮಿಯನ್ನು ಇಸ್ರೇಲಿನಿಂದ ಪಡೆಯಬೇಕು ಎನ್ನುವುದು ಅವರ ಉದ್ದೇಶ. ಯಾಕೆಂದರೆ 1948ರಲ್ಲಿ ಇಸ್ರೇಲ್ ¸ಸ್ಥಾಪನೆಯ ದಂದಿನಿಂದ ಬಾಲ್ಫರ್ ಘೋಷಣೆಯ ಮೂವ ತ್ತೊಂದು ವರ್ಷದ ನಂತರ ಗಾಝಾದ ಜನಸಂಖ್ಯೆ ಯಲ್ಲಿ ಶೇ. 70ರಷ್ಟು  ಮಂದಿ ನಿರಾಶ್ರಿತರಾಗಿದ್ದಾರೆ. ಇವರೆಲ್ಲರ ಜಮೀನು ಇಸ್ರೇಲಿನ ವಶದಲ್ಲಿದೆ. ಇದರಲ್ಲಿ ಮುಸ್ಲಿಮರೂ ಕ್ರೈಸ್ತರೂ ಇದ್ದಾರೆ. ಬಾಲ್ಫರನಿಗೆ  ಯಾವುದೋ ರಾಜಕೀಯ ಅಜೆಂಡಾ ಇದ್ದಿರಬಹುದು. ಹೀಗಾಗಿ ಕ್ರೈಸ್ತರೊಂದಿಗೆ ಮುಸ್ಲಿಮರನ್ನೂ ಮುಸ್ಲಿಮರೊಂದಿಗೆ ಕ್ರೈಸ್ತರನ್ನೂ ಬಲಿ ಕೊಟ್ಟು ಇಸ್ರೇಲನ್ನು ಹುಟ್ಟುಹಾಕಿದನು.

ಫೆಲಸ್ತೀನಿಯರು ಗಾಝಾದ ಪೊಲೀಸ್ ಚೆಕ್ ಪೋಸ್ಟ್  ಬಳಿಗೆ ಶಾಂತಿಯುತ ರ್ಯಾಲಿ ಚಿತ್ರ

ಇವರಿಗೆ ತಮ್ಮ ಪೂರ್ವಜರ ಭೂಮಿ ಸಿಗಬೇಕಾಗಿದೆ. ಆದ್ದರಿಂದ ಮೂವತ್ತು ಸಾವಿರ ಫೆಲಸ್ತೀನಿಯರು ಗಾಝಾದ ಪೊಲೀಸ್ ಚೆಕ್ ಪೋಸ್ಟ್  ಬಳಿಗೆ ಶಾಂತಿಯುತ ರ್ಯಾಲಿ ಹೊರಟ್ಟಿ ದ್ದರು. ಬಹುಶಃ ಇಸ್ರೇಲನ್ನೇ ಒಪ್ಪದ ಗಾಂಧೀಜಿ, ಅದೇ ಗಾಂಧೀಜಿ ರೀತಿಯನ್ನು ಅಳವಡಿಸಿಕೊಂಡು  ಇಸ್ರೇಲನ್ನು ಮಣಿಸಬಹುದು ಅಥವಾ ಫೆಲಸ್ತೀನಿನ ಸಮಸ್ಯೆ ಪರಿಹಾರವಾಗಬಹುದೆಂದು ಅದೇ ಇಸ್ರೇಲಿನಲ್ಲಿ ಕೆಲವರು ಆಡಿಕೊಳ್ಳುತ್ತಿರುವುದು.  ಇದರ ಅರ್ಥ ಏನು?
ಗಾಂಧಿ ಇಸ್ರೇಲಿಗೂ ಬೇಕು. ಫೆಲಸ್ತೀನಿಗಳಿಗೂ ಅನಿವಾರ್ಯ. ಅದು ಕೂಡ ಗಾಂಧಿ ನಾಡಿನಲ್ಲಿ ಗೋಡ್ಸೆಗಳು ವಿಜೃಂಭಿಸುತ್ತಿರುವಾಗ  ಎನ್ನುವುದು ಒಂದು ಕುಚೋದ್ಯದ ವಿಷಯವಲ್ಲವೇ? ಇಂಗ್ಲೆಂಡಿನ ವಿದೇಶ ಕಾರ್ಯದರ್ಶಿ ಆರ್ಥ ಬಾಲ್ಫರನು ಆಗಿನ ಅಟ್ಟೊಮನ್ ¸ ಸಮ್ರಾಜ್ಯದಲ್ಲಿ ಇಸ್ರೇಲನ್ನು ಸ್ಥಾಪಿಸುವುದಾಗಿ ಘೋಷಿಸಿದನು. ಬ್ರಿಟಿಷ್ ಜ್ಯೂವಿಶ್ ಸಮುದಾಯಕ್ಕೆ ಒಂದು ದೇಶವನ್ನೇ ಕೊಡುವುದರ ಹಿಂದೆ  ತಾನು ರಾಜ ಕೀಯವಾಗಿ ಪ್ರಾಮುಖ್ಯ ಪಡೆಯುವ ಉದ್ದೇಶ ಬಾಲ್ಫರನದ್ದಾಗಿತ್ತು. ಗ್ರೇಟ್ ಬ್ರಿಟನ್ ಮತ್ತು ಆರ್ಯಲೆಂಡಿನ ಝಿಯೊನಿಸ್ಟ್  ಫೆಡರೇಶನನ್ನು ಒಲಿಸಿಕೊಂಡು ಚುನಾವಣೆಯಲ್ಲಿ ಗೆದ್ದು ಬರುವುದು. ಆತನ ಹಿಡನ್ ಅಜೆಂಡಾ ಆಗಿತ್ತು.  ಆದರೆ ಅದರಲ್ಲಿ ಆತ ಯಸಸ್ವಿಯಾಗಲಿಲ್ಲ ಎನ್ನುವುದು ವಿಷಾದದ ಸಂಗತಿ. ಯಾಕೆಂದರೆ 1930ರಲ್ಲಿ ಆತ ನಿಧನರಾದರು.
ಅವರ ಈ ರಾಜಕೀಯ ಮಹತ್ವಾಕಾಂಕ್ಷೆಯಿಂದ ಫೆಲಸ್ತೀನಿಯರು ಈಗಲೂ ನರಳುತ್ತಿದ್ದಾರೆ. ಝಿಯೊನಿಸ್ಟ್ ಯಹೂದಿಗಳು ಹಿಟ್ಲರನ ಮೇಲಿನ  ಕೋಪವನ್ನು ಫೆಲಸ್ತೀನಿಯರ ವಿರುದ್ಧ ತೀರಿಸಿ ಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಹಿಟ್ಲರ್ ಸಾವಿನ ಮನೆ ನಿರ್ಮಿಸಿದ್ದ. ಇಂದು ಝಿಯೊ  ನಿಸ್ಟರು ಸಾವಿನ ಮನೆಯನ್ನು ಫೆಲಸ್ತೀನಿಯರಿಗೆ ನಿರ್ಮಿಸಿಕೊಡುತ್ತಿದ್ದಾರೆ. ಜಗತ್ತಿನಲ್ಲಿ ಹಿರಿಯಣ್ಣ ಅಮೆರಿಕ ಇಸ್ರೇಲಿನ ಪರ ನಿಂತ ಇಷ್ಟು ಕಾಲ  ದಲ್ಲಿ ಅದನ್ನು ಅಲ್ಲಾಡಿಸಲು ಯಾವ ಇಂತಿಫಾದ ಹೋರಾಟಕ್ಕೂ ಸಾಧ್ಯವಾಗಿಲ್ಲ. ಅಮೆರಿಕ ಒಂದೆಡೆಗೆ ಫೆಲಸ್ತೀನಿಗೆ ಹಣಕೊಟ್ಟು  ಇನ್ನೊಂದೆಡೆ ಇಸ್ರೇಲಿಗೆ ಶಸ್ತ್ರಾಸ್ತ್ರ ಕೊಟ್ಟು ಸಲಹುತ್ತಿತ್ತು. ಈಗ ಟ್ರಂಪ್ ಬಂದು ಫೆಲಸ್ತೀನಿಗೆ ಅದನ್ನು ಕೊಡಲು ನಿರಾಕರಿ ಸುತ್ತಿದ್ದಾರೆ. ಟ್ರಂಪ್  ಬಂದ ನಂತರ ಇಸ್ರೇಲಿಗೆ ಇನ್ನಷ್ಟು ದರ್ಪ ಬಂತು. ಟ್ರಂಪ್ ಬಂದು ಜೆರುಸಲೇಮನ್ನೇ ಇಸ್ರೇಲಿಗೆ ವಹಿಸಿಕೊಟ್ಟರು ಎಂದ ಮೇಲೆ ಆಕಾಶಕ್ಕೆ  ಮೂರೇ ಗೇಣಿದೆ ಎಂದು ಇಸ್ರೇಲಿಗೆ ಅನಿಸಿದ್ದರೆ ಆಶ್ಚರ್ಯ ಏನಿದೆ. ಫೆಲಸ್ತೀನಿಯರು ಜಗತ್ತಿನ ಘಟಾನುಘಟಿ ನಾಯಕ ರೆಲ್ಲ ಅಗಿ ಸತ್ತು  ಹೋದದ್ದನ್ನು ನೋಡಿ ತಾವು ಸಾಯುತ್ತ ಅಸ್ತಿತ್ವ ಉಳಿಸಿಕೊಂಡಿದ್ದೇ ಹೆಚ್ಚು. ಈಗ ಒಬ್ಬ ಗಾಂಧಿ ಬೇಕಂತೆ ಇಸ್ರೇಲಿನ ಸಮಸ್ಯೆ ಪರಿಹಾರಕ್ಕೆ.  ಗಾಂಧಿಯಿದ್ದಲ್ಲೇ ಗೋಡ್ಸೆ ಇದ್ದದ್ದು. ಗಾಂಧಿ ವಿಚಾರಧಾರೆಗಳಿರುವಲ್ಲಿಯೇ ಆರೆಸ್ಸೆಸ್ ವಿಚಾರಧಾರೆ ಬೆಳೆದು ಇಂದು ಹೆಮ್ಮರವಾಗಿದ್ದು.  ಹಾಗಿದ್ದರೆ ಫೆಲೆಸ್ತೀನಿಯರಿಗೆ ಸ್ವಾತಂತ್ರ್ಯ ಎನ್ನುವುದು ಕೇವಲ ಮರೀಚಿಕೆಯಾಗಿಯೇ ಉಳಿಯಲಿದೆಯೇ? ಅವರ ಈ ನೋವು ಬಾಲ್ಫರನ ¸ ಸಮಾಧಿಗೂ ಬಡಿದಪ್ಪಳಿಸ ದಿರುತ್ತದೆಯೇ?